ಮಾಂಸ ಸೇವನೆ ವಿಶ್ವದ ಅತ್ಯಂತ ಅಮೂಲ್ಯ ಪ್ರದೇಶ ಹಿಮಾಲಯ, ಕೋಂಗೊಗೆ ಮಾರಕ

ಮಾಂಸ ಸೇವನೆ ಮಾಡುವುದರಿಂದ ವಿಶ್ವದ ಅತ್ಯಂತ ಅಮೂಲ್ಯ ಪ್ರದೇಶಗಳು ಹಾಳಾಗುತ್ತಿವೆ ಎಂದು ವಿಶ್ವ ವನ್ಯ ಜೀವಿ ನಿ (ಡಬ್ಲ್ಯುಡಬ್ಲ್ಯುಎಫ್) ವರದಿ ಮಾಡಿದೆ. ಮಾಂಸ ಮತ್ತು ಡೈರಿ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿರುವ ಪಾಶ್ಚಾತ್ಯ ಆಹಾರ ಪದ್ಧತಿಯ ಜನಪ್ರಿಯತೆ ಹೆಚ್ಚುತ್ತಿದೆ. ಕೇವಲ ಪೋಷಕಾಂಶಗಳ ಅಗತ್ಯವನ್ನು ಈಡೇರಿಸಲಷ್ಟೆ ಪ್ರಾಣಿಜನ್ಯ ಉತ್ಪನ್ನಗಳ ಜಾಗತಿಕ ಬಳಕೆಯನ್ನು ತಗ್ಗಿಸಿದಲ್ಲಿ ಐರೋಪ್ಯ ಒಕ್ಕೂಟದ ೧.೫ ಪಾಲಿನಷ್ಟು ಗಾತ್ರದ ಭೂಪ್ರದೇಶವನ್ನು ಉಳಿಸಬಹುದು ಎಂದು ವರದಿ ಹೇಳಿದೆ.
ಪ್ರಾಣಿಜನ್ಯ ಉತ್ಪನ್ನಗಳ ಸೇವನೆಯಿಂದಾಗಿ ಪ್ರಾಣಿಗಳ ಮೇವು ಉತ್ಪಾದಿಸಲು ಅಗಾಧ ಪ್ರಮಾಣದ ಭೂಪ್ರದೇಶವನ್ನು ಬಳಸುವಂತಾಗುತ್ತದೆ. ಇದರಿಂದಾಗಿ ಅಮೆಜಾನ್, ಕೊಂಗೊ ಜಲಾನಯನ ಪ್ರದೇಶ ಮತ್ತು ಹಿಮಾಲಯ ಪ್ರದೇಶ ಸಹಿತ ನೀರು ಮತ್ತು ಭೂ ಸಂಪನ್ಮೂಲ ಈಗಾಗಲೇ ಗಣನೀಯ ಒತ್ತಡಕ್ಕೆ ಸಿಲುಕಿರುವ ಪ್ರದೇಶಗಳಿಗೆ ಅಪಾಯ ತಟ್ಟುತ್ತಿದೆ ಎಂದು ವರದಿ ಎಚ್ಚರಿಸಿದೆ.
ಮಿತಿ ಮೀರಿ ಪ್ರಾಣಿಜನ್ಯ ಉತ್ಪನ್ನಗಳ ಸೇವನೆಯು ಶೇ. ೬೦ರಷ್ಟು ಎಲ್ಲಾ ಜೀವ ವೈವಿಧ್ಯಗಳ ನಾಶಕ್ಕೆ ಕಾರಣವಾಗಿದೆ. ಬ್ರಿಟನ್ ಆಹಾರ ಉದ್ಯಮವೊಂದೇ ಅಂದಾಜು ೩೩ ಜೀವಿಗಳ ಅಳಿವಿಗೆ ನೇರ ಹೊಣೆಯಾಗಿದೆ. ಜಗತ್ತು ಅಗತ್ಯಕ್ಕಿಂತ ಹೆಚ್ಚು ಪ್ರಾಣಿ ಪ್ರೊಟೀನ್ ಸೇವನೆ ಮಾಡುತ್ತಿದೆ. ಇದು ವನ್ಯ ಜೀವಿಗಳ ಮೇಲೆ ವಿನಾಶಕ ಪರಿಣಾಮ ಬೀರುತ್ತದೆ ಎಂದು ಡಬ್ಲ್ಯುಡಬ್ಲ್ಯುಎಫ್ ಆಹಾರ ನೀತಿಯ ಮ್ಯಾನೇಜರ್ ಡಂಕನ್ ವಿಲಿಯಮ್ಸನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

LEAVE A REPLY