ಆಸ್ಕರ್ ಪ್ರಶಸ್ತಿ ಪ್ರವೇಶಕ್ಕಾಗಿ ರಾಜ್ ಕುಮಾರ್ ರಾವ್ ಅಭಿನಯದ ನ್ಯೂಟನ್ ಆಯ್ಕೆ

ಹೊಸದಿಲ್ಲಿ: ರಾಜ್ ಕುಮಾರ್ ರಾವ್ ಅಭಿನಯದ ನ್ಯೂಟನ್, ಆಸ್ಕರ್ ಪ್ರಶಸ್ತಿಗಳ ಅತ್ಯುತ್ತಮ ವಿದೇಶಿ ಭಾಷಾ ವಿಭಾಗಕ್ಕೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಗಿದೆ ಎಂದು ಭಾರತೀಯ ಚಲನಚಿತ್ರ ಒಕ್ಕೂಟ ಶುಕ್ರವಾರ ಪ್ರಕಟಿಸಿದೆ.
ರಾಜಕೀಯ ವಿಡಂಬನೆಯಲ್ಲಿ ಪ್ರಮುಖಪಾತ್ರ ವಹಿಸಿರುವ ನಟ ರಾಜ್‌ಕುಮಾರ್ ಈ ದೊಡ್ಡ ಸುದ್ದಿಯನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಚಿತ್ರದ ಬಿಡುಗಡೆ ಸಮಯಕ್ಕೆ ಸರಿಯಾಗಿ ಈ ಸುದ್ದಿ ಪ್ರಕಟವಾಗಿದೆ. ಈ ವರ್ಷ ಆಸ್ಕರ್ ಪ್ರಶಸ್ತಿಗಾಗಿ ಭಾರತದ ಅಧಿಕೃತ ಪ್ರವೇಶವನ್ನು ನ್ಯೂಟನ್ ಪಡೆದಿರುವ ಸುದ್ದಿಯನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ತಂಡಕ್ಕೆ ಅಭಿನಂದನೆಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಹೆಸರಾಂತ ಚಲನಚಿತ್ರ ದಿಗ್ಗಜ ಪಿ.ವಿ. ರೆಡ್ಡಿ ಅಧ್ಯಕ್ಷತೆಯಲ್ಲಿ ಭಾರತೀಯ ಚಲನಚಿತ್ರ ಒಕ್ಕೂಟ ರಚಿಸಿದ್ದ ವಿವಿಧ ಭಾಷೆಗಳ ಚಲನಚಿತ್ರ ವೃತ್ತಿಪರರನ್ನು ಒಳಗೊಂಡ 14 ಸದಸ್ಯರ ತೀರ್ಪುಗಾರರ ಮಂಡಳಿ ಹಿಂದಿ ಚಲನಚಿತ್ರ ನ್ಯೂಟನ್‌ನ್ನು ಆಸ್ಕರ್‌ನ ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆ ಮಾಡಿದೆ ಎಂದು ಎಫ್‌ಎಫ್‌ಐ ಪ್ರಕಟಣೆ ತಿಳಿಸಿದೆ.
ಒಟ್ಟು 26 ಪ್ರವೇಶಗಳ ಪೈಕಿ ನ್ಯೂಟನ್‌ನ್ನು ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿದೆ ಸಮಿತಿಯಲ್ಲಿನ ಪ್ರತಿಯೊಬ್ಬರೂ ಅದನ್ನು ಮೆಚ್ಚಿದ್ದಾರೆ.

LEAVE A REPLY