ಉಗ್ರರಿಗೆ ನವರಾತ್ರಿ ಟಾರ್ಗೆಟ್: ಈಶಾನ್ಯ ರಾಜ್ಯಗಳಲ್ಲಿ ಹೈಅಲರ್ಟ್

ನವದೆಹಲಿ: ನವರಾತ್ರಿ ಸಂಭ್ರಮವನ್ನು ಗುರಿಯಾಗಿರಿಸಿಕೊಂಡು ದೇಶದಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.
ಈ ಮೊದಲು ಸ್ವಾತಂತ್ರ ದಿನಾಚರಣೆ, ಗಣರಾಜೋತ್ಸವದ ಸಂದರ್ಭವನ್ನು ತಮ್ಮ ದಾಳಿಗೆ ಬಳಸಿಕೊಳ್ಳುತ್ತಿದ್ದ ಉಗ್ರರು ಈ ಬಾರಿ ನವರಾತ್ರಿಯನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ವರದಿ ಹೇಳಿದೆ. ಈಶಾನ್ಯ ಭಾರತದ ರಾಜ್ಯಗಳನ್ನು ಉಗ್ರರು ಮುಖ್ಯ ಗುರಿಯಾಗಿಸಿದ್ದಾರೆ. ದೆಹಲಿ, ಮುಂಬೈ, ಗುಜರಾತ್, ಉತ್ತರಪ್ರದೇಶ ರಾಜ್ಯಗಳೊಂದಿಗೆ ಈಶಾನ್ಯ ಪ್ರಾಂತ್ಯದ ಅಸ್ಸಾಂ, ತ್ರಿಪುರ, ಅರುಣಾಚಲಪ್ರದೇಶ, ಸಿಕ್ಕಿಂ ರಾಜ್ಯಗಳ ಮೇಲೆ ದಾಳಿಗೆ ಸಜ್ಜಾಗಿದ್ದಾರೆ ಎಂದೂ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

LEAVE A REPLY