ಜಗದೀಶ್ ಕಾರಂತ ಬಂಧನ : ಪುತ್ತೂರಿನಲ್ಲಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ಪುತ್ತೂರು: ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ ಬಂಧನ ಖಂಡಿಸಿ ಹಿಂದೂ ಸಂಘಟನೆಗಳಿಂದ ಶುಕ್ರವಾರ  ಪುತ್ತೂರು ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದಾರೆ.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ , ಭಗವಾನ್ ಹಿಂದೂ ವಿರೋಧಿ ಮಾತನಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಸರಕಾರ ಈಗ ಜಗದೀಶ್ ಕಾರಂತ ಅವರನ್ನು , ಏಕಾಏಕಿ ಬಂಧಿಸಿರುವುದು  ಸರಿಯಲ್ಲ.  ಎಲ್ಲಿದೆ ಕಾನೂನು, ಎಲ್ಲಿದೆ ಜಿಲ್ಲಾಡಳಿತ, ಎಲ್ಲಿದ್ದಾರೆ ಉಸ್ತುವಾರಿ ಸಚಿವರು ಎಂದು ಪ್ರಶ್ನಿಸಿದರು. ಈ ಬಗ್ಗೆ  ಉಗ್ರ ಹೋರಾಟ ನಡೆಯಲಿದೆ ಎಂದರು.

ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಮಾತನಾಡಿ  ಈ ಸರಕಾರ ಆರಂಭದಿಂದಲೂ ಹಿಂದೂ ವಿರೋಧ ಕೆಲಸ ಮಾಡುತ್ತಿದೆ. ಮುಂದಿನ ಚುನಾಚಣೆಯಲ್ಲಿ ಮುಸ್ಲಿಂ ಮತ ಪಡೆಯಲು ತಂತ್ರ ಮಾಡುತ್ತಿದೆ.ಇದಕ್ಕಾಗಿಯೇ  ಹಿಂದೂ ದಮನ ನೀತಿ ಮಾಡುತ್ತಿದೆ ಎಂದರು.

ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ ನಂಬಿಕೆ ದ್ರೋಹ, ಧರ್ಮ ದ್ರೋಹದ ಕೆಲಸ ಸರಕಾರ ಮಾಡುತತ್ತಿದೆ .  ಅಧರ್ಮದ ವಿರುದ್ದ ಹೋರಾಟಕ್ಕೆ ಸಿದ್ದವಾಗಿದ್ದು, ಜಗದೀಶ ಕಾರಂತನ್ನು ಬಂಧನ ಮಾಡುವ ಮೂಲಕ ಸರಕಾರ  ಷಂಡತನ ತೋರಿಸಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು ಮಾತನಾಡಿ ಸರಕಾರ ಹಿಂದೂ ವಿರೋಧಿ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಜಗದೀಶ್ ಕಾರಂತ ಬಂಧನವೇ ಸಾಕ್ಷಿಯಾಗಿದೆ. ಸರಕಾರವು ಪೊಲೀಸರ ಮೂಲಕ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದರು.

ಪ್ರತಿಭಟನಾ ಸಭೆಯಲ್ಲಿ ಪ್ರಮುಖರಾದ ರವೀಂದ್ರ ಪಿ, ಅರುಣ್ ಕುಮಾರ್ ಪುತ್ತಿಲ, ಹರೀಶ್ ಪೂಂಜಾ, ಜೀವಂಧರ್ ಜೈನ್,  ಕೃಷ್ಣ ಶೆಟ್ಟಿ ಕಡಬ,  ಸುಭಾಷ್ ಪಡೀಲ್,  ಭಾಸ್ಕರ ಧರ್ಮಸ್ಥಳ, ಚಣಿಲ ತಿಮ್ಮಪ್ಪ ಶೆಟ್ಟಿ  ಮೊದಲಾದವರು ಇದ್ದರು.

ಕಿಡಿಗೇಡಿಗಳಿಂದ ಕಲ್ಲು ತೂರಾಟ :

ಜಗದೀಶ ಕಾರಂತ ಬಂಧನ ಸುದ್ದಿ ಹರಡುತ್ತಿದ್ದಂತೆಯೇ ಪುತ್ತೂರು ನಗರದ ಬೊಳುವಾರು ಬಳಿ ಬೈಕ್ ನಲ್ಲಿ ಬಂದ ಅಪರಿಚಿತರು ಬಸ್ಸಿಗೆ ಕಲ್ಲೆಸೆದು ಪರಾರಿಯಾಗಿದ್ದಾರೆ. ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಉದ್ವಿಗ್ನ ವಾತಾವರಣ ಕಂಡುಬಂದಿದೆ.

LEAVE A REPLY