ಮೆಕ್ಸಿಕೋಗೆ ಗಾಯದ ಮೇಲೆ ಬರೆ : ಮತ್ತೆ 6.2 ತೀವ್ರತೆಯ ಭೂಕಂಪ

ಮೆಕ್ಸಿಕೋ ಸಿಟಿ: ಮೆಕ್ಸಿಕೋದಲ್ಲಿ ಮತ್ತೊಮ್ಮೆ ಭೂಮಿ ನಡುಗಿದ್ದು, ಇತ್ತೀಚೆಗಷ್ಟೇ ಎರಡು ಪ್ರಬಲ ಭೂಕಂಪಗಳಿಂದ ತತ್ತರಿಸಿದ್ದ ದೇಶಕ್ಕೆ ಇದು ಗಾಯಕ್ಕೆ ಬರೆ ಎಳೆದಂತಾಗಿದೆ.
ಈ ಬಾರಿಯ ಭೂಕಂಪದ ತೀವ್ರತೆ 6.2 ಆಗಿದ್ದು, ಒಕ್ಸಾನಾ ರಾಜ್ಯದ ಯೂನಿಯನ್ ಹಿಂಡಾಲ್ಗೊ ನಗರದ ಕೆಳಗೆ 75 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ. ಭೂಕಂಪದಿಂದ ಇಕ್ಸ್ ಟೊಪೆಕ್, ಹಿಂಡಾಲ್ಗೊ ನಗರಗಳು ಹೆಚ್ಚು ಹಾನಿಗೀಡಾಗಿವೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

LEAVE A REPLY