ನಿಯಮಕ್ಕೆ ವಿರುದ್ಧವಾದ ಬೌಲಿಂಗ್ : ಪಾಕ್‌ನ ಹಫೀಜ್‌ಗೆ ನಿಷೇಧ

ಕರಾಚಿ: ನಿಯಮಕ್ಕೆ ವಿರುದ್ಧವಾದ ಬೌಲಿಂಗ್ ಶೈಲಿ ಹೊಂದಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಆಲ್ರೌಂಡರ್ ಮಹಮದ್ ಹಫೀಜ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡದಂತೆ ನಿಷೇಧಿಸಲಾಗಿದೆ.
ಅಂತಾರಾಷ್ಟ್ರೀಯ ಪಂದ್ಯದಲ್ಲಿ ಬೌಲಿಂಗ್ ಮಾಡದಂತೆ ಹಫೀಜ್ ಅಮಾನತಿಗೆ ಗುರಿಯಾಗುತ್ತಿರುವುದು ಮೂರು ವರ್ಷದಲ್ಲಿ ಇದು ಮೂರನೇ ಬಾರಿಯಾಗಿದೆ. ಕ್ರಿಕೆಟ್ ವರಿಷ್ಠ ಮಂಡಳಿ ಆಲ್ರೌಂಡರ್‌ನ ಬೌಲಿಂಗ್ ಶೈಲಿ ನಿಯಮಕ್ಕೆ ವಿರುದ್ಧವಾಗಿದೆ ಎಂಬುದನ್ನು ಪತ್ತೆ ಮಾಡಿದೆ.
ಬೌಲರ್‌ನ ಹೆಚ್ಚಿನ ಎಸೆತಗಳು ೧೫ ಡಿಗ್ರಿ ಮಟ್ಟವನ್ನು ದಾಟಿದೆ. ನಿಯಮಗಳ ಪ್ರಕಾರ ಅಲ್ಲಿಯ ತನಕ ಅವಕಾಶವಿದೆ ಎಂದು ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಆದರೆ ಆಟಗಾರ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಬೌಲಿಂಗ್ ಮಾಡಬಹುದು ಎಂದು ಇದೇವೇಳೆ ಸ್ಪಷ್ಟಪಡಿಸಿದೆ. ಆಫ್ ಸ್ಪಿನ್ ಬೌಲರ್ ಆಗಿರುವ ಹಫೀಜ್ ಶೈಲಿ ಕುರಿತಂತೆ ಅ. ೧೮ ಅಬು ಧಾಬಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ವರದಿಯಾಗಿತ್ತು. ನವಂಬರ್ ಒಂದರಂದು ಬೌಲರ್ ಇಂಗ್ಲೆಂಡಿನಲ್ಲಿ ಬೌಲಿಂಗ್ ಅಂದಾಜು ಪರೀಕ್ಷೆ ತೆಗೆದುಕೊಂಡಿದ್ದರು. ಹಿಂದೆ ಅವರನ್ನು ೨೦೧೪ ನವಂಬರ್ ಹಾಗೂ ೨೦೧೫ ರ ಜೂನ್‌ನಲ್ಲಿ ಇದೇಕಾರಣಕ್ಕಾಗಿ ಬೌಲಿಂಗ್ ಮಾಡದಂತೆ ನಿಷೇಧಿಸಲಾಗಿತ್ತು.

LEAVE A REPLY