ಪ್ರಧಾನಿ – ದೇಶವಾಸಿಗಳ ಮನ್ ಕೀ ಬಾತ್‌ಗೆ ಇಂದಿಗೆ ತುಂಬಿತು ಮೂರು ವರ್ಷ!

ನವದೆಹಲಿ: ದೇಶದಾದ್ಯಂತ ಮನೆಮಾತಾಗಿರುವ ‘ಮನ್ ಕಿ ಬಾತ್’ ಇಂದು ಮೂರು ವರ್ಷ ಪೂರೈಸಿದೆ.
ಪ್ರಧಾನಿ ನರೇಂದ್ರ ಮೋದಿ ಪ್ರತಿ ತಿಂಗಳ ಕೊನೆ ಭಾನುವಾರ ಆಕಾಶವಾಣಿಯ ಮೂಲಕ ನಡೆಸಿಕೊಡುವ ಈ ಜನಪ್ರೀಯ ಕಾರ್ಯಕ್ರಮದ ೩೬ನೇ ಆವೃತ್ತಿಯಲ್ಲಿ ಇಂದು ಮಾತನಾಡಿದ ಪ್ರಧಾನಿ ಮೋದಿ, ರಾಜಕೀಯದಿಂದ ಮನ್ ಕೀ ಬಾತ್‌ನ್ನು ದೂರ ಇಟ್ಟಿದ್ದೇನೆ. ಇದಕ್ಕೆ ರಾಜಕೀಯ ಸ್ಪರ್ಶವಿಲ್ಲ. ದೇಶದ ಜನರನ್ನು ಈ ಮೂಲಕ ಸಂಪರ್ಕಿಸಲು ನಾನು ಪ್ರಯತ್ನಿಸಿದ್ದೇನೆ. ಇದರಲ್ಲಿ ನನ್ನ ಅಭಿಪ್ರಾಯಗಳಿಗಿಂತ ದೇಶವಾಸಿಗಳ ಭಾವನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದಿದ್ದಾರೆ. ಇದು ದೇಶದ ಜನರ ನಿಲುವು, ಆಶೋತ್ತರಗಳನ್ನು ಬಿಂಬಿಸುವ ಸಾರ್ಥಕ ಕಾರ್ಯಕ್ರಮ. ದೇಶದ ಪೂರಕ ಶಕ್ತಿಯನ್ನು ಇದು ಬಿಂಬಿಸಿದೆ ಎಂದ ಪ್ರಧಾನಿ, ಇಂದು ಎಂದಿನಂತೆ ಸ್ವಚ್ಚತಾ ಅಭಿಯಾನ, ಗ್ರಾಮಾಭಿವೃದ್ದಿ ವಿಷಯಗಳನ್ನು ಪ್ರಸ್ತಾಪಿಸಿದರು. ಅಕ್ಟೋಬರ್ 2ರ ಗಾಂಧಿ ಜಯಂತಿಗೆ 15 ದಿನಗಳ ಮುನ್ನವೇ ನಾವು ಆರ್ಥಪೂರ್ಣ ಸ್ವಚ್ಚ ಆಂದೋಲನ ಜರಿಗೊಳಿಸಿದ್ದೇವೆ. ಅಂದು ನಾವೆಲ್ಲರೂ ಖಾದಿ ವಸ್ತ್ರಗಳನ್ನು ಖರೀದಿಸೋಣ ಮತ್ತು ಧರಿಸೋಣ ಎಂದು ದೇಶದ ಜನತೆಗೆ ಕರೆ ನೀಡಿದರು.

LEAVE A REPLY