ಕಣಿವೆಯಲ್ಲಿ ಪಾಕ್‌ನಿಂದ ಶೆಲ್ ದಾಳಿ: ಇಬ್ಬರು ಯೋಧರಿಗೆ ಗಾಯ

ಜಮ್ಮು: ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಿ ಸೇನೆಯ ಕಿರಿಕ್ ಮುಂದುವರಿದಿದೆ.
ಕದನವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ಮುಂದುವರಿಸಿರುವ ಪಾಕ್ ಪೆಡೆ, ಜಮ್ಮು, ಸಾಂಬಾ ಮತ್ತು ಪೂಂಚ್ ಜಿಲ್ಲೆಗಳ ಭಾರತೀಯ ಗಡಿಯ ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ಕಳೆದ ಇಡೀ ರಾತ್ರಿ ನಡೆಸಿದ ಶೆಲ್ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಬಿಎಸ್‌ಎಫ್ ಯೋಧರ ಸಹಿತ ಐವರು ಗಾಯಗೊಂಡಿದ್ಧಾರೆ.
ಜಮ್ಮು ಮತ್ತು ಸಾಂಬಾ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಬರುವ ಅರ್ನಿಯಾ, ಆರ್.ಎಸ್.ಪುರ ಮತ್ತು ರಾಮ್‌ಗಢ್ ಸೆಕ್ಟರ್‌ಗಳಲ್ಲಿ ಪಾಕ್ ಯೋಧರು ಈದಾಳಿ ನಡೆಸಿದ್ದಾರೆ. ಪಾಕ್ ದಾಳಿಗೆ ಭಾರತೀಯ ಸೇನೆಯೂ ದಿಟ್ಟ ಪ್ರತ್ಯುತ್ತರ ನೀಡಿದೆ.

LEAVE A REPLY