ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಪ್ಯಾಟ್ ಬದಲು ಟೈ

ಸಿಡ್ನಿ: ಟ್ವೆಂಟಿ20 ಅನುಭವಿ ಆಟಗಾರ ಆಂಡ್ರು ಟೈ ಅವರನ್ನು ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಆಸ್ಟ್ರೇಲಿಯಾ ಆಯ್ಕೆ ಮಾಡಿದೆ.
ಭುಜಕ್ಕಾದ ಪೆಟ್ಟಿನಿಂದಾಗಿ ಆಟಗಾರ ಇಂಡಿಯನ್ ಪ್ರೀಮಿಯರ್ ಲೀಗ್ ನಂತರ ಯಾವುದೇ ಕ್ರಿಕೆಟ್ ಆಡಿಲ್ಲ. ತಂಡದಲ್ಲಿರುವ ವೇಗದ ಬೌಲರ್ ಪ್ಯಾಟ್ ಕುಮಿನ್ಸ್ ಬದಲಿಗೆ ಟೈ ಸ್ಥಾನ ಪಡೆದಿದ್ದಾರೆ. ಆಷಸ್ ವಿರುದ್ಧದ ಸರಣಿ ತನಕ ವಿಶ್ರಾಂತಿ ನೀಡುವ ಉದ್ದೇಶದಿಂದ ಕುಮಿನ್ಸ್ ಅವರನ್ನು ಕಳೆದವಾರ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಅಕ್ಟೋಬರ್ ಏಳರಿಂದ ಭಾರತ ವಿರುದ್ಧದ ಟಿ20 ಸರಣಿ ಆರಂಭ ಆಗಲಿದೆ. ಇವರು ತಂಡದಲ್ಲಿರುವ ನಾಥನ್ ಕೌಲ್ಟರ್ ನೈಲ್, ಕೇನ್ ರಿಚರ್ಡ್‌ಸನ್ ಹಾಗೂ ಎಡಗೈ ಬೌಲರ್ ಜಾಸನ್ ಬೆಹ್ರೆಂಡಾಫ್ ಅವರನ್ನು ಸೇರಲಿದ್ದಾರೆ. ಎರಡು ವರ್ಷ ಐಪಿಎಲ್‌ನಲ್ಲಿ ಆಡದಿದ್ದ ಬೌಲರ್ ಗುಜರಾತ್ ಲಯನ್ಸ್ ಪರ ಆಡಿ ಪುಣೆ ಸೂಪರ್‌ಜಯಂಟ್ಸ್ ವಿರುದ್ಧ ಹ್ಯಾಟ್ರಿಕ್ ಸಂಪಾದಿಸಿ ಗಮನ ಸೆಳೆದರು. ಆ ಪಂದ್ಯದಲ್ಲಿ ಬೌಲರ್ 17 ರನ್ನಿಗೆ ಐದು ವಿಕೆಟ್ ಸಂಪಾದಿಸಿದ್ದರು.
ಮೂರು ಟ್ವೆಂಟಿ೨೦ ಪಂದ್ಯಗಳು ಕ್ರಮವಾಗಿ ರಾಂಚಿ, ಗುವಾಹತಿ ಹಾಗೂ ಹೈದರಾಬಾದಿನಲ್ಲಿ ನಡೆಯಲಿವೆ. ಪ್ರಸ್ತುತ ನಡೆಯುತ್ತಿರುವ ಸೀಮಿತ ಓವರುಗಳ ಐದು ಪಂದ್ಯದ ಸರಣಿಯಲ್ಲಿ ಭಾರತ 3-0 ಮುನ್ನಡೆಯೊಂದಿಗೆ ಸರಣಿ ಗೆದ್ದಿದೆ.

LEAVE A REPLY