ಕರ್ನಾಟಕ ಸರ್ಕಾರದ 100 ಸಿಸಿ ಹೊಸ ನಿಯಮದಿಂದ ಹೀರೋ ಕಂಪನಿಗೆ ಹೆಚ್ಚು ನಷ್ಟ

ಹೊಸದಿಲ್ಲಿ: ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ ದ್ವಿಚಕ್ರವಾಹನ ಉತ್ಪಾದನಾ ಕಂಪನಿಗಳ ಮೇಲೆ ಮಾರಕ ಪರಿಣಾಮ ಬಿದ್ದಿದೆ. ಅದರಲ್ಲೂ ದೇಶದಲ್ಲೇ ಅತಿ ಹೆಚ್ಚು ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಹೀರೋ ಮೋಟೊಕಾರ್ಪ್ ಮೇಲೆ ಹೆಚ್ಚು ಪರಿಣಾಮ ಬೀರಿದೆ.
ದಿಲ್ಲಿ ಮೂಲದ ಹೀರೋ ಕಂಪನಿಯ ಸ್ಪ್ಲೆಂಡರ್, ಸ್ಪ್ಲೆಂಡರ್+, ಪ್ಯಾಷನ್, ಪ್ಯಾಷನ್ ಪ್ರೊ, ಎಚ್‌ಎಫ್ ಡಿಲಕ್ಸ್, ಎಚ್‌ಎಫ್ ಡಿಲಕ್ಸ್ ಇಕೋನಂಥ ಕಡಿಮೆ ಬೆಲೆಯ ಐದು ಮಾದರಿ ಬೈಕ್‌ಗಳು ಹೆಚ್ಚು ಜನಪ್ರಿಯತೆ ಹೊಂದಿದ್ದು, ಇಂತಹ ಸಣ್ಣ ಇಂಜಿನ್‌ನ ಹೊಸ ಬೈಕ್‌ಗಳಲ್ಲಿ ಹಿಂಬದಿ ಸವಾರ ಕೂರುವಂತಿಲ್ಲ. ಹೀಗಾಗಿ ಈ ಮಾದರಿಯ ಬೈಕ್‌ಗಳ ಮಾರಾಟ ಕುಸಿತವಾಗುವ ಸಾಧ್ಯತೆ ಇದೆ. ಹೊಸ ಕಾನೂನಿನ ಪರಿಣಾಮ ಬೈಕ್‌ಗಳ ವಿನ್ಯಾಸವನ್ನೂ ಬದಲಿಸಬೇಕಿದೆ.
ಕರ್ನಾಟಕ ಮೋಟಾರು ವಾಹನ ನಿಯಮಗಳು ೧೯೮೯ರ ಅಡಿಯಲ್ಲಿ ಕರ್ನಾಟಕ ಸಾರಿಗೆ ಇಲಾಖೆ ಅಸೂಚನೆಯೊಂದನ್ನು ಪ್ರಕಟಿಸಿದ್ದು, ೧೦೦ ಸಿಸಿ ಇಂಜಿನ್‌ಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಹಿಂಬದಿ ಸೀಟು ಇರುವಂತಿಲ್ಲ. ಇಂತಹ ಬೈಕ್‌ಗಳಲ್ಲಿ ಸವಾರ ಮಾತ್ರ ಪ್ರಯಾಣಿಸಬಹುದಾಗಿದೆ. ಈ ಹೊಸ ನಿಯಮ ಹಳೆ ದ್ವಿಚಕ್ರ ವಾಹನಗಳಿಗೆ ಅನ್ವಯಿಸುವುದಿಲ್ಲ. ಹೊಸದಾಗಿ ನೋಂದಣಿಯಾಗಿವ ಬೈಕ್‌ಗಳಿಗೆ ಅನ್ವಯಿಸುತ್ತದೆ.
೧೦೦ ಸಿಸಿ ಮತ್ತು ಅದಕ್ಕೂ ಕಡಿಮೆ ಸಾಮರ್ಥ್ಯದ ಬೈಕ್‌ಗಳಿಗೆ ಒಂದೇ ಸೀಟು ಇರಬೇಕು ಎಂದು ಕರ್ನಾಟಕ ಸರ್ಕಾರ ಕಾನೂನೊಂದನ್ನು ಜಾರಿಗೆ ತಂದಿದೆ. ಆದಾಗ್ಯೂ ಅಪಘಾತ ಪ್ರಕರಣವೊಂದರಲ್ಲಿ ಯುವಕನ ಸಾವು ಬಗ್ಗೆ ಹೈಕೋರ್ಟ್ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ದೇಶದಲ್ಲಿ ೧೦೦ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್‌ಗಳನ್ನು ಹೀರೋ ಮೋಟೊಕಾರ್ಪ್ ಮತ್ತು ಟಿವಿಎಸ್ ಮೋಟಾರ್ಸ್ ಉತ್ಪಾದಿಸುತ್ತಿವೆ. ರಾಜ್ಯ ಸರ್ಕಾರದ ಹೊಸ ಕಾನೂನಿನಿಂದ ಈ ಕಂಪನಿಗಳಿಗೆ ನಷ್ಟವಾಗಲಿದೆ.

LEAVE A REPLY