ಬಿಳಿ ಅಂಗಿ, ಬಿಳಿ ಪಂಚೆಯನ್ನೇ ಧರಿಸುವ ಮಗುವಿನಂಥವರು ಇವರು! 

  • ಡಾ. ಕಾತ್ಯಾಯಿನಿ ಕುಂಜಿಬೆಟ್ಟು

ನನ್ನ ಅಪ್ಪ ಇಷ್ಟೆತ್ರನನ್ನ ಅಮ್ಮ ಇಷ್ಟೆತ್ರ ನಾನು ಮಾತ್ರ ಇಷ್ಟೇ ಎತ್ರಯಾಕೋ ಗೊತ್ತಿಲ್ಲಾ !
ಪುಟಾಣಿ ಮಕ್ಕಳೇ, ಈ ಹಾಡನ್ನು ನೀವು ಕೇಳಿರಲೇಬೇಕು ! ಇದನ್ನು ಬರೆದವರಾರು ಎಂದು ನಿಮಗೆ ಗೊತ್ತೇ? ಗೊತ್ತಿಲ್ಲದಿದ್ದರೆ  ನಾನು ಹೇಳುವೆ ಕೇಳಿ, ಪಳಕಳ ಸೀತಾರಾಮ ಭಟ್ಟರು. ಈ ಒಂದು ಕವನವನ್ನು ಮಾತ್ರ ಬರೆದದ್ದಲ್ಲ ಇವರು, ನಿಮಗೆಂದೇ ಸಾವಿರಾರು ಕಥೆಗಳನ್ನು, ಕವನಗಳನ್ನು, ನಾಟಕಗಳನ್ನು, ಜೀವನಚರಿತ್ರೆಗಳನ್ನು ಬರೆದಿzರೆ. ಯಾಕೆ ಗೊತ್ತೇ? ನಿಮ್ಮಂತಹ ಎಳೆಯರೆಂದರೆ ಇವರಿಗೆ ತುಂಬ ಇಷ್ಟ ! ಇವುಗಳನ್ನೆಲ್ಲ ಓದಿ ನಿಮ್ಮ ಹೃದಯ ಹೂವಿನಂತೆ ಖುಷಿಯಿಂದ ಅರಳಬೇಕು ಎಂದು. ಜತೆಗೆ ಒಂದಲ್ಲ ಎರಡಲ್ಲ, ೩೭ ವರ್ಷ ಶಿಕ್ಷಕರಾಗಿ ದುಡಿದಿzರೆ ! ಇವರ ಮಕ್ಕಳ ಪ್ರೀತಿಯನ್ನು ಕಂಡ ಜನ ಇವರನ್ನು ‘ಎಳೆಯರ ಪಳಕಳ’ ಎಂದೇ ನೆನಪಿಸಿಕೊಳ್ಳುತ್ತಾರೆ !ಬಿಳಿ ಅಂಗಿ, ಬಿಳಿ ಪಂಚೆಯನ್ನೇ ಧರಿಸುವ ಇವರ ಕಣ್ಣಲ್ಲಿ ಮಕ್ಕಳೇ ಕಾಣಿಸುತ್ತಾರೆ, ಮಗುವಿನಂಥವರು ಇವರು! ‘ಗಾಂಜಿಯವರ ತತ್ವ’ವನ್ನು ನಂಬುವ ಇವರದ್ದು ಗಾಂನೋಟ! ಅದಕ್ಕೇ , ಹಣವನ್ನು ನೋಟನ್ನು ಎಂದೂ ಲೆಕ್ಕಕ್ಕಿಂತ ಅತಿಯಾಗಿ ಇವರು ಪ್ರೀತಿಸಲೇ ಇಲ್ಲ, ‘ಹಣಕ್ಕಿಂತ ಗುಣ ಮುಖ್ಯ’ ಎಂದವರು. ಬಹಳ ಸರಳವಾಗಿ ಹಳ್ಳಿಯ ಜೀವಿಸುತ್ತಿದ್ದವರು. ತಮ್ಮ ನಿವೃತ್ತಿಕಾಲದ ಗಳಿಕೆಯನ್ನು ‘ಪಳಕಳ ಪ್ರತಿಷ್ಠಾನಕ್ಕೆ’ ನೀಡಿ, ಬಡ ಮಕ್ಕಳ ಶಿಕ್ಷಣಕ್ಕೆ, ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಿದರು. ದೇವರು ಮುದ್ರಿಸಿದ ‘ಜೀವಂತ ಹಣ’ ನಾವು ಮಕ್ಕಳೇ! ಲೋಕದ ಮಾರುಕಟ್ಟೆಯಲ್ಲಿ ಅನ್ಯಾಯ ಮಾಡುತ್ತ ನಾವು ಅನೀತಿಯ ಕಪ್ಪುಹಣವಾಗಬೇಕೇ? ಅ ಪಳಕಳರಂತೆ ಶುದ್ಧವಾಗಿ ಬಾಳಿ ನೀತಿಯ ಬಿಳಿಹಣವಾಗಬೇಕೆ?‘ಪಳಕಳ’ ಎಂದರೆ ಏನೆಂದು ಗೊತ್ತೇ ನಿಮಗೆ ? ಸೀತಾರಾಮ ಭಟ್ಟರು ಹುಟ್ಟಿದ ಊರಿನ ಹೆಸರದು. ಜೈನಕಾಶಿಯೆಂದೇ ಹೆಸರುವಾಸಿಯಾಗಿರುವ ಮೂಡುಬಿದರೆಯ ಪುತ್ತಿಗೆಯ ಮಿತ್ತಬೈಲು ಎಂಬಲ್ಲಿ ‘ಪಳಕಳ’ ಎಂಬ ಪುಟ್ಟ ಗ್ರಾಮವಿದೆ. ಅಲ್ಲಿ ಜುಲೈ ೫, ೧೯೩೦ರಂದು ಈಶ್ವರಭಟ್ಟ- ಲಕ್ಷ್ಮಿಯಮ್ಮ ಎಂಬ ದಂಪತಿಗಳ ಮೊದಲ ಮಗನಾಗಿ ಹುಟ್ಟಿದರು ಸೀತಾರಾಮಭಟ್ಟರು.  ತಾವು ಹುಟ್ಟಿದ ಊರಿಗೆ, ಹೆತ್ತವರಿಗೆ ತಮ್ಮ ಒಳ್ಳೆಯ ಸಾಧನೆಯಿಂದ ಕೀರ್ತಿ ತಂದರು. ಮಕ್ಕಳೇ ನಿಮಗೇ ಗೊತ್ತ? ಒಳ್ಳೆಯ ಕೆಲಸ ಮಾಡುವವರಿಂದ  ಅವರು ಹುಟ್ಟಿದ ಊರಿಗೆ, ಹೆತ್ತವರಿಗೆ ಕೀರ್ತಿ ಬರುತ್ತದೆ, ಲೋಕವು ಅಂತಹ ಸಾಧಕರನ್ನು ಗೌರವದಿಂದ ಕಾಣುತ್ತದೆ. ಆದರೆ ಕೆಟ್ಟ ಕೆಲಸ ಮಾಡುವವರಿಂದ ಹುಟ್ಟಿದ ಊರಿಗೆ, ಹೆತ್ತವರಿಗೆ ಅಪಕೀರ್ತಿ ಅಂದರೆ ಕೆಟ್ಟ ಹೆಸರು ಬರುತ್ತದೆ. ಕೆಟ್ಟವರು ಕಳ್ಳತನ , ಹಿಂಸೆ ಅಪರಾಧ ಮಾಡಿ ಪತ್ರಿಕೆಗಳಲ್ಲಿ ಸ್ಲೇಟು ಹಿಡಿದುಕೊಂಡು ಕುಳಿತು ಕೆಟ್ಟ ಸುದ್ದಿಯಾಗುತ್ತಾರೆ. ಚೀ! ಕೊಳಕ್ಕು! ಅಲ್ವಾ ? ಪಳಕಳರ ಅಪ್ಪಯ್ಯ ಕೃಷಿಕರು, ತಮ್ಮ ಐದೂ ಮಕ್ಕಳಿಗೂ ರಾಮಾಯಣ , ಮಹಾಭಾರತ ಓದಿ ಹೇಳುತ್ತಿದ್ದರಂತೆ. ಅವರ ಅಮ್ಮ ಶಾಲೆ ಕಲಿತವರೇ ಅಲ್ಲ, ಆದರೆ ಮಕ್ಕಳು ಕಲಿಯಬೇಕು ಎಂಬ ಆಸೆಯಿತ್ತಂತೆ. ಚಿಕ್ಕಪ್ಪ- ಚಿಕ್ಕಮ್ಮ, ದೊಡ್ಡಪ್ಪ- ದೊಡ್ಡಮ್ಮ, ಅತ್ತೆ-ಮಾವ… ಹೀಗೆ ದೊಡ್ಡ ಕುಟುಂಬ!  ತೋಟ, ಗz, ಕೊಟ್ಟಿಗೆ, ಜನುವಾರು… ಹಳ್ಳಿಮನೆ ಹೇಗಿರುತ್ತೆ ಎಂದು ಗೊತ್ತಲ್ಲ ನಿಮಗೆ? ಬಡತನವನ್ನೇ ಹಾಸಿ ಹೊದ್ದು ಮಲಗುತ್ತಿದ್ದರು! ಆದರೆ ಅವರು ಹೊದ್ದ ಹರಿದ ಚಾದರದ ತೂತುಗಳಲ್ಲಿ  ಇಣುಕುತ್ತಿದ್ದ  ನಕ್ಷತ್ರಗಳು, ಚಂದಕ್ಕಿ ಮಾಮ, ಕನಸುಗಳು…; ಇರುವೆ, ಅಳಿಲು, ಹೇನು, ಆನೆ, ಬೆಕ್ಕು, ನಾಯಿ, ಮೊಲ, ಮಂಗ…; ಗೆಳೆಯರೊಂದಿಗೆ ಕಡಲಕೆರೆ ಶಾಲೆಗೆ ಕುಣಿಯುತ್ತ ನಡೆಯುತ್ತಿzಗ ನೋಡುತ್ತಿದ್ದ ಹಸಿರು ಗಿಡಮರಬಳ್ಳಿಗಳು, ನೀರು, ನೀಲಿ ಆಗಸ…; ಶಾಲೆಯಲ್ಲಿ  ಮೇಷ್ಟ್ರು ನಟನೆ ಮಾಡುತ್ತ ಹೇಳುತ್ತಿದ್ದ ಪಂಜೆ ಮಂಗೇಶರಾಯರ ಕಥೆಗಳು ಹಾಗೂ ಜಿ.ಪಿ ರಾಜರತ್ನಂ ಅವರ ಪದ್ಯಗಳು; ರಾತ್ರಿ ಸೋದರತ್ತೆ ಚೆನ್ನಕ್ಕ ಹೇಳುತ್ತಿದ್ದ ಜನಪದ, ಪೌರಾಣಿಕ ಕಥೆಗಳು…ಮೋಡಿ ಮಾಡುತ್ತಿದ್ದವು. ಇವೆಲ್ಲದರ ಪ್ರಭಾವದಿಂದ ಮೂಡುಬಿದರೆ ಜೈನ್ ಹೈಸ್ಕೂಲಲ್ಲಿ ಎಂಟನೇ ತರಗತಿಯಲ್ಲಿ ಓದುವಾಗ ಶಾಲೆಯ ಹಸ್ತಪತ್ರಿಕೆಗೆ ‘ಹೊಟ್ಟೆ ನೋವಿನ ಭೂತ’ ಎಂಬ ಕಥೆ ಬರೆದರು. ಆಮೇಲೆ ರಾ.ಮೋ. ವಿಶ್ವಾಮಿತ್ರ ಎಂಬ ಗುರುಗಳ ಸಲಹೆಯಂತೆ ಕಥೆ,ಕವನ ಬರೆದು ಪತ್ರಿಕೆಗಳಿಗೆ ಕಳಿಸತೊಡಗಿದರು. ಅಂದಿನಿಂದ ಮೊನ್ನೆ ಅವರು ತೀರಿಹೋಗುವವರೆಗೂ ಚಂದಮಾಮ, ಬಾಲಮಿತ್ರ, ತರಂಗ, ತುಷಾರ, ಕಸ್ತೂರಿ, ಬಾಲಮಂಗಳ, ತುಂತುರು…ನಾಡಿನ ಪತ್ರಿಕೆಗಳಲ್ಲ ಇವರ ಬರಹಗಳು ಪ್ರಕಟವಾಗಿವೆ.ಇವರು ಮಕ್ಕಳ ಖುಷಿಗೆಂದೇ ಬರೆದ ಮೊದಲ ಮೂರು ಪುಸ್ತಕಗಳು ‘ಚಿಣ್ಣರ ಹಾಡು, ಕಿರಿಯರ ಕಿನ್ನರಿ ಮತ್ತು ಮಕ್ಕಳ ಮುದ್ದು.’ಈ ಮೂರು ಪುಸ್ತಕಗಳಿಗೂ ೧೯೫೫ರಲ್ಲಿ ಮದ್ರಾಸ್ ಸರಕಾರದ ಮಕ್ಕಳ ಸಾಹಿತ್ಯ ಪುಸ್ತಕ ಬಹುಮಾನ ಬಂತು. ಅಲ್ಲಿಂದ ಹಿಡಿದು ತಮ್ಮ ೮೬ ವರ್ಷದ ವಯಸ್ಸಿನವರೆಗೂ ೧೫೦ ಪುಸ್ತಕಗಳನ್ನು ಬರೆದಿzರೆ. ೨೦೧೩ರ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಪುರಸ್ಕಾರ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಪಡೆದಿzರೆ.ಕಾಲಿಗೆ ಗೆಜ್ಜೆ ಕಟ್ಟಿಕೊಂಡಂತೆ ಕುಣಿಯುತ್ತಲೇ ಇರುವ ನಲಿವಿನ ನವಿಲುಗಳೇ, ಬೆನ್ನಿಗೆ ರೆಕ್ಕೆ ಕಟ್ಟಿಕೊಂಡಂತೆ ಹಾರುತ್ತಲೇ ಇರುವ ಬಣ್ಣದ ಚಿಟ್ಟೆಗಳೇ, ನಾಲಗೆಗೆ ಒಂದು ಗಳಿಗೆಯೂ ರಜೆ ಕೊಡದೆ ಪಟಪಟನೆ ಅರಳು ಸಿಡಿದಂತೆ ಮಾತಾಡುತ್ತಲೇ ಇರುವ ಮಾತಿನಮಲ್ಲಿಗೆಗಳೇ, ಗುಮ್ಮಹಕ್ಕಿಯಂತೆ ಬಟ್ಟಲುಗಣ್ಣು ಪಿಳಿಪಿಳಿ ಬಿಡುತ್ತ ಕಣ್ಣ ಗುಳುಂ ನುಂಗಿಬಿಡುವ ಮುದ್ದು ಗುಮ್ಮನಗುಸ್ಕಿಗಳೇ…ತಂಟೆ ಮರೆಸಿ, ನಿಮ್ಮ ಗಮನವನ್ನು ಸೂಜಿಗಲ್ಲಂತೆ ಸೆಳೆದುಹಿಡಿಯಲೆಂದೇ ಹಿಂದೆ ನಿಮ್ಮ ಅಜ್ಜ- ಅಜ್ಜಿ , ಅಪ್ಪ-ಅಮ್ಮ, ಶಿಕ್ಷಕರು ತುಂಬ ಕಥೆ ಹೇಳುತ್ತಿದ್ದರು. ಬಹಳ ಹಿಂದೆ ಹೊಟ್ಟೆಗೂ ಗತಿಯಿಲ್ಲದ ಹೆತ್ತವರು ಮಕ್ಕಳ ಹಸಿವು ಮರೆಸಲು ಕಥೆ ಹೇಳುತ್ತಿದ್ದರಂತೆ ! ಪಾಪ ಅಲ್ವಾ? ಅಜ್ಜ , ಏಳು ತಲೆಯ ರಕ್ಕಸ ರಾಜಕುಮಾರಿಯನ್ನು ಆಗಸದಲ್ಲಿ ಹೊತ್ತೊಯ್ದ ಕಥೆಯನ್ನು ಹೇಳುವಾಗ ಮುಂದೆ ಕುಳಿತು ಕೇಳುತ್ತಿದ್ದರು ಮಕ್ಕಳು! ಆಗ ಒಂದೊಂದು ಮಗುವಿನ ಕಣ್ಣ ಮುಂದೆ ಅವರದ್ದೇ ಕಲ್ಪನೆಯ ಏಳುತಲೆಯ ರಕ್ಕಸ ಕೋರೆಹಲ್ಲು ಬಿಟ್ಟು ಬೋಳೆಕಣ್ಣಲ್ಲಿ ‘ವ್ಯಾ!’ ಎನ್ನುತ್ತಿದ್ದ. ಕೆಳಗೆ ನದಿ, ತೇಲುವ ದೋಣಿ, ನದಿಯಲ್ಲಿ ಕಾಣುವ ಚಂದ್ರನ ಪ್ರತಿಬಿಂಬ, ರಾಜಕುಮಾರಿ…ಬಣ್ಣದ ಚಿತ್ರಗಳು! ಚಂದಮಾಮ ಪುಸ್ತಕದಲ್ಲಿ ನೋಡಿಲ್ವಾ ನೀವು ?ಹಾಗೆ! ಚಂದ ಅಲ್ವಾ? ಅದಕ್ಕೇ ಕತೆ ಕೇಳಿ ಬೆಳೆಯುವ ಮಕ್ಕಳು ಚಿತ್ರಗಾರರೋ, ಬರಹಗಾರರೋ, ನಾಟಕಕಾರರೋ, ಕಲಾವಿದರೋ… ಏನೋ ಒಂದು ಆಗುತ್ತಾರೆ.ಅವರಲ್ಲಿ ಹೊಸ ಹೊಸ ಕಲ್ಪನೆಗಳು ಹುಟ್ಟುತ್ತವೆ. ಅದಕ್ಕೇ ಪಳಕಳರ, ಪಂಜೆ ಮಂಗೇಶರಾಯರ, ಕುವೆಂಪು , ಡಾ.ಶಿವರಾಮ ಕಾರಂತ… ಮುಂತಾದವರು ನಿಮಗೆಂದೇ ಬರೆದ ಕತೆಗಳನ್ನು , ಕವನಗಳನ್ನು , ಜೀವನಚರಿತ್ರೆಗಳನ್ನು, ನಾಟಕಗಳನ್ನು ಓದಿ ಮಕ್ಕಳೇ.ಹಾ! ನಾಟಕ ಎಂದಾಗ ನೆನಪಾಯಿತು ನೋಡಿ ! ನಾವು ಹುಟ್ಟುವಾಗಲೇ ನಟನೆಯೂ ಹುಟ್ಟುತ್ತದೆ. ಮಾತು ಕಲಿಯದ ನಿಮ್ಮ ಮನೆಯ ಪುಟ್ಟ ಪಾಪು ಕೈಕಾಲು ಕುಣಿಸುತ್ತ, ಬಾಯ ಬ್ರೂಂ… ಎಂದು ಬಸ್ಸು ಬಿಡುತ್ತ  ಸುಳ್ಳುಸುಳ್ಳೇ ಅತ್ತು , ನಕ್ಕು ಅಮ್ಮನನ್ನು ಕರೆಯುದನ್ನು ನೋಡಿಲ್ವ ನೀವು? ನೀವು ಮಾತಾಡುವಾಗ ನಿಮ್ಮ ಕೈ ಕಾಲು ಮುಖ ಕಣ್ಣು ಮೂಗು ಕಿವಿ… ಇಡೀ ದೇಹವೇ ಮಾತಾಡುವುದನ್ನು ಒಮ್ಮೆ ಕನ್ನಡಿಯಲ್ಲಿ ನೋಡಿಯಂತೆ! ನಿಮ್ಮ ಅಮ್ಮನನ್ನು ನೋಡಿ ನೀವು ಸಹ ಆಟದಲ್ಲಿ ‘ತೊಟ್ಟಿಲು ತೂಗುವ ಅಮ್ಮ’ ಆಗುತ್ತೀರಿ, ಮದುವೆ ನೋಡಿಬಂದು ಮನೆಯಲ್ಲಿ ‘ಗೊಂಬೆಗಳಿಗೆ ಮದುವೆ’ ಮಾಡುತ್ತೀರಿ, ವೈದ್ಯರನ್ನು ನೋಡಿ ಬಂದು ‘ಚುಚ್ಚುಮದ್ದು ಚುಚ್ಚಿ ಮದ್ದು’ಕೊಡುತ್ತೀರಿ, ಟೀಚರ್, ಕಂಡೆಕ್ಟರ್, ಪೋಲಿಸ್, ಡ್ರೈವೆರ್ ಎಲ್ಲ ಆಗುತ್ತೀರಿ. ಟಿಕೆಟ್ ಬೇಡ ದುಡ್ಡು ಬೇಡ, ಎಣಿಸಿದ ಕೂಡಲೆ ೞದೆಲ್ಲಿಗೂ ಹೋಗಿ ಬರ್ತೀರಿೞ ಕಲ್ಪನೆಯ! ಅಕ್ಕನ ಫ್ರಾಕ್ ಉಲ್ಟ ಹಾಕಿ ೞಶಿವಾಜಿೞಯೂ ಆಗ್ತೀರಿ! ನೀವಾಡುವ ಆಟಗಳೆಲ್ಲವೂ ನಾಟಕವೇ ಅಲ್ವಾ?ಚಾಣಕ್ಯನು ರಾಜನ ಆಟ ಆಡುತ್ತಿದ್ದ ಚಂದ್ರಗುಪ್ತ ಮರ್ಯನನ್ನು  ನೋಡಿದನಂತೆ, ಅವನಿಗೆ ತರಬೇತಿ ನೀಡಿ ನಂದರನ್ನು ಗೆದ್ದು ಮುಂದೆ ಆತನನ್ನೇ ರಾಜ ಮಾಡಿದನಂತೆ! ಪಳಕಳರು ಚಿಕ್ಕ ಇರುವಾಗ ಯಾವಾಗಲೂ ೞಟೀಚರಾಟೞ ಆಡುತ್ತಿದ್ದರಂತೆ! ಅದಕ್ಕೇ ಅವರು ಟೀಚರಾದರು! ಈಗ ನಿಮ್ಮ ನಾಟಕದ ಆಟಗಳಲ್ಲಿ ಪಾತ್ರಧಾರಿಗಳಾಗುತ್ತೀರಿ, ಮುಂದೆ ಬದುಕಿನ ಆಟದಲ್ಲಿ ನಿಜ ಪಾತ್ರ ಮಾಡುತ್ತೀರಿ! ಪಳಕಳರ ನಾಟಕಗಳನ್ನು ಓದಿ ಶಾಲೆಯ ವೇದಿಕೆಯಲ್ಲಿ ನಟಿಸಿ! ನೀವು ಧೈರ್ಯವಂತರಾಗುತ್ತೀರಿ!ಮುದ್ದು ಗುಬ್ಬಚ್ಚಿಗಳೇ, ರಸ್ತೆಯಲ್ಲಿ ಒಂದು ನಾಯಿಮರಿ ಅಳುತ್ತಿದ್ದರೆ,  ‘ಅಮ್ಮಾ, ಇದನ್ನು ಮನೆಗೆ ತಕೊಂಡು ಹೋಗುವಾ ಪಾಪ! ಅದಕ್ಕೆ ಅಮ್ಮ ಇಲ್ಲ ! ’ ಎಂದು ಅಳುವ  ನೀವೆಷ್ಟು ಒಳ್ಳೆಯವರು! ಹೃದಯವಂತರು!  ನಿಮ್ಮಿಂದ ನಾವು ದೊಡ್ಡವರು ತುಂಬಾ ಕಲಿಯಲಿದೆ! ದೊಡ್ಡವರಾಗುತ್ತ ನಿಮ್ಮ ಒಳ್ಳೆಯತನ ಕಮ್ಮಿಯಾಗಬಾರದ? ಅದಕ್ಕೇ ಒಳ್ಳೆಯ ಪುಸ್ತಕ ಓದಿ, ಚಂದದ ಮಧುರವಾದ ಸಂಗೀತ ಕೇಳಿ, ಚಿತ್ರ, ಶಿಲ್ಪ, ವಾಸ್ತುಶಿಲ್ಪ, ನಾಟಕ, ನೃತ್ಯದಂತಹ ಲಲಿತಕಲೆಗಳನ್ನು ಎದೆಯ ನಾಲಗೆಯಲ್ಲಿ ಸವಿಯಿರಿ. ನಿಮ್ಮ ಕಣ್ಣು, ಕಿವಿ, ಮೂಗು, ನಾಲಗೆ, ಚುರುಕಾಗಬೇಕೂಂತಲೇ, ನಿಮಗೆ ಚಂದದ ಕುರಿತು ಪ್ರೀತಿ ಹುಟ್ಟಬೇಕೂಂತಲೇ  ನಿಮ್ಮ ಅಜ್ಜಿ ಎಣ್ಣೆ ತಿಕ್ಕಿ ಮೀಯಿಸಿ, ಜೋಗುಳ ಹಾಡಿ, ಅಂಬಾಬೂಚಿ ಚಂದಕ್ಕಿಮಾಮನನ್ನು ತೋರಿಸುತ್ತ, ಕತೆ ಪದ್ಯ ಹೇಳುತ್ತ ನಿಮ್ಮ ದೇಹ ಮತ್ತು ಮನಸ್ಸಿಗೆ ಚಂದ ರೂಪ ಕೊಟ್ಟಿzಳೆ. ಅದನ್ನು ತಿದ್ದಿ ತೀಡಿ ಇನ್ನಷ್ಟು ಚಂದ ಮಾಡಿಕೊಳ್ಳಿ! ಮೊನ್ನೆ ಮೊನ್ನೆ ಪಳಕಳರು  ದೇವರ ಲೋಕಕ್ಕೆ  ಹೋದರು. ಆಗ ಇವರ ಪತ್ನಿ ಯಶೋದಾ ಹಾಗೂ ಐವರು ಮಕ್ಕಳು ಮಾತ್ರ ಅಲ್ಲ ದೇಶ ವಿದೇಶಗಳಲ್ಲಿ ನೆಲೆಸಿರುವ ಅಭಿಮಾನಿಗಳೆಲ್ಲರೂ ಅವರ ಮೇಲೆ ದುಃಖದ ಕಂಬನಿ ಹೂಮಾಲೆಗಳನ್ನೇ ಸುರಿಸಿದರು. ‘ಒಳ್ಳೆಯವರು ಗತಿಸಿದ ನಂತರ ನಕ್ಷತ್ರವಾಗುತ್ತಾರಂತೆ!’ ಮುದ್ದು ಮಕ್ಕಳೇ,ನೀವು ಪಳಕಳರಕವನಗಳನ್ನು ಹಾಡಿ ಕುಣಿದಾಗೆಲ್ಲ ಪಳಕಳರು ಮತ್ತೆ ಮತ್ತೆ ಜೀವ ಪಡೆದು ಫಳಫಳ ಹೊಳೆಯುತ್ತಾರೆ ನಿಮ್ಮ ಕಂಗಳಲ್ಲಿ! ಒಳ್ಳೆಯವರು, ಸಾಧಕರು ಸತ್ತ ನಂತರವೂ ಬದುಕುತ್ತಲೇ ಇರುತ್ತಾರ ನಮ್ಮ ಹೃದಯಗಳಲ್ಲಿ!

LEAVE A REPLY