ಚಾರಿಟಿಗಾಗಿ ಷೇರು ಮಾರಿದ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಜೂಕರ್‌ಬರ್ಗ್

ವಾಷಿಂಗ್ಟನ್: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಚಾರಿಟಿ ಪ್ರಯತ್ನಗಳಿಗೆ ನಿ ಬಳಸುವ ಉದ್ದೇಶದಿಂದ ತನ್ನ ಕಂಪೆನಿಯ ಷೇರುಗಳನ್ನು  ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಿ 12 ಶತಕೋಟಿ ಅಮೆರಿಕನ್ ಡಾಲರ್ ನಿ ಸಂಗ್ರಹ ಮಾಡುವುದಾಗಿ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಜೂಕರ್‌ಬರ್ಗ್ ಹೇಳಿದ್ದಾರೆ.
ಜೂಕರ್‌ಬರ್ಗ್ ತನ್ನ ಕಂಪೆನಿಯ 350-750 ಲಕ್ಷ ಷೇರುಗಳನ್ನು ಪ್ರಸ್ತುತ ಮೌಲ್ಯದ ಪ್ರಕಾರ 1200 ಕೋಟಿ ಡಾಲರ್‌ಗಳಿಗೆ ಮಾರಾಟ ಮಾಡಿ, ಆ ಮೊತ್ತವನ್ನು ಮುಂದಿನ ೧18 ತಿಂಗಳುಗಳ ಕಾಲ ತಮ್ಮ ಚಾರಿಟಿ, ದಾನ-ಧರ್ಮದ ಕೆಲಸಗಳಿಗೆ ಬಳಕೆ ಮಾಡುವುದಾಗಿ ಹೇಳಿದ್ದಾರೆ. ಫೇಸ್‌ಬುಕ್ ಕಂಪೆನಿ ಈಗ ತುಂಬಾ ಬೆಲೆಬಾಳುವ ಕಂಪೆನಿಯಾಗಿದ್ದು, ಅದರಲ್ಲಿ ಸ್ವಲ್ಪ ಷೇರುಗಳನ್ನು ಅವರ ಚಾರಿಟಿ ಉಪಕ್ರಮಗಳಿಗೆ ಬಂಡವಾಳವಾಗಿ ಕೊಡುಗೆ ನೀಡಬಹುದು ಎಂದು ಹೇಳಿದ್ದಾರೆ. ಅವರು ಈ ಹಣವನ್ನು ರೋಗಗಳ ನಿರ್ಮೂಲನೆಗೆ ಮತ್ತು ಎಲ್ಲಾ ಮಕ್ಕಳಿಗೆ ಶಿಕ್ಷಣ ಒದಗಿಸಲು ಸಹಾಯ ಮಾಡಲಿದ್ದಾರೆ. ಅವರು ತಮ್ಮ ಫೇಸ್‌ಬುಕ್ ಪೋಸ್ಟ್ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

LEAVE A REPLY