ಕ್ರಿಕೆಟ್ ಆಪರೇಷನ್ಸ್ ಜನರಲ್ ಮ್ಯಾನೇಜರ್ ಹುದ್ದೆ ನೇಮಕಾತಿ: ಪ್ರಶ್ನಿಸಿದ ಬಿಸಿಸಿಐ

ಮುಂಬೈ: ಕ್ರಿಕೆಟ್ ಆಪರೇಷನ್ಸ್ ಜನರಲ್ ಮ್ಯಾನೇಜರ್ ಹುದ್ದೆ (ಬಿಸಿಸಿಐ) ನೇಮಕಾತಿ ಪ್ರಕ್ರಿಯೆ ಸಾಕಷ್ಟು ವಿವಾದ ಸೃಷ್ಟಿಸುವಂತೆ ಕಂಡುಬರುತ್ತಿದೆ.
ಹುದ್ದೆಗೆ ಸಂಬಂಧಿಸಿದಂತೆ ಮಂಡಳಿಯ ಒಂದು ಅಂಶ ಸ್ಪಷ್ಟವಾಗಿ ಹೇಳುವುದು ಅಭ್ಯರ್ಥಿ ಸ್ನಾತಕೋತ್ತರ ಪದವೀಧರ ಆಗಿರಬೇಕು ಎಂಬುದು. ಇದೇ ವಿವಾದದ ಮುಖ್ಯಅಂಶವಾಗಿದೆ. ಇದೇ ಮಂಡಳಿಯಲ್ಲಿ ವಿವಾದಕ್ಕೆ ಕಾರಣವಾಗಿದೆ. ಈ ಮಾನದಂಡವನ್ನು ಅನ್ವಯಿಸಿದರೆ ಹುದ್ದೆಗೆ ಅರ್ಹರಾದ ಅನೇಕರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಅತ್ಯುನ್ನತ್ತ ಮಟ್ಟದಲ್ಲಿ ಆಡುವುದು ಹಾಗೂ ಬುದ್ಧಿವಂತಿಕೆ ಸಾಲದು. ಖ್ಯಾತ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ ಸಹ ಹುದ್ದೆಗೆ ಅರ್ಹರಾಗುವುದಿಲ್ಲ. ಕಾರಣ ಅವರ್‍ಯಾರೂ ಸ್ನಾತಕೋತ್ತರ ಪದವೀಧರರಲ್ಲ. ಇವರೆಲ್ಲ ಭಾರತೀಯ ಕ್ರಿಕೆಟನ್ನು ಮುಂದೊಯ್ಯಬಲ್ಲವರು ಮಾತ್ರ ಎದು ಮಂಡಳಿಯ ಹಿರಿಯ ಅಧಿಕಾರಿ ವಿವರಿಸಿದ್ದಾರೆ.
ಹುದ್ದೆಯ ಅರ್ಹತೆಯನ್ನು ನಿಗಧಿಪಡಿಸಿದವರು ಯಾರು ಎಂಬ ಪ್ರಶ್ನೆ ಮೂಡುತ್ತದೆ. ನೇಮಕಾತಿ ಸಂಬಂಧ ಇದೇ ತಿಂಗಳ ಎರಡರಂದು ನಡೆದ ಸಂದರ್ಶದಲ್ಲಿ ಭಾಗವಹಿಸಿದ್ದ ಮಾಜಿ ವೇಗದ ಬೌಲರ್ ವೆಂಕಟೇಶ ಪ್ರಸಾದ್ ಬಗ್ಗೆ ಸಹ ಅಧಿಕಾರಿ ಪ್ರಶ್ನಿಸಿದ್ದಾರೆ. ಪ್ರಸಾದ್ ಕಿರಿಯರ ತಂಡದ ಮುಖ್ಯ ಆಯ್ಕೆದಾರ. ಅವರು ಹೇಗೆ ಪರೀಕ್ಷೆ ತೆಗೆದುಕೊಂಡರು ಎಂದಿದ್ದಾರೆ.

 

LEAVE A REPLY