ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಶರೀಫ್ ಬ್ಯಾಂಕ್ ಖಾತೆ, ಆಸ್ತಿ ಮುಟ್ಟುಗೋಲು

ಇಸ್ಲಾಮಾಬಾದ್: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆ, ಆಸ್ತಿಪಾಸ್ತಿಗಳನ್ನು ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿದೆ.
ಈ ಮೂಲಕ ಭಾರೀ ಭ್ರಷ್ಟಾಚಾರ ಮತ್ತು ಕಾಳಧನ ಪರಿವರ್ತನೆ ಆರೋಪ ಎದುರಿಸುತ್ತಿರುವ ನವಾಜ್ ಷರೀಫ್‌ಗೆ ಸರ್ಕಾರ ಆರ್ಥಿಕ ಹೊಡೆತ ನೀಡಿದೆ.
ರೈವಿಂಡ್‌ನಲ್ಲಿರುವ ಷರೀಫ್ ನಿವಾಸದ ಬಾಗಿಲಿಗೆ ಖಾತೆಗಳ ಸ್ತಂಭನ ಮತ್ತು ಆಸ್ತಿ-ಪಾಸ್ತಿ ಮುಟ್ಟುಗೋಲಿಗೆ ಸಂಬಂಧಪಟ್ಟ ನೋಟಿಸ್‌ಗಳನ್ನು ಅಂಟಿಸಲಾಗಿದ್ದು, ಷರೀಫ್ ಮತ್ತವರ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ ತಿಳಿಸಿದೆ.

LEAVE A REPLY