ಪಿಎಫ್‌ಐ ಸಮ್ಮೇಳನದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ !

ಕಲ್ಲಿಕೋಟೆ: ದಕ್ಷಿಣ ಭಾರತದಲ್ಲಿ ವಿವಿಧೆಡೆ ಉಗ್ರಗಾಮಿ ಚಟುವಟಿಕೆಗಳಿಗೆ ಕಾರಣೀಭೂತವಾಗಿರುವ ಮತೀಯ ಮೂಲಭೂತವಾದಿ ಸಂಘಟನೆ ಪಿಎಫ್‌ಐನ ಸಹಯೋಗದ ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಭಾಗವಹಿಸಿ ವಿವಾದಕ್ಕೀಡಾಗಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಾಲು ಸಾಲು ಕರಾಳ ಕೃತ್ಯಗಳನ್ನು ತನಿಖೆ ನಡೆಸಿರುವ ರಾಷ್ಟ್ರೀಯ ತನಿಖಾ ದಳ ಇತ್ತೀಚೆಗಷ್ಟೇ ಅದನ್ನು ನಿಷೇಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿತ್ತು.
ಆದರೆ, ಹತ್ತು ವರ್ಷಗಳ ಕಾಲ ದೇಶದ ಉಪರಾಷ್ಟ್ರಪತಿ ಹುದ್ದೆಯ ಸವಿಯನ್ನು ಅನುಭವಿಸಿ, ಹುದ್ದೆ ಮುಗಿಯುವ ಸಂದರ್ಭದಲ್ಲಿ ಭಾರತದಲ್ಲಿ ಮುಸ್ಲಿಮರಿಗೆ ಅಭದ್ರತೆಯಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಹಮೀದ್ ಅನ್ಸಾರಿಯವರಿಗೆ ಪಿಎಫ್‌ಐ ಆಪ್ತವಾಗಿ ಕಂಡಿದ್ದು ಮಾತ್ರ ವಿಪರ್ಯಾಸವಾಗಿದೆ.
ಪಿಎಫ್‌ಐ ಸಂಘಟನೆಯ ಮಹಿಳಾ ವಿಭಾಗವಾದ ನ್ಯಾಷನಲ್ ವುಮನ್ಸ್ ಫ್ರಂಟ್ (ಎನ್‌ಡಬ್ಲ್ಯುಎಫ್) ವತಿಯಿಂದ ಕೇರಳದ ಕಲ್ಲಿಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶನಿವಾರ ಹಮೀದ್ ಅನ್ಸಾರಿ ಪಾಲ್ಗೊಂಡಿದ್ದರು.
ಹೊಸದಿಲ್ಲಿ ಮೂಲದ ಸಂಸ್ಥೆಯೊಂದು ಎನ್‌ಡಬ್ಲ್ಯುಎಫ್ ಸಹಯೋಗದೊಂದಿಗೆ ಕಲ್ಲಿಕೋಟೆಯಲ್ಲಿ ಮಾನವ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಎಂಬ ವಿಚಾರ ಸಂಕಿರಣವೊಂದನ್ನು ಹಮ್ಮಿಕೊಂಡಿತ್ತು.
ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಹಮೀದ್ ಅನ್ಸಾರಿ, ಸಮಾಜದಲ್ಲಿ ಲಿಂಗ ಸಮಾನತೆಯನ್ನು ರೂಪಿಸುವ ಅಗತ್ಯವಿದೆ. ಮಹಿಳೆಯರು ಸಮಾನರು ಹಾಗೂ ಕ್ರಿಯಾಶೀಲರೂ ಆದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಎಂ. ಮನ್ಜೂರ್ ಆಲಂ, ಹೊಸದಿಲ್ಲಿಯ ಜಿಜಿಎಸ್ ಈಪಿ ವಿವಿಯ ಕಾನೂನು ಉಪನ್ಯಾಸಕ ಅಫ್ಸಲ್ ವನಿ ಉಪಸ್ಥಿತರಿದ್ದರು. ಅಷ್ಟೇ ಅಲ್ಲದೇ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಸೌದಿ ಅರೆಬಿಯಾಗಳಿಂದ ವಿವಿಧ ಗಣ್ಯರು ಆಗಮಿಸಿದ್ದರು. ಎರಡು ದಿನಗಳ ಈ ಕಾರ್ಯಕ್ರಮಕ್ಕೆ ದೇಶದ ವಿವಿಧ ವಿವಿಗಳಿಂದ ಪ್ರತಿನಿಗಳು ಆಗಮಿಸಿದ್ದಾರೆ.
ಬಿಜೆಪಿ ಪ್ರತಿಭಟನೆ
ಉಗ್ರ ಸಂಘಟನೆಯಾಗಿರುವ ಇಸ್ಲಾಮಿಕ್ ಸ್ಟೇಟ್ಸ್‌ಗೆ ಯುವಕರನ್ನು ಸೆಳೆಯುವ ಕಾರ್ಯದಲ್ಲಿ ಪಿಎಫ್‌ಐ ನಿರತವಾಗಿದೆ. ಇಂತಹ ಪಿಎಫ್‌ಐ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಪಾಲ್ಗೊಂಡಿದ್ದಾರೆ. ಅನ್ಸಾರಿಯವರು ಕೂಡಲೇ ಕ್ಷಮೆ ಕೇಳಬೇಕು ಎಂದು ಭಾರತೀಯ ಜನತಾ ಪಕ್ಷವು ಆಗ್ರಹಿಸಿದೆ.
10 ವರ್ಷಗಳ ಕಾಲ ಭಾರತದ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿರುವ ಅನ್ಸಾರಿಯವರು, ಭಯೋತ್ಪಾದನೆ ಸಂಘಟನೆಯ ಸಹಯೋಗದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪಿಎಫ್‌ಐ ವಿರುದ್ಧ ರಾಷ್ಟ್ರೀಯ ತನಿಖಾ ಆಯೋಗ ಕಣ್ಣಿಟ್ಟಿದೆ ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ಪಿ. ರಘುನಾಥ್ ತಿಳಿಸಿದ್ದಾರೆ. ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿರುವ ಪಿಎಫ್‌ಐ ಸಹಯೋಗದ ಕಾರ್ಯಕ್ರಮಕ್ಕೆ ಅವಕಾಶ ನೀಡಿರುವ ವಿಶ್ವವಿದ್ಯಾಲಯದ ಕ್ರಮವನ್ನು ವಿರೋಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆಯನ್ನು ನಡೆಸಿದೆ.
ಪಿಎಫ್‌ಐನ ರಾಜ್ಯಾಧ್ಯಕ್ಷ ಇ. ಅಬೂಬಕ್ಕರ್ ಹಾಗೂ ಎನ್‌ಡಬ್ಲೂಎಫ್ ಅಧ್ಯಕ್ಷೆ ಎ. ಎಸ್. ಏನಬಾ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಬಿಜೆಪಿ ಯುವ ಮೋರ್ಚಾ ಹೇಳಿದ್ದು, ಶಿಕ್ಷಣ ಮಂತ್ರಿ, ಉಪ ಕುಲಪತಿಗಳು ಕೂಡ ರಾಷ್ಟ್ರವಿರೋ  ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಇವರ ವಿರುದ್ಧ ತನಿಖೆಯನ್ನು ನಡೆಸಬೇಕಾದ ಅಗತ್ಯವಿದೆ ಎಂದು ಆಗ್ರಹಿಸಿದೆ. ಈ ಕುರಿತಂತೆ ಬಿಜೆಪಿ ಯುವ ಮೋರ್ಚಾವು ರಾಜ್ಯಪಾಲರಿಗೆ ಹಾಗೂ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿಗಳಿಗೆ ಪತ್ರವನ್ನೂ ಬರೆದಿದೆ.
ಭಯೋತ್ಪಾದಕ ಚಟುವಟಿಕೆಯಲ್ಲಿ ಪಾಲ್ಗೊಂಡಿದೆ ಪಿಎಫ್‌ಐ
ಕೇರಳದಲ್ಲಿ ಕಾರ್ಯಚಟುವಟಿಕೆ ಹೊಂದಿರುವ ಪಿಎಫ್‌ಐ ಅನೇಕ ಹಿಂಸಾಚಾರ ಹಾಗೂ ದೇಶವಿರೋ ಪ್ರಕರಣಗಳಲ್ಲಿ ಹೆಸರಾಗಿದೆ. ಸಮಾಜಘಾತುಕ ಚಟುವಟಿಕೆಗಳಲ್ಲಿ ಪಾಲ್ಗೊಂಡ ಆರೋಪಗಳು ಪಿಎಫ್‌ಐ ಮೇಲಿದೆ.
ಇಸ್ಲಾಂಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಈ ಸಂಘಟನೆಯ ೧೩ ಕಾರ್ಯಕರ್ತರು ೨೦೧೦ರಲ್ಲಿ ಉಪನ್ಯಾಸಕನೋರ್ವನ ಕೈ ಕತ್ತರಿಸಿದ್ದರು. ೨೦೧೬ರ ಮಾರ್ಚ್‌ನಲ್ಲಿ  ರಾಷ್ಟ್ರೀಯ ತನಿಖಾ ಆಯೋಗವು ನಾರತ್‌ನಲ್ಲಿ ಬಾಂಬ್ ತಯಾರಿಕಾ ತರಬೇತಿ ನೀಡಿದ ಆರೋಪದ ಮೇಲೆ ಕೆ. ವಿ. ಅಬ್ದುಲ್ ಜಲೀಲ್ ಎಂಬಾತನನ್ನು ಬಂಸಿತ್ತು. ಈತ ಪಿಎಫ್‌ಐ ಕಾರ್ಯಕರ್ತನಾಗಿದ್ದು ೨೦೧೩ರ ಎಪ್ರೀಲ್‌ನಲ್ಲಿ ೨೧ ಜನರಿಗೆ ನಾರತ್ ಎಂಬಲ್ಲಿ ಬಾಂಬ್ ತಯಾರಿಕೆಗೆ ತರಬೇತಿ ನೀಡಿದ್ದಾನೆ ಎಂಬ ಆರೋಪವಿದೆ. ಈ ೨೧ ಜನರೂ ಪಿಎಫ್‌ಐ ಸದಸ್ಯರು. ಮಂಗಳೂರಿನಲ್ಲಿ ನಡೆದ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಸಿದಂತೆ ೨೦೧೭ರಲ್ಲಿ ಕರ್ನಾಟಕ ಪೊಲೀಸರು ಈ ಸಂಘಟನೆಯ ಐವರು ಸದಸ್ಯರನ್ನು ಬಂಧಿಸಿದ್ದಾರೆ. ೨೦೧೬ರಲ್ಲಿ ಬೆಂಗಳೂರಿನಲ್ಲಿ ನಡೆದ ರುದ್ರೇಶ್ ಹತ್ಯೆ ಮಾಡಿರುವ ಪಿಎಫ್‌ಐ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟೇ ಅಲ್ಲದೇ ಜಾಗತಿಕವಾಗಿ ಉಗ್ರ ಸಂಘಟನೆಯಾಗಿರುವ ಇಸ್ಲಾಮಿಕ್ ಸ್ಟೇಟ್ಸ್‌ಗೆ ಕೇರಳದ ಯುವಕರನ್ನು ಸೆಳೆಯುವ ಕಾರ್ಯದಲ್ಲಿಯೂ ಪಿಎಫ್‌ಐ ತನ್ನನ್ನು ತೊಡಗಿಸಿಕೊಂಡಿದೆ. ಇವು ಪಿಎಫ್‌ಐನ ಕಾರ್ಯವೈಖರಿಗೆ ಕೆಲವು ನಿದರ್ಶನಗಳು.

LEAVE A REPLY