30,000 ಯುವಕ, 26,000 ಶಿಕ್ಷಕರಿಗೆ ತರಬೇತಿ : ದೇಶದ ಪ್ರಗತಿಗೆ ಮೈಕ್ರೋಸಾಫ್ಟ್ ಭಾರಿ ಕೊಡುಗೆ

ಹೊಸದಿಲ್ಲಿ: ದೇಶದಲ್ಲಿ ಏಪ್ರಿಲ್ 2016 ಮತ್ತು ಮಾರ್ಚ್ 2017ರ ನಡುವೆ ವಿವಿಧ ರಾಜ್ಯ ಸರ್ಕಾರಗಳು ಮತ್ತು ಎನ್‌ಪಿಒಗಳ ಜೊತೆ ಕಾರ್ಯನಿರ್ವಹಿಸುವ ವೇಳೆ 4,000ಕ್ಕೂ ಹೆಚ್ಚು ಹೊಸದಾಗಿ ಸ್ಥಾಪಿತ ಭಾರತೀಯ ವ್ಯಾಪಾರ ಸಂಸ್ಥೆಗಳಿಗೆ ಬೆಂಬಲವನ್ನು , 30 ಸಾವಿರ ಯುವ ಜನತೆಗೆ ಕೌಶಲ್ಯ ತರಬೇತಿ ಮತ್ತು 26,000 ಅಧ್ಯಾಪಕರಿಗೆ ತರಬೇತಿ ನೀಡಲು ಮೈಕ್ರೋಸಾಫ್ಟ್ ಸಹಾಯ ಮಾಡಿದೆ.
ಭಾರತದ ವಾಣಿಜ್ಯೋದ್ಯಮ ಮುಂದಿನ ವರ್ಷಗಳಲ್ಲಿ ದೇಶದ ದೃಢವಾದ ಆರ್ಥಿಕ ಪ್ರಗತಿಗೆ ಸಹಾಯ ಮಾಡಲಿದೆ ಮತ್ತು ಹೊಸದಾಗಿ ಸ್ಥಾಪಿತ ಭಾರತೀಯ ವ್ಯಾಪಾರ ಸಂಸ್ಥೆಗಳ ಪ್ರಗತಿಯ ಕಥೆಗಳಿಗೆ ಕೊಡುಗೆ ನೀಡುವುದರಲ್ಲಿ ಬದ್ಧವಾಗಿದೆ ಎಂದು ಭಾರತೀಯ ನಾಗರಿಕತ್ವ ವರದಿ-2017ರಲ್ಲಿ ಮೈಕ್ರೋಸಾಫ್ಟ್ ಇಂಡಿಯಾ ಹೇಳಿದೆ.
ಬಿಜ್‌ಸ್ಪಾರ್ಕ್, ಮೈಕ್ರೋಸಾಫ್ಟ್ ಏಕ್ಸಿಲರೇಟರ್ ಮುಂತಾದ ಕಾರ್ಯಕ್ರಮಗಳ ಮೂಲಕ ಮೈಕ್ರೋಸಾಫ್ಟ್ ಇಂಡಿಯಾ ಕಂಪೆನಿಯು ದೇಶದಲ್ಲಿ ಹೊಸದಾಗಿ ಸ್ಥಾಪಿತ ವ್ಯಾಪಾರ ಸಂಸ್ಥೆಗಳನ್ನು ಬೆಂಬಲಿಸಿದೆ ಮತ್ತು ಮಾರ್ಗದರ್ಶನ ನೀಡಿದೆ. ಬಿಜ್‌ಸ್ಪಾರ್ಕ್, ಮೈಕ್ರೋಸಾಫ್ಟ್‌ನ ಒಂದು ಪ್ರಮುಖ ಉಪಕ್ರಮವಾಗಿದೆ. ಹೊಸದಾಗಿ ಸ್ಥಾಪಿತವಾಗಿ ಆರಂಭದ ಹಂತದಲ್ಲಿರುವ ಸಂಸ್ಥೆಗಳಿಗೆ ಬೆಂಬಲಿಸುವ ಗುರಿಯೊಂದಿಗೆ ಈ ಬಿಜ್‌ಸ್ಪಾರ್ಕ್ ಕಾರ್ಯಕ್ರಮವನ್ನು ಮೈಕ್ರೋಸಾಫ್ಟ್ ಹಮ್ಮಿಕೊಂಡಿತ್ತು. 100ಕ್ಕೂ ಹೆಚ್ಚು ಹೊಸದಾಗಿ ಸ್ಥಾಪಿತ ಭಾರತೀಯ ವ್ಯಾಪಾರ ಸಂಸ್ಥೆಗಳು ಬಿಜ್‌ಸ್ಪಾರ್ಕ್ ಪ್ಲಸ್ ಕಾರ್ಯಕ್ರಮ 2016-17ಕ್ಕೆ ಆಯ್ಕೆಯಾದವು. ಅದು ಅವುಗಳ ಗ್ರಾಹಕರ ಮೂಲವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಿತು.
ಮೈಕ್ರೋಸಾಫ್ಟ್ ಏಕ್ಸಿಲರೇಟರ್ ಕಾರ್ಯಕ್ರಮವು ಹೊಸದಾಗಿ ಸ್ಥಾಪಿತ ಸಂಸ್ಥೆಗಳು ದೊಡ್ಡ ಕಂಪೆನಿಗಳ ನಿರ್ಮಾಣದ ಗುರಿಯತ್ತ ಸಾಗಲು ಸಹಾಯ ಮಾಡಿದೆ. ಹೊಸ ನಿರ್ಮಿತ ಸಂಸ್ಥೆಗಳ ಜೊತೆ ಕೆಲಸ ಮಾಡುತ್ತ, ಅವುಗಳು ಯಶಸ್ವಿ ಕಂಪೆನಿಗಳಾಗಿ ಮಾರುಕಟ್ಟೆಯಲ್ಲಿ ಬೆಳೆಯಲು ಅಗತ್ಯವಿರುವ ಸಂಪನ್ಮೂಲಗಳು, ಸಂಪರ್ಕಗಳು, ಸಂಪೂರ್ಣ ಜ್ಞಾನ ಮತ್ತು ಪರಿಣತಿಯನ್ನು ಮೈಕ್ರೋಸಾಫ್ಟ್ ಏಕ್ಸಿಲರೇಟರ್ ಕಾರ್ಯಕ್ರಮ ನೀಡಿದೆ.
ಶಿಕ್ಷಾ ಯೋಜನೆಯಡಿ, ಮೈಕ್ರೋಸಾಫ್ಟ್ ಇಂಡಿಯಾ ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ೮,೧೨೪ ಅಧ್ಯಾಪಕರಿಗೆ ತರಬೇತಿ ನೀಡಿದ್ದು, ಇದು ೩,೬೧,೦೦೦ ವಿದ್ಯಾರ್ಥಿಗಳಿಗೆ ಪರಿಣಾಮ ಬೀರಿದೆ. ಸಾಕ್ಷಂ ಯೋಜನೆಯಡಿ, 123 ವಿಶ್ವವಿದ್ಯಾಲಯಗಳಲ್ಲಿ 3,307 ಶಿಕ್ಷಕರಿಗೆ ತರಬೇತಿ ನೀಡಿದೆ. ಅವರು ಮತ್ತೆ 1,126 ಮಂದಿಗೆ ತರಬೇತಿ ನೀಡಿದ್ದಾರೆ. 2016-17ರಲ್ಲಿ  660 ಶಿಕ್ಷಕರಿಗೆ 21 ವಿಶ್ವವಿದ್ಯಾಲಯಗಳಲ್ಲಿ ತರಬೇತಿ ನೀಡಲಾಗಿದೆ.

LEAVE A REPLY