ಭಾರತದ ಟೊಮೊಟೋ ಬೇಡ ಎಂದ ಪಾಕ್‌ನಲ್ಲಿ ಪ್ರತೀ ಕಿಲೋಗೆ 300 ರೂ.! 

ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಒಂದು  ಕೆಜಿ ಟೊಮೊಟೋಗೆ 300 ರೂ.ಗಳಾಗಿದೆ. ಆದರೂ ಈ ದೇಶವು ಭಾರತದಿಂದ ಟೊಮೊಟೋವನ್ನು ಆಮದು ಮಾಡಿಕೊಳ್ಳಲು ಒಪ್ಪುತ್ತಿಲ್ಲ. ಏಕೆಂದರೆ ಉಭಯ ರಾಷ್ಟ್ರಗಳ ನಡುವಿನ  ದ್ವಿಪಕ್ಷೀಯ ಸಂಬಂಧ ಹಳಸಿರುವುದೇ ಇದಕ್ಕೆ  ಕಾರಣವಾಗಿದೆ ಎಂದು ಇಲ್ಲಿನ ಆಹಾರ ಭದ್ರತಾ ಸಚಿವರಾದ  ಸಿಕಂದರ್ ಹಯಾತ್ ಅವರೇ ಸ್ವತಃ ಹೇಳಿದ್ದಾರೆ.
ಸದ್ಯ ಪಾಕಿಸ್ತಾನದ ಮಾರುಕಟ್ಟೆಗಳಲ್ಲಿ ಟೊಮೊಟೋಗೆ  ಹೆಚ್ಚಿನ ಪ್ರಮಾಣದಲ್ಲಿ ಕೊರತೆ ಎದುರಿಸಲಾಗುತ್ತಿದೆ. ಪ್ರತೀ ವರ್ಷವೂ ಇಲ್ಲಿ ಕೊರತೆ ಎದುರಾಗುತ್ತದೆ. ಈ ವೇಳೆ ಭಾರತದಿಂದ ಆಮದು ಮಾಡಿಕೊಂಡು ಕೊರತೆ ನೀಗಿಸಿಕೊಳ್ಳುವುದು ಸಾಮಾನ್ಯ. ಅದರಂತೆ ಈ ವರ್ಷವೂ ಕೂಡ  ಭಾರತದಿಂದ ಟೊಮೊಟೋವನ್ನು ಆಮದು ಮಾಡಿಕೊಂಡರೆ ಇಲ್ಲಿರುವ ಸಮಸ್ಯೆ ನಿವಾರಣೆಯಾಗಲಿದೆ. ಬೇಡಿಕೆ ಜಾಸ್ತಿ ಇದ್ದು, ಪೂರೈಕೆ ಕಡಿಮೆ ಇರುವುದೇ ಇಲ್ಲಿನ ಬೆಲೆ ಏರಿಕೆಗೆ ಕಾರಣವಾಗಿದೆ. ಆದರೆ, ಭಾರತದಿಂದ ಆಮದು ಮಾಡಿಕೊಳ್ಳಲು ಪಾಕ್ ಒಪ್ಪುತ್ತಿಲ್ಲ.
ಸ್ಥಳೀಯ ಮಾರಾಟಗಾರರು ಸಿಂಧ್ ಪ್ರಾಂತ್ಯದಲ್ಲಿ  ಬೆಳೆಯುವ ಟೊಮೊಟೋವನ್ನು ಕಾಯುವಂತ ಪರಿಸ್ಥಿತಿ ಎದುರಾಗಿದೆ. ಸದ್ಯ ಪ್ರತೀ ಕಿಲೋ ಟೊಮೆಟೊಗೆ  ಪಂಜಾಬ್ ಹಾಗೂ ಲಾಹೋರ್ ಪ್ರಾಂತ್ಯಗಳಲ್ಲಿ 300 ರೂ.ಗಳಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಪ್ರತೀ ಕಿಲೋಗೆ 100ರಿಂದ 120 ರೂ.ಗಳಿತ್ತು. ಇಲ್ಲಿನ ಸರ್ಕಾರವೂ ಕೂಡ ಪ್ರತೀ ಕಿಲೋ ಟೊಮೊಟೋಬೆಲೆಯನ್ನು 132ರಿಂದ 140 ರೂ.ಗೆ ನಿಗದಿಗೊಳಿಸಿತ್ತು. ಇಲ್ಲಿ  ಅತ್ಯಕ ಪ್ರಮಾಣದಲ್ಲಿ ಕೊರತೆ ಇದ್ದರೂ ಸಹ ಲಾಹೋರ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ  ಹೇಳುವಂತೆ ಭಾರತದಿಂದ ಆಮದು ಮಾಡಿಕೊಳ್ಳದಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದೆ. ಇದರಿಂದ ಸ್ಥಳೀಯ  ರೈತರಿಗೆ ಅನುಕೂಲವಾಗುತ್ತದೆ ಎಂದಿದೆ.  ಟೊಮೊಟೋ ಕೊರತೆ ಎದುರಾದ ಹಿನ್ನೆಲೆ ಬೆಲೆ ಭಾರೀ ಏರಿಕೆಯಾಗಿದೆ.

LEAVE A REPLY