ಪದ್ಮ ಭೂಷಣ: ಸುಶೀಲ್ ಪರ ಕೋಚ್ ಅರ್ಜಿ ಸಲ್ಲಿಕೆ

ಹೊಸದಿಲ್ಲಿ: ಒಲಿಂಪಿಕ್ ಕ್ರೀಡಾಕೂಟದಲ್ಲಿ ಎರಡು ಪದಕ ಸಂಪಾದಿಸಿರುವ ಭಾರತದ ಏಕೈಕ ಕುಸ್ತಿಪಟು ಗೌರವಕ್ಕೆ ಪಾತ್ರರಾಗಿರುವ ಸುಶೀಲ್ ಕುಮಾರ್ ಅವರಿಗೆ ಪದ್ಮ ಭೂಷಣ ನೀಡುವಂತೆ ಕೋರಿ ಅವರ ತರಬೇತುದಾರ ಅರ್ಜಿ ಸಲ್ಲಿಸಿದ್ದಾರೆ.
ಕುಸ್ತಿಪಟುವಿಗೆ 2011 ರಲ್ಲಿ ಪದ್ಮ ಶ್ರೀ ಪ್ರಶಸ್ತಿ ನೀಡಲಾಗಿತ್ತು. ಪದ್ಮ ಭೂಷಣ ಅದಕ್ಕಿಂತ ಹೆಚ್ಚಿನ ಪ್ರಶಸ್ತಿಯಾಗಿದೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡು ಪದಕ (ಒಂದು ಬೆಳ್ಳಿ ಹಾಗೂ ಒಂದು ಕಂಚು) ಸಂಪಾದಿಸಿರುವ ಭಾರತದ ಏಕೈಕ ಅಥ್ಲೀಟ್ ಆಗಿದ್ದಾರೆ. ಪ್ರತಿಷ್ಠಿತ ಪ್ರಶಸ್ತಿಗೆ ಹೆಸರು ಶಿಫಾರಸು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸುಶೀಲ್, ತರಬೇತುದಾರ ಯಶ್‌ವೀರ್ ಪ್ರದ್ಮ ಭೂಷಣ ಪ್ರಶಸ್ತಿಯನ್ನು ನನಗೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದಿದ್ದಾರೆ.

LEAVE A REPLY