ಪಿಎಫ್‌ಐ ಕಾರ್ಯಕ್ರಮದಲ್ಲಿ ಮಾಜಿ ಉಪ ರಾಷ್ಟ್ರಪತಿ ಅನ್ಸಾರಿ: ವಿಹಿಂಪ ಟೀಕಾ ದಾಳಿ

ಹೊಸದಿಲ್ಲಿ: ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಶಂಕಿಸಲಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಹಿಳಾ ಘಟಕ ಏರ್ಪಡಿಸಿದ್ದ  ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರನ್ನು ವಿಶ್ವಹಿಂದು ಪರಿಷತ್ ಭಾನುವಾರ ಟೀಕಿಸಿದೆ.
ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅನ್ಸಾರಿ ನಿಲುವು ಏನು ಎಂಬುದು ಬಯಲಾಗಿದೆ ಎಂದು ವಿಶ್ವಹಿಂದು ಪರಿಷತ್ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಹೇಳಿದ್ದಾರೆ. ಅವರು ಉಪ ರಾಷ್ಟ್ರಪತಿ ಹುದ್ದೆಯಲ್ಲಿದ್ದಾಗಲೂ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನವನ್ನು ಬಿತ್ತುತ್ತಿದ್ದರು ಎಂದು ಅವರು ಹೇಳಿದರು.
ಪಿಎಫ್‌ಐಯ ಮಹಿಳಾ ಘಟಕವಾದ ನೇಶನಲ್ ವಿಮೆನ್ಸ್ ಫ್ರಂಟ್ ಸಹಯೋಗದೊಂದಿಗೆ ಇನ್‌ಸ್ಟಿಟ್ಯೂಟ್ ಆಫ್ ಒಬ್ಜೆPವಿವ್ ಸ್ಟಡೀಸ್ ಕೇರಳದ ಕಲ್ಲಿಕೋಟೆಯಲ್ಲಿ ‘ದಯಾಪರವಾದ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ’ ಎಂಬ ವಿಷಯದ ಮೇಲೆ ಏರ್ಪಡಿಸಿದ್ದ ಎರಡು ದಿನಗಳ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಅನ್ಸಾರಿ ಭಾಗವಹಿಸಿದ್ದರು. ಆದರೆ, ಕಾರ್ಯಕ್ರಮವನ್ನು ದಿಲ್ಲಿ ಮೂಲದ ಇನ್‌ಸ್ಟಿಟ್ಯೂಟ್ ಆಫ್ ಒಬ್ಜೆಕ್ಟಿವ್ ಸ್ಟಡೀಸ್ ಮಾತ್ರವೇ ಸಂಘಟಿಸಿತ್ತು ವಿನಾ ಪಿಎಫ್‌ಐ ಅದನ್ನು ಏರ್ಪಡಿಸಿದ್ದಲ್ಲ ಎಂದು ಕೇರಳದಲ್ಲಿನ ಪಿಎಫ್‌ಐ ಮೂಲಗಳು ಹೇಳಿವೆ.
ಪಿಎಫ್‌ಐ ನಿಷೇತ ಸಂಘಟನೆ ಸಿಮಿಯ ಹೊಸ ಮತ್ತು ವಿಸ್ತರಿತ ಅವತಾರವಲ್ಲದೆ ಮತ್ತೇನೂ ಅಲ್ಲ ಎಂದು ಹೇಳಿಕೆಯೊಂದರಲ್ಲಿ ಜೈನ್ ಆರೋಪಿಸಿದ್ದಾರೆ. ಕೇರಳದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಮತ್ತು ದೇಶ ಭಕ್ತರ ಕೊಲೆ ಕೃತ್ಯಗಳಲ್ಲಿ ತೊಡಗಿದೆ ಎಂದೂ ಅವರು ಆರೋಪಿಸಿದರು.
ಕಾರ್ಯಕ್ರಮವನ್ನು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ನಡೆಸಲು ಮೊದಲು ಕಲ್ಲಿಕೋಟೆ ವಿಶ್ವವಿದ್ಯಾಲಯ ಅನುಮತಿಸಿತ್ತು. ಆದರೆ ನಂತರ ಅನುಮತಿಯನ್ನು ರದ್ದುಗೊಳಿಸಿತ್ತು. ಮೊದಲಿಗೆ ಕಾರ್ಯಕ್ರಮದ ಭಾಗವಾಗಿ ಇರದಿದ್ದ ಕೆಲವು ಸಂಘಟನೆಗಳು ನಂತರ ಅದರೊಂದಿಗೆ ಸಹಭಾಗಿಗಳಾದುದಕ್ಕೆ ವಿಶ್ವವಿದ್ಯಾಲಯದಲ್ಲಿನ ಇಸ್ಲಾಮಿಕ್ ಅಧ್ಯಯನಗಳ ಪೀಠದ ಪೋಷಕ ಸಂಸ್ಥೆಯಾದ ಮುಸ್ಲಿಂ ಕಾಲೇಜುಗಳ ಒಕ್ಕೂಟ ಆಕ್ಷೇಪಿಸಿದೆ ಎಂದು ಹೇಳಿ ವಿಶ್ವವಿದ್ಯಾಲಯ ಅನುಮತಿ ರದ್ದುಗೊಳಿಸಿತ್ತು.
ಪಿಎಫ್‌ಐ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದೆ. ಭಯೋತ್ಪಾದನಾ ಶಿಬಿರಗಳನ್ನು ನಡೆಸುತ್ತಿದೆ. ಬಾಂಬ್‌ಗಳನ್ನು ತಯಾರಿಸುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳ (ಪಡೆ) ಕಾಯ್ದೆ (ಯುಎಪಿಎ)ಯಡಿ ನಿಷೇತ ಎಂದು ಘೋಷಿಸಲು ಅದು ಅರ್ಹವಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯೊಂದರಲ್ಲಿ ಹೇಳಿದೆ.
ಪಿಎಫ್‌ಐ ೨೩ ರಾಜ್ಯಗಳಲ್ಲಿ ಅಸ್ತಿತ್ವ ಹೊಂದಿದೆ ಎಂದು ಹೇಳಲಾಗಿದೆ ಮತ್ತು ಕೇರಳ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಅತ್ಯಂತ ಪ್ರಬಲವಾಗಿದೆ.

LEAVE A REPLY