ಕೊಡಗು ಜಿಲ್ಲೆಯ ಮಲ್ಲಳ್ಳಿ ಜಲಪಾತವೆಂಬ ಜಲಲ ಜಲಲ ಜಲ ಧಾರೆ!

  • ಕವಿತಾ ಎಂ.ಎಲ್, ಪತ್ರಿಕೋದ್ಯಮ ವಿಭಾಗ, ವಿವೇಕಾನಂದ ಕಾಲೇಜು ಪುತ್ತೂರು
    ಮಲ್ಲಳ್ಳಿ ಜಲಪಾತವು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿದೆ .ಈ ಜಲಪಾತವು ಕುಮಾರಧಾರಾ ನದಿಯ ಮುಖ್ಯ ಜಲ ಪ್ರದೇಶವಾಗಿದೆ. ಕುಮಾರಧಾರಾ ನದಿಯು ನಂತರ ಕುಕ್ಕೆ ಸುಬ್ರಹ್ಮಣ್ಯದ ಮೂಲಕ ಹರಿಯುತ್ತದೆ. ಉಪ್ಪಿನಂಗಡಿಯಲ್ಲಿನ ನೇತ್ರಾವತಿ ನದಿಯೊಂದಿಗೆ ವಿಲೀನಗೊಳ್ಳುತ್ತದೆ .ಆನಂತರ ಮಂಗಳೂರಿನ ಅರಬ್ಬಿ ಸಮುದ್ರದೊಳಗೆ ಸೇರುತ್ತದೆ. ವರ್ಷಧಾರೆಯ ವೈಭವ, ನಿಸರ್ಗ ಸೌಂದರ್ಯದ ಸೊಬಗು ಸವಿಯಲು ನಾನು ನನ್ನ ಸ್ನೇಹಿತರು ಮಲ್ಲಲ್ಲಿ ಜಲಪಾತವನ್ನು ನೋಡಲು ಚಾರಣಕ್ಕೆ ಹೊರಟೆವು. ಆ ಜಲಪಾತದ ಜಲಧಾರೆಯದೃಶ್ಯ ವೈಭವ ಅತ್ಯುದ್ಭುತ. ಸುತ್ತಲೂ ಗಗನ ತುಂಬಿದ ಬೃಹತ್ ಬಂಡೆಯ ಮೇಲೆ ನಿಂತು ನೋಡಿದಾಗ ತಳಭಾಗದಲ್ಲಿ ಮುಂಗಾರಿನ ಹನಿಗಳು ಧರೆಗಿಳಿಯುವ ಸಂಭ್ರಮದ ಜತೆಗೆ ಭೋರ್ಗರೆಯುವ ಜಲಧಾರೆಗಳ ಸೊಬಗು ಮೈಸೆಳೆದು ನಿಂತಿರುತ್ತದೆ. ನಿತ್ಯ ಹರಿದ್ವರ್ಣದ ಕಾನನದಲ್ಲಿ ಮುಗಿಲೆತ್ತರದ ಬೆಟ್ಟಗಳಿಂದ ಪ್ರಪಾತಕ್ಕೆ ಬೆಳ್ನೊರೆಯ ರಾಶಿ ಧುಮುಕುವ ಸೊಬಗನ್ನು ನೋಡುವಾಗ ಪರಮಾನಂದದಲ್ಲಿ ತೇಲಾಡಿದೆವು. ಈ ವರ್ಷವಂತೂ ಹೆಚ್ಚು ಮಳೆ ಸುರಿದಕಾರಣ ಮಲ್ಲಲ್ಲಿಗೆ ಸ್ವರ್ಗದ ಮೆರುಗು ಬಂದರೀತಿ ಭಾಸವಾಗುತ್ತದೆ. ಜಲಧಾರೆಯ ಲೀಲೆಗಳ ಜತೆಗೆ ಸುತ್ತಲ ಪರಿಸರಕ್ಕೆಹೊದ್ದು ನಿಂತ ಹಚ್ಚ ಹಸುರಿನ ಸ್ವಚ್ಚಂದ ಪ್ರದೇಶ, ಹಕ್ಕಿಗಳ ಚಿಲಿಪಿಲಿ ನಿನಾದ, ನಮ್ಮ ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸಿತ್ತು. ನಮ್ಮಂತಹ ಪ್ರಕೃತಿಯ ಆರಾಧಕರು ಚಾರಣ ಪ್ರಿಯರಿಗೆ ಇದು ಅಕ್ಷರಶಃ ಸ್ವರ್ಗದಂತ ಜಾಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೊಡಗಿನಲ್ಲಿದಾರಿ ಮಧ್ಯೆ ಸಾಗುವಾಗ ಹಲವು ತೊರೆಗಳು ಸಣ್ಣ -ಸಣ್ಣ ಜಲಪಾತಗಳು ಸಿಗುತ್ತದೆ.ಆದರೆ ಮಲ್ಲಲ್ಲಿ ಜಲಪಾತವಂತು ನಮ್ಮೆಲ್ಲರ ಮನಸ್ಸಿನ ಮೇಲೆ ಪ್ರಭಾವ ಬೀರಿದಷ್ಟು ಬೇರೆಯಾವ ಜಲಪಾತವುಪ್ರಭಾವ ಬೀರಿಲ್ಲ ೬೦೦ ಅಡಿ ಎತ್ತರದಿಂದ ಹರಿದು ಬರುವ ನೀರಿನ ರಾಶಿ ವೈಭವ ಮೆರೆಯುವಕೊಡಗುಜಿಲ್ಲೆಗೆ ಮಲ್ಲಲ್ಲಿ ಜಲಪಾತವು ಒಂದು ಕೀರಿಟವಿದ್ದಂತೆ !!! ಕಾಣುತ್ತದೆ.ಜುಲೈ-ಅಗಸ್ಟ್ ತಿಂಗಳಲ್ಲಿ ಮೈದಾಳಿ ಮೆರೆಯುತ್ತದೆ. ಆದರೆಎಪ್ರಿಲ್-ಮೇ ತಿಂಗಳಲ್ಲಿ ಸೊರಗಿ ಹೋಗುತ್ತದೆ. ಇಲ್ಲಿ ದೊಡ್ಡ ತ್ರಾಸದಯಕ ವಿಷಯವೇನೆಂದರೆ ಮೆಟ್ಟಲುಗಳನ್ನು ಹತ್ತಿಕೊಂಡು ಹೋಗಿ ಜಲಪಾತವನ್ನು ವೀಕ್ಷಣೆ ಮಾಡಿ ಬರಬೇಕು. ಮೆಟ್ಟಲುಗಳನ್ನು ಹತ್ತಿಕೊಂಡು ನಂತರ ಇಳಿಯುವುದು ವಯಸ್ಕರಿಗೆ ಜಲಪಾತದ ಸೊಬಗು ನೋಡಬೇಕೆಂದು ಪಟ್ಟುಹಿಡಿದು ಹರಸಾಹಸ ಪಡುವದೃಶ್ಯ ನೋಡಲು ತುಂಬ ಮಜವಾಗಿತ್ತು. ಅಣೆಕಟ್ಟು ಸನಿಹದಲ್ಲಿ ಇದ ಕಾರಣ ದರ್ಶನ ಅಷ್ಟು ಸುಲಭವಾಗಿ ದೊರೆಯುವುದಿಲ್ಲ.

LEAVE A REPLY