ನಮಗೆ ಇನ್ನೊಂದು 26/10 ಬೇಡ, ಇನ್ನೊಂದು ದೇಶದ ಪೀಡೆ ನಾವು ಸಾಕಬೇಕಿಲ್ಲ !

  • ಗಣೇಶ್ ಪ್ರಸಾದ್ ಬಿ.
2010ರಲ್ಲಿ ‘ಮೈ ನೇಮ್ ಈಸ್ ಖಾನ್’ ಎಂಬ ಹಾಸ್ಯಾಸ್ಪದ ಸಿನೆಮಾವೊಂದು ಬಿಡುಗಡೆಯಾಗಿತ್ತು.
ಶಾರುಖ್ ಖಾನರ ಕಳಪೆ ಅಭಿನಯದ ಹೊರತಾಗಿ ಈ ಸಿನಿಮಾದ ಇನ್ನೊಂದು ವಿಶೇಷ ಏನೆಂದರೆ, ಈ ಸಿನೆಮಾ ಅಮೆರಿಕಾದ ಸುರಕ್ಷತಾ ವ್ಯವಸ್ಥೆಯನ್ನು ಅಪಹಾಸ್ಯ ಮಾಡಿತ್ತು. ಅಮೆರಿಕಾದ ಅಹಂಕಾರ-ಕುತಂತ್ರ ನೀತಿಗಳ ಬಗ್ಗೆ ಏನೇ ಹೇಳಿ, ಆದರೆ 9/11 ಆಘಾತದ ಬಳಿಕ ಆ ದೇಶ ತನ್ನ ನಾಗರಿಕರ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳು ಶ್ಲಾಘನೀಯ. ಆ ಭಯೋತ್ಪಾದಕ ದಾಳಿಯ ಬಳಿಕ ತನ್ನ ನೆಲದ ಮೇಲೆ ಹೊರದೇಶದ ಒಬ್ಬನೇ ಒಬ್ಬ ಉಗ್ರನನ್ನೂ ನುಸುಳಗೊಟ್ಟಿಲ್ಲ. ಅಂಥ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಟೀಕಿಸಿದ್ದು ಒಂದು ಭಾರತೀಯ ಸಿನೆಮಾ ಎಂಬುದು ವಿಪರ್ಯಾಸ. ಯಾಕೆಂದರೆ ನಮ್ಮ ಅವಸ್ಥೆ ನೋಡಿ. 26/10 ಮುಂಬೈ ದಾಳಿ ಬಳಿಕ ಭಾರತದ ಸುರಕ್ಷತಾ ವ್ಯವಸ್ಥೆ ಅದೆಷ್ಟು ಬದಲಾಗಿದೆ? ಇವತ್ತು ನಿಮ್ಮ ಕೈಲೊಂದು ಬಾಂಬು ಇದ್ದರೆ, ರೈಲು-ಬಸ್ ನಿಲ್ದಾಣದಲ್ಲೋ ಅಥವಾ ಇನ್ಯಾವುದೋ ಸಾರ್ವಜನಿಕ ಸ್ಥಳದಲ್ಲೋ ಅದನ್ನು ಇಟ್ಟು ಬರುವುದು ಭಾರೀ ಅಸಾಧ್ಯ ಕೆಲಸವೇನಲ್ಲ. ಹೋಗಲಿ, ಭಾರತದ ಗಡಿಗಳು? ಸುತ್ತಲೂ ವೈರಿಗಳಿಂದ ಕೂಡಿರುವ ಭಾರತದ ಪೂರ್ವದಲ್ಲಿ ಸಾವಿರಾರು  ಕಿ.ಮೀ. ಗಡಿ ಇನ್ನೂ ತೆರೆದಿದೆ. ಪಕ್ಕದ ಬಾಂಗ್ಲಾ ದೇಶದಿಂದ ನುಸುಳುಕೋರರು ಪ್ರತಿನಿತ್ಯ ಭಾರತದ ನೆಲದೊಳಗೆ ನುಗ್ಗಿ ಬರುತ್ತಿದ್ದಾರೆ. ಮಾದಕ ದ್ರವ್ಯ, ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆಯಿಂದ ಹಿಡಿದು ಪ್ರತಿಯೊಂದು ರೀತಿಯ ದುಷ್ಕೃತ್ಯಗಳಲ್ಲೂ ಈ ಬಾಂಗ್ಲಾದೇಶಿಗಳು ತೊಡಗಿರುವುದು ತಿಳಿದಿರುವ ವಿಷಯವೇ. ಪರಿಸ್ಥಿತಿ ಹೀಗಿರುವಾಗ ಗೊತ್ತಿದ್ದೂ ಗೊತ್ತಿದ್ದೂ ರೋಹಿಂಗ್ಯಾ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ನೀಡಬೇಕು ಎನ್ನುತ್ತಿರುವವರು ಖಂಡಿತ ಭಾರತದ ಹಿತೈಷಿಗಳಲ್ಲ.
ಈ ರೋಹಿಂಗ್ಯಾ ಮುಸ್ಲಿಮರು ನಮ್ಮ ಕಾಶ್ಮೀರಿ ಮುಸ್ಲಿಮರಂತೆ ಪ್ರತ್ಯೇಕತೆಯ ಕೂಗು ಹಾಕಿ ಮ್ಯಾನ್ಮಾರ್ ದೇಶದಲ್ಲಿ ಸಮಾ ಬಾರಿಸಿಕೊಂಡು ಅಲ್ಲಿಂದ ಕಾಲ್ಕಿತ್ತವರು. ೧೯೪೦ರಿಂದೀಚೆಗೆ ಸತತವಾಗಿ ಶಸ್ತ್ರ ಸಹಿತ ಹೋರಾಟದಲ್ಲಿ ನಿರತರಾಗಿದ್ದ ರೋಹಿಂಗ್ಯಾ ಮುಸ್ಲಿಮರಲ್ಲಿ ಬಹುಪಾಲು ಮಂದಿ ಅಸಲಿಗೆ ಬಾಂಗ್ಲಾದೇಶಿಗಳು ಅಂತ ಮ್ಯಾನ್ಮಾರ್ ಸರಕಾರ ಹೇಳುತ್ತದೆ. ಅದೇನೇ ಇರಲಿ, ೨೦೧೨-೧೩ ರಿಂದೀಚೆಗೆ ಗುಳೆ ಏಳಲು ಪ್ರಾರಂಭಿಸಿದ ಈ ರೋಹಿಂಗಿಗಳು ಅಕ್ಕಪಕ್ಕದ ದೇಶಗಳಿಗೆ ನುಗ್ಗಿದರು. ಮೊದಲೇ ಹೇಳಿದಂತೆ ಬಹುತೇಕ ಭಾಗಗಳಲ್ಲಿ ಮುಕ್ತವಾಗಿರುವ ಭಾರತ-ಮ್ಯಾನ್ಮಾರ್, ಭಾರತ-ಬಾಂಗ್ಲಾ ಗಡಿಗಳನ್ನು ಸಲೀಸಾಗಿ ದಾಟಿ ನಲ್ವತ್ತು ಸಾವಿರಕ್ಕಿಂತಲೂ ಮಿಕ್ಕಿ ರೋಹಿಂಗಿ ಮುಸ್ಲಿಮರು ಭಾರತದಲ್ಲಿ ಠಿಕಾಣಿ ಹೂಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಜಮ್ಮು, ದೆಹಲಿ, ಹೈದರಾಬಾದುಗಳಲ್ಲಿ ಬೀಡು ಬಿಟ್ಟಿದ್ದಾರೆ.
ಇದೀಗ ಕೇಂದ್ರ ಸರಕಾರ ರೋಹಿಂಗಿಗಳನ್ನು ಹೊರದಬ್ಬುವ ನಿರ್ಣಯ ತೆಗೆದುಕೊಂಡಿದೆ ಮತ್ತು ರಾಜ್ಯ ಸರಕಾರಗಳಿಗೆ ಆದೇಶವನ್ನೂ ತಲುಪಿಸಿದೆ. ನಿರೀಕ್ಷಿಸಿದಂತೆ ಮಾನವ ಹಕ್ಕು ಹೋರಾಟಗಾರರು ಕೇಂದ್ರ ಸರಕಾರದ ವಿರುದ್ಧ, ರೋಹಿಂಗಿಗಳ ಪರವಾಗಿ ದನಿ ಎತ್ತತೊಡಗಿದ್ದಾರೆ. ಸಕಲ ದೇಶ ವಿರೋಧಿಗಳ ವಕಾಲತ್ತು ವಹಿಸುವ ಪ್ರಶಾಂತ್ ಭೂಷಣ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಮುಂತಾದ ಕುಖ್ಯಾತ ಎನ್ ಜಿ ಓಗಳು ಬೀದಿಗಿಳಿದಿವೆ.  ಅಸಾದುದ್ದೀನ್ ಓವೈಸಿ ಮುಂತಾದ ಮುಸಲ್ಮಾನ ನಾಯಕರು ರಾಜಕೀಯ ಅವಕಾಶವನ್ನು ಅರಸುತ್ತಿದ್ದಾರೆ. ಎಲ್ಲಾ ಎಡಪಂಥೀಯರು, ಲಿಬರಲ್ಲುಗಳು ರೋಹಿಂಗಿಗಳ ಬೆನ್ನಿಗೆ ನಿಂತಿರುವುದು ಸಹಜವೇ. ಸಂಕ್ಷಿಪ್ತವಾಗಿ ಹೇಳುವುದಾದರೆ, ಯಾಕೂಬನಿಗಾಗಿ ಕಂಬನಿ ಮಿಡಿದವರೆಲ್ಲರ ಹೃದಯಗಳು ರೋಹಿಂಗಿಗಳಿಗಾಗಿ ಕಿತ್ತು ಬರುತ್ತಿದೆ.
ಭಾರತಕ್ಕೆ ನಿರಾಶ್ರಿತರು ಹೊಸಬರೇನಲ್ಲ. ಅನಾದಿಕಾಲದಿಂದಲೂ ಪಾರ್ಸಿಗಳು, ಯಹೂದಿಗಳು, ಕ್ರೈಸ್ತರಷ್ಟೇ ಏಕೆ, ಮುಸಲ್ಮಾನರೂ ಕೂಡ ಭಾರತದಲ್ಲಿ ನೆಲೆ ಹುಡುಕಿ ಬಂದು ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಲಕ್ಷಾಂತರ ಮಂದಿ ಟಿಬೆಟಿಯನ್ನರು ಇವತ್ತು ಭಾರತೀಯರೇ ಆಗಿ ಹೋಗಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲೂ ಪಾಕಿಸ್ಥಾನ, ಬಾಂಗ್ಲಾ, ಅಫ್ಗಾನ್, ಶ್ರೀಲಂಕಾ ಮುಂತಾದ ದೇಶಗಳಿಂದ ಬಂದ ಅಸಂಖ್ಯಾತ ನಿರಾಶ್ರಿತರಿಗೆ ಭಾರತ ಸೂರು ನೀಡಿದೆ. ಹಾಗಂತ ಇನ್ನೊಂದು ದೇಶದ ಪೀಡೆಯನ್ನು ತಂದು ತನ್ನ ನೆಲದಲ್ಲಿ ಸಾಕುವ ಅವಶ್ಯಕತೆ ಭಾರತಕ್ಕಿಲ್ಲ. ಇಂಥದ್ದೇ ಮೂರ್ಖತನ ಮಾಡಿದ ಯುರೋಪ್ ಇಂದು ಪಶ್ಚಾತಾಪ ಪಡುತ್ತಿದೆ. ರೋಹಿಂಗಿಗಳನ್ನು ತುರ್ತಾಗಿ ಹೊರದಬ್ಬುವ ನಿರ್ಧಾರಕ್ಕೆ ಕಾರಣಗಳಿವೆ.
ಈ ರೋಹಿಂಗಿಗಳು ಆಶ್ರಯ ಕೋರಿ ಬಂದ ನಿರಾಶ್ರಿತರಲ್ಲ. ಭಾರತದ ಗಡಿ ಕಾವಲು ವ್ಯವಸ್ಥೆಯ ಲೋಪಗಳ ದುರ್ಲಾಭವೆತ್ತಿ ಅಕ್ರಮವಾಗಿ ಬಂದ ನುಸುಳುಕೋರರು. ಮೊದಲೇ ಹೇಳಿದಂತೆ ದಶಕಗಳಿಂದಲೂ ಪ್ರತ್ಯೇಕತೆ, ಅದರಲ್ಲೂ ಇಸ್ಲಾಮಿಕ್ ಪ್ರೇರಿತ ಪ್ರತ್ಯೇಕತೆಯ ವಿಷ ಉಂಡ ಜನಾಂಗ ಅವರದ್ದು. ಇವತ್ತು ಈ ವಲಸೆಕೋರರು ಭಾರತದ ಮುಂದೆ ಸಾಮಾಜಿಕ, ಆರ್ಥಿಕ ಮತ್ತು ರಕ್ಷಣಾತ್ಮಕವಾಗಿ ಬಲವಾದ ಸವಾಲಾಗಿದ್ದಾರೆ.
ಮ್ಯಾನ್ಮಾರ್, ಬಾಂಗ್ಲಾ ಮತ್ತು ಭಾರತದ ಗುಪ್ತಚರ ಇಲಾಖೆಗಳು ರೋಹಿಂಗ್ಯಾ ಮುಸ್ಲಿಮರ ಉಗ್ರ ನಂಟಿನ ಬಗ್ಗೆ ಎಚ್ಚರಿಕೆ ನೀಡಿದ್ದಾವೆ. ಪಾಕಿಸ್ತಾನದ ಐಖಐನಿಂದ ಹಿಡಿದು ಲಷ್ಕರ್, ಅಲ್ ಕಾಯ್ದಾ ಮುಂತಾದ ಭಯೋತ್ಪಾದಕ ಸಂಘಟನೆಗಳ ದೃಷ್ಟಿ ಇವರ ಮೇಲೆ ನೆಟ್ಟಿದೆ. ರೋಹಿಂಗಿಗಳ ಸ್ವಂತ ಉಗ್ರ ಸಂಘಟನೆ,
‘ಅಕ ಮುಲ್ ಮುಜಾಹಿದೀನ್’ ಕಾಶ್ಮೀರಿ ಪ್ರತ್ಯೇಕತಾವಾದಿಗಳೊಂದಿಗೆ ಸಂಬಂಧವಿರಿಸಿಕೊಂಡಿರುವ ಬಗ್ಗೆ ಬಲವಾದ ಮಾಹಿತಿಗಳಿವೆ. ಅನೇಕರು ಪಾಕಿಸ್ತಾನದಲ್ಲಿ ತರಬೇತಿ ಪಡೆದುಕೊಂಡಿರುವ ಸಾಧ್ಯತೆಗಳೂ ಇವೆ. 2015ರಲ್ಲಿ ಕಾಶ್ಮೀರದಲ್ಲಿ ಗುಂಡು ತಿಂದು ಸತ್ತ ಛೋಟಾ ಬರ್ಮಿ ಎಂಬ ಉಗ್ರವಾದಿ ರೋಹಿಂಗ್ಯಾ ಮುಸಲ್ಮಾನನಾಗಿದ್ದ ಎಂಬ ವಿಷಯ ಈ ಮಾಹಿತಿಗೆ ಬಲವಾದ ಪುಷ್ಠಿ ನೀಡುತ್ತದೆ. ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರು ಇತ್ತೀಚಿಗೆ ರೋಹಿಂಗಿಗಳ ಪರವಾಗಿ ಒಂದು ಹಿಂಸಾತ್ಮಕವಾದ ಸಭೆ ನಡೆಸಿದ್ದರು. ಈ ರೋಹಿಂಗಿಗಳನ್ನು ಕಿತ್ತೆಸೆಯಲು ಇನ್ನೇನು ಸಬೂತು ಬೇಕು?
ಭಾರತ ಈ ವಿಷಯದಲ್ಲಿ ಕ್ಷಿಪ್ರವಾಗಿ ಕಾರ್ಯಗತವಾಗಬೇಕಾಗಿದೆ. ಅದಾಗಲೇ ಅನೇಕರು ಆಧಾರ್ ಮುಂತಾದ ಗುರುತಿನ ಚೀಟಿಗಳನ್ನೂ ಪಡೆದುಕೊಂಡಿದ್ದಾರೆ. ರೋಹಿಂಗಿಗಳು ಇನ್ನಷ್ಟು ಬಲವಾಗಿ ಬೇರೂರುವ ಮುನ್ನ ಕಿತ್ತೆಸೆಯಬೇಕಿದೆ. ಕಾನೂನು ಈ ವಿಷಯದಲ್ಲಿ ಹಸ್ತಕ್ಷೇಪ  ಮಾಡುವ ಸಾಧ್ಯತೆಗಳು ತೀರಾ ಕಡಿಮೆ. ಈ ಹಿಂದೆಯೂ ಇಂಥ ವಿಷಯಗಳಲ್ಲಿ ನ್ಯಾಯಾಲಯ ಸರಕಾರಕ್ಕೆ ಸಂಪೂರ್ಣ
ಅಧಿಕಾರ ನೀಡಿತ್ತು. ಭಾರತಕ್ಕೆ ಅಗತ್ಯವಿರುವುದು ಇಚ್ಛಾಶಕ್ತಿ. ಭಾರತ ಈ ಬಾರಿ ಎಡವಿದರೆ ಮುಂದೆ ಇಂಥ ನುಸುಳುಕೋರರನನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾದೀತು.
ಅದೃಷ್ಟವಶಾತ್ ಕೇಂದ್ರ ಸರಕಾರ ತನ್ನ ನಿಲುವಿಗೆ ಬದ್ಧವಾಗಿದೆ. ಇವತ್ತು ಇಸ್ಲಾಮಿಕ್ ಉಗ್ರವಾದದ ಬಲುದೊಡ್ಡ ಗುರಿಯಾಗಿರುವ ಭಾರತಕ್ಕೆ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವ ಆವಶ್ಯಕತೆಯಿದೆ. ಕೇವಲ ರೋಹಿಂಗಿಗಳನ್ನು ಹೊರದಬ್ಬುವುದು ಮಾತ್ರವಲ್ಲ, ನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕಾಗಿದೆ. ದೇಶದೊಳಗಿನ ಮತ್ತು ಅಂತಾರಾಷ್ಟ್ರೀಯ ಒತ್ತಡದ ಹೊರತಾಗಿಯೂ ಕೇಂದ್ರ ಸರಕಾರ ಇಂಥದ್ದೊಂದು ಕ್ರಮಕ್ಕೆ ಮುಂದಾಗಿರುವುದು ಪ್ರಶಂಸನೀಯ.  ಹೆಚ್ಚೆಂದರೆ ‘ಮೈ ನೇಮ್ ಈಸ್ ಖಾನ್’ ಥರದ ಮತ್ತೊಂದು ಕಳಪೆ ಸಿನಿಮಾ ಭಾರತವನ್ನು ಟೀಕಿಸಿ ಹೊರಬರಬಹುದು. ಬರಲಿ. ದೇಶ ಗಟ್ಟಿಯಾಗುವುದು ಮುಖ್ಯ. ನಮಗೆ ಇನ್ನೊಂದು 26/10 ಬೇಡ.

LEAVE A REPLY