ಮೋದಿ ಸ್ವಚ್ಛತಾ ಹಿ ಸೇವಾ  ಕಾರ್ಯಕ್ರಮಕ್ಕೆ ರಜನಿಕಾಂತ್ ಸಂಪೂರ್ಣ ಬೆಂಬಲ

ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್  ಪ್ರಧಾನಿ ನರೇಂದ್ರ ಮೋದಿ ಅವರ  ಸ್ವಚ್ಛತಾ ಹಿ ಸೇವಾ  ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ನೈರ್ಮಲ್ಯಾಭಿವೃದ್ಧಿಗಾಗಿ ಈ ಯೋಜನೆಗೆ ಚಾಲನೆ ನೀಡಿದ್ದರು.
ಗೌರವಾನ್ವಿತ ಪ್ರಧಾನಿ ಅವರು ಆರಂಭಿಸಿದ ಸ್ವಚ್ಛತಾ ಸೇವಾ ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ. ಸ್ವಚ್ಛತೆಯಲ್ಲಿಯೇ ದೇವರನ್ನು ಕಾಣಬೇಕು ಎಂದು ಅವರು ಹೇಳಿದ್ದಾರೆ.
ಎಂದಿಗೂ ಕೂಡ ತಮ್ಮ  ಸಿನಿಮಾ ವಿಚಾರಗಳಿಂದಾಗಿ ಸುದ್ದಿಯಲ್ಲಿರುತ್ತಿದ್ದ ರಜನಿಕಾಂತ್ ಅವರು  ಇತ್ತೀಚೆಗೆ ಅನೇಕ ರಾಜಕೀಯ ವಿಚಾರಗಳಿಗಾಗಿ ಸುದ್ದಿಯಾಗುತ್ತಿದ್ದಾರೆ. ದೇವರ ಇಚ್ಛೆ ಇದ್ದಲ್ಲಿ ತಾವು ರಾಜಕೀಯ ಪ್ರವೇಶ ಮಾಡುವುದಾಗಿ ಅವರು ಹೇಳಿದ್ದರು. ಅಲ್ಲದೆ, ಯಾವುದೇ ಪಕ್ಷಗಳಿಗೂ ತಾವು ಬೆಂಬಲ ಸೂಚಿಸುವುದಿಲ್ಲ. ಇಂದಿನ ಸ್ಥಿತಿಗತಿ ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಕೂಡಿದೆ. ಇದನ್ನು ನಾವೆಲ್ಲರೂ ಸೇರಿ ಬದಲಾಯಿಸಬೇಕಿದೆ ಎಂದೂ ಕೂಡ ಅವರು ಹೇಳಿದ್ದರು. ಇದೇ ವೇಳೆ ಇನ್ನೋರ್ವ ನಟ ಕಮಲ್ ಹಾಸನ್ ಅವರೂ ಕೂಡ  ರಾಜಕೀಯ ಪ್ರವೇಶದ  ಬಗ್ಗೆ ಸುಳಿವು ನೀಡಿದ್ದಾರೆ.

LEAVE A REPLY