ಆಫ್ಘನ್ ಕ್ರಿಕೆಟ್ ಕೋಚ್ ಹುದ್ದೆಗೆ ಭಾರತೀಯ ತರಬೇತುದಾರ ಮಹಮದ್ ಕೈಫ್

ಮುಂಬೈ: ಆಫ್ಘಾನಿಸ್ಥಾನ ಕ್ರಿಕೆಟ್ ತಂಡ ಅತಿ ಶೀಘ್ರದಲ್ಲಿಯೇ ಮತ್ತೊಬ್ಬ ಭಾರತೀಯ ತರಬೇತುದಾರನ ಹೊಂದಲಿದೆ.
ಭಾರತ ತಂಡದ ಮಾಜಿ ಆರಂಭ ಆಟಗಾರ ಲಾಲ್‌ಚಂದ್ ರಜಪೂತ್ ಅವರ ಒಪ್ಪಂದ ಮುಂದುವರೆಸದೆ ಇರಲು ನಿರ್ಧರಿಸಿದ ಬಹುತೇಕ ಒಂದು ತಿಂಗಳ ನಂತರ ಅಲ್ಲಿನ ಕ್ರಿಕೆಟ್ ಮಂಡಳಿ ಮಹಮದ್ ಕೈಫ್ ಅವರನ್ನು ತರಬೇತುದಾರನ ಹುದ್ದೆಗೆ ಸಂಬಂಸಿದಂತೆ ಸಂಪರ್ಕಿಸಿದೆ.
ಭಾರತದ ಪರ 13 ಟೆಸ್ಟ್ ಹಾಗೂ 125 ಒಂದು ದಿನದ ಪಂದ್ಯಗಳನ್ನು ಆಡಿರುವ ಕೈಫ್ ಅವರನ್ನು ಇತ್ತೀಚೆಗಷ್ಟೇ ಚತ್ತೀಸ್‌ಗಢ ತಂಡದ ನಾಯಕ ಎಂದು ಮುಂಬರುವ ರಣಜಿ ಋತುವಿಗೆ ಹೆಸರಿಸಲಾಗಿತ್ತು. 36 ವರ್ಷದ ಬ್ಯಾಟ್ಸ್‌ಮನ್ ಅತಿ ಶೀಘ್ರದಲ್ಲಿಯೇ ಅಫ್ಘಾನಿಸ್ಥಾನ ಮಂಡಳಿಯ ಅಧ್ಯಕ್ಷ ಶುಕ್ರುಲ್ಲಾ ಅತಿಫ್ ಮಷಲ್ ಅವರನ್ನು ಭೇಟಿ ಮಾಡಲಿದ್ದಾರೆ.

LEAVE A REPLY