ಹಣ ಪಡೆದ ಆರೋಪ ಫೀಫಾ ವಿಚಾರಣೆ: ವಕೀಲ ಆತ್ಮಹತ್ಯೆ

ನ್ಯೂಯಾರ್ಕ್: ಹಣ ಪಡೆದ ಆರೋಪವನ್ನು ನ್ಯಾಯಾರ್ಕಿನ ನ್ಯಾಯಾಲಯದಲ್ಲಿ ಎದುರಿಸುತ್ತಿದ್ದ, ಫುಟ್ಬಾಲ್ ಟೆಲಿವಿಜನ್ ಕಾರ್ಯಕ್ರಮದ ಮಾಜಿ ವಕೀಲ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂಯಾರ್ಕಿನ ನ್ಯಾಯಾಲಯ ಅರ್ಜೆಂಟಿನಾದ ಮಾಜಿ ವಕೀಲ ತಪ್ಪಿತಸ್ಥ ಎಂದು ನ್ಯಾಯಾಲಯ ಹೇಳಿದ ಕೆಲವೇ ತಾಸುಗಳಲ್ಲಿ ಆತ ಚಲಿಸುತ್ತಿದ್ದ ಬ್ಯೂಸನ್ ಏರಿಸ್ ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ. ಆತ್ಮಹತ್ಯೆಗೆ ಶರಣಾದವರನ್ನು ಫುಟ್ಬಾಲ್ ಪಾರಾ ಟೊಡೊಸ್ ಕಾರ್ಯಕ್ರಮದ ಅಟಾರ್ನಿ ಜಾರ್ಜ್ ಡೆಲ್ಹನ್ ಎಂದು ಗುರುತಿಸಲಾಗಿದೆ. ೨೦೧೧ ರಿಂದ ೨೦೧೪ ರ ಅವಧಿಯಲ್ಲಿ ಇವರು ಭ್ರಷ್ಟಾಚಾರ ಎಸಗಿದ್ದರು ಎಂದು ಕ್ರೀಡಾ ಮಾರುಕಟ್ಟೆ ಸಂಸ್ಥೆಯೊಂದರ ಮಾಜಿ ಮುಖ್ಯಸ್ಥ ಸಾಕ್ಷಿ ಹೇಳಿದ್ದರು.
ವ್ಯಕ್ತಿಯೊಬ್ಬ ಹಳಿಯ ಪಕ್ಕದಲ್ಲಿ ಓಡುತ್ತಿದ್ದ. ಹಾರ್ನ್ ಮಾಡುವ ಜತೆಗೆ ಬ್ರೇಕ್ ಹಾಕಲೂ ಯತ್ನಿಸಿದೆ. ಆದರೂ ಆತ ರೈಲಿಗೆ ಸಿಕ್ಕಿ ಸಾವನಪ್ಪಿದ ಎಂದು ರೈಲಿನ ಚಾಲಕ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ವಿವರಿಸಿದ್ದಾರೆ.

LEAVE A REPLY