ಅರಮನೆಯಲ್ಲಿ ಮೈನವಿರೇಳಿಸಿದ ಜಗಜಟ್ಟಿಗಳ ಕಾಳಗ… ಕಾಳಗ ವೀಕ್ಷಿಸಿದ ಅತ್ತೆ-ಸೊಸೆ

ಮೈಸೂರು: ವಿಶ್ವ ವಿಖ್ಯಾತ ಅಂಬಾವಿಲಾಸ ಅರಮನೆಯಲ್ಲಿ ಶನಿವಾರ ಬೆಳಗ್ಗೆ ಮೈನವಿರೇಳಿಸುವ ರೋಚಕವಾದ ವಜ್ರಮುಷ್ಠಿ ಕಾಳಗ ನಡೆಯಿತು. ಸವಾರಿ ತೊಟ್ಟಿಯಲ್ಲಿ ಮಧ್ಯಾಹ್ನ ೧೨.೧೩ ನಿಮಿಷಕ್ಕೆ ಆರಂಭವಾದ ವಜ್ರ ಮುಷ್ಟಿ ಕಾಳಗದಲ್ಲಿ ಸಮಾರು ಒಂದು ನಿಮಿಷಗಳ ಕಾಲ ಪರಸ್ಪರ ಇಬ್ಬರು ಜಟ್ಟಿಗಳ ನಾಲ್ಕು ಮಂದಿ ಕಾಳಗಕ್ಕಿಳಿದು ಹೊಡೆದಾಡಿಕೊಂಡು ನೋಡುಗರನ್ನು ಹುಬ್ಬೇರುವಂತೆ ಮಾಡಿದರು. ಮೈಸೂರಿನ ಅಶೋಕ್ ಕುಮಾರ್ ಹಾಗೂ ಅನಿಲ್ ಕುಮಾರ್ ಚೆನ್ನಪಟ್ಟಣ ನಡುವೆ ಒಂದು ಜೋಡಿ ಸೆಣಸಾಡಿದರೆ, ಮತ್ತೊಂದು ಜೋಡಿಯಾಗಿ ಚಾಮರಾಜನಗರ, ತಿರುಮಲೇಶ- ಬೆಂಗಳೂರು ಗುರು ಪ್ರಸಾದ್ ನಡುವೆ ರೋಚಕ ವಜ್ರ ಮುಷ್ಟಿ ಕಾಳ ನಡೆಯಿತು. ಆನೆ ದಂತದಿಂದ ಮಾಡಿದ ನಖನವನ್ನು ಅಂಗೈಯ ಮುಷ್ಠಿಯಲ್ಲಿ ಹಿಡಿದುಕೊಂಡು ವೀರಾವೇಶದಿಂದ ಕಾಳಗ ನಡೆಸಿದರು. ಎದುರಾಳಿಯ ದೇಹದಲ್ಲಿ ರಕ್ತ ಬರಿಸುವ ತನಕ ಹೊಡೆದಾಟ ನಡೆಸಿದರು. ಕಾಳಗದಲ್ಲಿ ಯಾವ ಜಟ್ಟಿಯ ದೇಹದಿಂದ ರಕ್ತ ಬರುತ್ತಿದೆಯೇ ಅವರು ಸೋತಂತೆ, ತಕ್ಷಣವೇ ಕಾಳಗವನ್ನು ನಿಲ್ಲಿಸಲಾಗುತ್ತದೆ. ಹಾಗಾಗಿ ಕೆಲವೇ ನಿಮಿಷಗಳ ಕಾಲ ಈ ರೋಚಕ ಕಾಳಗ ಅರಮನೆಯ ಸಂಪ್ರದಾಯದಂತೆ ನಡೆದುಕೊಂಡು ಬರುತ್ತದೆ. ರಾಜವಂಶಸ್ಥ ಯದುವೀರ್ ಅವರು ಅರಮನೆಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಬಂದು ಕಾಳಗಕ್ಕೆ ಸೂಚನೆ ನೀಡುತ್ತಾರೆ. ಆ ನಂತರವೇ ಕಾಳಗ ನಡೆಯುತ್ತದೆ. ಗೆದ್ದ ಜಟ್ಟಿಗಳ ಜೊತೆ ಸೋತ ಜಟ್ಟಿಗಳು ಮಹಾರಾಜರಿಗೆ ವಂದಿಸಿ ವಜ್ರಮುಷ್ಟಿ ಕಾಳಗ ಮುಗಿಸಿದರು.
ಕಾಳಗದಿಂದ ಜಟ್ಟಿಗಳ ದೇಹದಲ್ಲಿ ರಕ್ತ ನೆಲೆಕ್ಕೆ ಬೀಳಿಸುವ ಮೂಲಕ ತಾಯಿ ಚಾಮುಂಡೇಶ್ವರಿಗೆ ರಕ್ತವನ್ನು ಸಲ್ಲಿಸುವುದು ಬಹಳ ಹಿಂದಿನಿಂದಲೂ ಬಂದಿರುವ ಪದ್ಧತಿಯಾಗಿದೆ. ಗತಕಾಲದಿಂದಲೂ ಜಗಜಟ್ಟಿಗಳ ಕಾಳಗ ನಡೆದು ಬಂದಿದ್ದು ಅದು ಇಂದು ಸಹ ನಡೆಯಿತು. ಒಂದು ನಿಮಿಷದ ಐತಿಹಾಸಿಕ ಕಾಳಗ ನೋಡಲು ಕಿಕ್ಕಿರಿದು ಸೇರಿದ್ದ ಜನಸ್ತೋಮ ಚಪ್ಪಾಳೆ ಶಿಳ್ಳೆ ಹೊಡೆದು ರೋಚಕದಿಂದ ವಜ್ರಮುಷ್ಟಿ ಕಾಳಗವನ್ನು ಕಣ್‌ರೆಪ್ಪೆ ಆಡಿಸದೇ ವೀಕ್ಷಿಸಿದ್ದು ವಿಶೇಷ.
ಕಾಳಗ ವೀಕ್ಷಿಸಿದ ಅತ್ತೆ-ಸೊಸೆ 
ಅರಮನೆಯ ಗ್ಯಾಲರಿಯಿಂದ ಯದುವೀರ್ ಪತ್ನಿ ತ್ರಿಷಿಕಾ ಕುಮಾರಿ ಹಾಗೂ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಕೂತೂಹಲದಿಂದಲೇ ಐತಿಹಾಸಿಕ ವಜ್ರಮುಷ್ಟಿ ಕಾಳಗವನ್ನು ವೀಕ್ಷಿಸಿ ಪ್ರೇಕ್ಷಕರೆಡೆಗೆ ಕೈಬೀಸಿದರು.

LEAVE A REPLY