ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕುಮಾರಚಂದ್ರ ಅಧಿಕಾರ ಸ್ವೀಕಾರ 

ಉಡುಪಿ: ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕುಮಾರಚಂದ್ರ ಅವರು ಭಾನು ವಾರ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಈ ಮೊದಲು ಮಂಗಳೂರು ಗುಪ್ತಚರ ವಿಭಾಗದಲ್ಲಿ ಅಧೀಕ್ಷಕರಾಗಿ ಕಾರ್ಯನಿರ್ವ ಹಿಸಿದ್ದರು.
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಷ್ಣುವರ್ಧನ್ ಅವರನ್ನು ದ.ಕ. ಜಿಲ್ಲೆಯ ಬಂಟ್ವಾಳದಲ್ಲಿ ಕೋಮು ಗಲಭೆಯ ಸಂದರ್ಭ ಮಂಗಳೂರಿಗೆ ವರ್ಗ ಮಾಡಲಾಗಿತ್ತು. ಬಳಿಕ ಈ ಸ್ಥಾನ ತೆರವಾಗಿತ್ತು. ಇದೀಗ ಕುಮಾರಚಂದ್ರ ಅವರು ಅಧಿಕಾರ ಸ್ವೀಕರಿಸಿದ್ದಾರೆ. 2010ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಕುಮಾರಚಂದ್ರ ಅವರು ಚಿಕ್ಕಮ ಗಳೂರಿನಲ್ಲಿ ಪ್ರೊಬೆಷನರಿ ತರಬೇತಿ ಪಡೆದು ಕೊಡಗು ಜಿಯ ವೀರಾಜಪೇಟೆಯಲ್ಲಿ ಡಿವೈಎಸ್ಪಿಯಾಗಿ ನಿಯೋಜನೆ ಗೊಂಡಿದ್ದರು. ಬಳಿಕ ಬಳ್ಳಾರಿ ಜಿ ಹೊಸಪೇಟೆಯಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು.

LEAVE A REPLY