ರಾಜ್ಯಮಟ್ಟದ ದಸರಾ ಕ್ರೀಡಾಕೂಟ: ಮೂಡುಬಿದಿರೆಯ ಆಳ್ವಾಸ್ ಸಾಧನೆ

file photo
ಮಂಗಳೂರು: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೆ.21ರಿಂದ 24 ರವರೆಗೆ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಮೂಡುಬಿದಿರೆಯ ಆಳ್ವಾಸ್ ತಂಡವು ವಿವಿಧ ಪಂದ್ಯಾವಳಿಯಲ್ಲಿ ಸಾಧನೆ ಮಾಡಿದೆ.
ಮಹಿಳಾ ವಿಭಾಗದ ಬಾಲ್‍ಬ್ಯಾಡ್‍ಮಿಂಟನ್, ಕಬಡ್ಡಿ ಮತ್ತು ಹ್ಯಾಂಡ್‍ಬಾಲ್ ಪ್ರಥಮ, ಪುರುಷರ ವಿಭಾಗದ ವಾಲಿಬಾಲ್, ಕಬಡ್ಡಿಯಲ್ಲಿ ಪ್ರಥಮ ಹಾಗೂ ಬಾಲ್‍ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನವನ್ನು ಆಳ್ವಾಸ್ ಪಡೆದುಕೊಂಡಿದೆ.
ಅಥ್ಲೆಟಿಕ್ಸ್: ಪುರುಷರ ವಿಭಾಗದಲ್ಲಿ ತ್ರಿಪಲ್‍ಜಂಪ್- ಸಂದೇಶ್ , ಎತ್ತರ ಜಿಗಿತ-ನಿತಿನ್, ಚಕ್ರ ಎಸೆತ-ವಿವೇಕ್ ಅಡಿಗ ಪ್ರಥಮ ಸ್ಥಾನಿಯಾಗಿದ್ದಾರೆ. 400ಮೀ ಓಟ-ಸಂಪ್ರೀತ್ , 5000 ಮೀ. ಓಟ-ಸಕ್ರಪ್ಪ, 4×400 ರಿಲೇಯಲ್ಲಿ ದ್ವಿತೀಯ ಸ್ಥಾನಿಯಾಗಿದೆ.
ಮಹಿಳಾ ವಿಭಾಗ:
3000 ಮೀ ಓಟ- ಚೈತ್ರ, ತ್ರಿಪಲ್ ಜಂಪ್-ತುಂಗಶ್ರೀ, ಎತ್ತರ ಜಿಗಿತ-ಶಾಲಿನಿ, ಚಕ್ರ ಎಸೆತ-ಸೃಷ್ಟಿ ಪ್ರಥಮ ಸ್ಥಾನಿಯಾಗಿದ್ದಾರೆ., 3ಕೀ.ಮಿ ಗುಡ್ಡಗಾಡು ಓಟ-ಮಾಲಾಶ್ರೀ (ಪ್ರಥಮ) 6 ಕಿ.ಮೀ ಗುಡ್ಡಗಾಡು ಓಟದಲ್ಲಿ ಚೈತ್ರಾ ದ್ವಿತೀಯ ಹಾಗೂ ಪ್ರಿಯಾ ಸ್ಥಾನ ಗಳಿಸಿದ್ದಾರೆ.
ಕುಸ್ತಿ ಪಂದ್ಯಾಟ: ದಸರಾ ಪ್ರಯುಕ್ತ ನಡೆದ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್‍ನ ಕುಸ್ತಿಪಟುಗಳು 14 ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ. ಮಹಿಳಾ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ 53 ಕೆ.ಜಿ ವಿಭಾಗದಲ್ಲಿ ಲಕ್ಷ್ಮೀ ರೇಡೇಕರ್, 63 ಕೆ.ಜಿ-ಹರ್ಶಿಲ್, 75 ಕೆ.ಜಿ- ಅನುಶ್ರೀ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 60 ಕೆ.ಜಿಯಲ್ಲಿ ಆತ್ಮಶ್ರೀ ಹಾಗೂ ಸಹನಾ, 69 ಕೆ.ಜಿ- ನಾಗರತ್ನ ದ್ವಿತೀಯ ಸ್ಥಾನಿಯಾಗಿದ್ದಾರೆ. 58 ಕೆ.ಜಿ -ಸಾವಕ್ಕ, 48 ಕೆ.ಜಿ -ಅರ್ಪಣಾ , 53 ಕೆ.ಜಿ- ಅಸ್ನಾ ನುಲೀನಾ, 55 ಕೆ.ಜಿ-ಮಹಾಲಕ್ಷ್ಮೀ, 58 ಕೆ.ಜಿ -ತುಷಾರ, 60 ಕೆ.ಜಿ -ಡೆಲ್ಫಿ, 69 ಕೆ.ಜಿ- ರೂಪಾ, 75 ಕೆ.ಜಿ -ಪ್ರಿಯಾಂಕ ತೃತೀಯ ಸ್ಥಾನವನ್ನು ಪಡೆದು ಪದಕಗಳನ್ನು ಗೆದ್ದಿದ್ದಾರೆ.  ಪದಕ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿನಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

LEAVE A REPLY