ಮಾನವ ಮಧ್ಯಪ್ರವೇಶವಿಲ್ಲ: ಸಿಮ್-ಆಧಾರ್ ಲಿಂಕ್ ಸಂಪೂರ್ಣ ಸ್ವಯಂಚಾಲಿತ

ಹೊಸದಿಲ್ಲಿ: ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸಲಾದ ಮತ್ತು ಯಾವುದೇ ಮಾನವ ಮಧ್ಯಪ್ರವೇಶವಿಲ್ಲದ ಪ್ರಕ್ರಿಯೆಯೊಂದರಲ್ಲಿ ಡಿಸೆಂಬರ್ ೧ರಿಂದ ಜನರು ತಮ್ಮ ಸಿಮ್‌ನ್ನು ಆಧಾರ್‌ಗೆ ಲಿಂಕ್ ಮಾಡಲು ಒಂದು ಸಲದ ಪಾಸ್‌ವರ್ಡ್ (ಒಟಿಪಿ) ಒಂದನ್ನು ಪಡೆಯಲು ಟೆಲಿಕಾಂ ಸೇವೆ ಒದಗಣೆದಾರರ (ಟಿಎಸ್‌ಪಿ) ವೆಬ್‌ಸೈಟ್‌ಗಳಿಗೆ ಹೋಗಬೇಕಾಗಿದೆ ಅಥವಾ ಅವುಗಳ ಫೋನ್ ಹೆಲ್ಪ್ ಲೈನ್‌ಗಳಿಗೆ ಕರೆ ಮಾಡಬೇಕಾಗಿದೆ.
ಒಬ್ಬರ ಸಿಮ್‌ನ್ನು ಆಧಾರ್‌ಗೆ ಜೋಡಿಸುವ ಈ ಎರಡು ವಿಧಾನಗಳಿಗೆ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಈಗ ಅನುಮತಿ ನೀಡಿದೆ. ಈ ಮೊದಲು ದೂರ ಸಂಪರ್ಕ ಇಲಾಖೆ (ಡಿಒಟಿ) ಜನರು ಟೆಲಿಕಾಂ ಅಪರೇಟರ್ ನೀಡಿದ ಸಂಖ್ಯೆಯೊಂದಕ್ಕೆ ಎಸ್‌ಎಂಎಸ್ ಕಳುಹಿಸಿ ಒಟಿಪಿ ಮೂಲಕ ಲಿಂಕಿಂಗ್‌ನ್ನು ಮಾಡಬಹುದು ಎಂಬ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ ಅದು ಸುರಕ್ಷಿತವಲ್ಲ ಎಂದು ಯುಐಡಿಎಐ ಭಾವಿಸಿತ್ತಲ್ಲದೆ ಟಿಎಸ್‌ಪಿಗಳ ವೆಬ್‌ಸೈಟ್‌ಗೆ ಲಾಗಿಂಗ್ ಮಾಡುವ ಮೂಲಕ ಅಥವಾ ಅವುಗಳ ಫೋನ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಒಟಿಪಿ ಪಡೆಯುವ ಮೂಲಕ ಲಿಂಕಿಂಗ್ ಮಾಡಬೇಕು ಎಂಬ ಪ್ರಸ್ತಾಪ ಮುಂದಿಟ್ಟಿತ್ತು ಎಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಹೇಳಿದರು. ಆ ಎರಡು ಪ್ರಕ್ರಿಯೆಗಳಲ್ಲಿ ಯಾವುದಾದರೂ ಒಂದನ್ನು ಅನುಸರಿಸಲು ಆಧಾರ್‌ನೊಂದಿಗೆ ಮೊಬೈಲ್ ಸಂಖ್ಯೆಯೊಂದನ್ನು ನೋಂದಣಿ ಮಾಡಬೇಕಾದ ಅಗತ್ಯವಿದೆ. ಅಥವಾ ಆಧಾರ್ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಲು ಮೊದಲು ಆಧಾರ್ ಕೇಂದ್ರವೊಂದಕ್ಕೆ ಭೇಟಿ ನೀಡಬೇಕಾದ ಅಗತ್ಯವಿದೆ.

 

LEAVE A REPLY