ಡೆಬಿಟ್ ಕಾರ್ಡ್ ಬಳಸುವ ಮೂಲಕ ಪಾವತಿಗೆ ಐಆರ್‌ಸಿಟಿಸಿ ತಡೆ

ಹೊಸದಿಲ್ಲಿ: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಅನುಕೂಲ ಶುಲ್ಕವನ್ನು ಡೆಬಿಟ್ ಕಾರ್ಡ್ ಬಳಸುವ ಮೂಲಕ ಪಾವತಿಸುವುದನ್ನು ತಡೆಯಲು ಹಲವು ಬ್ಯಾಂಕ್‌ಗಳನ್ನು ನಿರ್ಬಂಧಿಸಿದೆ ಎಂದು ಶುಕ್ರವಾರ ವರದಿಯಾಗಿದೆ.
ಇಂಡಿಯನ್ ಓವರ್ಸೀಸ್ ಬ್ಯಾಂಕ್, ಕೆನರಾ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್‌ಗಳ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಕಾರ್ಡ್ ಪಾವತಿ ಮಾಡಲು ಅವಕಾಶವಿದೆ. ನೋಟು ಅಮಾನ್ಯೀಕರಣದ ಬಳಿಕ ಗ್ರಾಹಕರಿಂದ ಪಡೆದ 20 ರೂ. ಅನುಕೂಲ ಶುಲ್ಕವನ್ನು ಐಆರ್‌ಸಿಟಿಸಿ ಮನ್ನಾ ಮಾಡಿತ್ತು. ಆದರೆ ಗ್ರಾಹಕರು ರೈಲು ಟಿಕೇಟು ಖರೀದಿ ಮಾಡಿದಾಗ ಪಾವತಿಸುವ ಅನುಕೂಲ ಶುಲ್ಕದಲ್ಲಿ ಶೇ.50 ಭಾಗವನ್ನು ಹಂಚುವುದನ್ನು ಬ್ಯಾಂಕ್‌ಗಳಿಂದ ಐಆರ್‌ಸಿಟಿಸಿ ನಿರೀಕ್ಷಿಸಿತ್ತು. ಬ್ಯಾಂಕ್‌ಗಳು ಆ ಮೊತ್ತವನ್ನು ರೈಲ್ವೆ ಜೊತೆ ಹಂಚಿಕೊಂಡಿಲ್ಲ ಎಂದು ವರದಿಯಾಗಿದೆ.
ಈ ವಿಷಯವನ್ನು ಬಗೆಹರಿಸುವ ದೃಷ್ಟಿಯಿಂದ ಭಾರತೀಯ ಬ್ಯಾಂಕ್‌ಗಳ ಸಂಘ (ಐಬಿಎ), ಐಆರ್‌ಸಿಟಿಸಿ ಮತ್ತು ಭಾರತೀಯ ರೈಲ್ವೆ ಜೊತೆಗೆ ಚರ್ಚಿಸುತ್ತಿದೆ ಎನ್ನಲಾಗಿದೆ. ರೈಲ್ವೆ ಟಿಕೇಟು ಮತ್ತು ಪ್ರಯಾಣಿಕರ ಸೇವೆ ವ್ಯವಹಾರಗಳಿಗೆ ಫೆಬ್ರವರಿ 2016ರಂದು ಆರ್‌ಬಿಐ ನಿರ್ದೇಶನವನ್ನು ಪ್ರಕಟಿಸಿತ್ತು. ಆರ್‌ಬಿಐ ನಿರ್ದೇಶನ, 1,000 ರೂ. ತನಕದ ವ್ಯವಹಾರಕ್ಕೆ 5 ರೂ. ರಿಯಾಯಿತಿ ಮತ್ತು 1,000-2,000 ರೂ. ವ್ಯವಹಾರಕ್ಕೆ 10 ರೂ. ರಿಯಾಯಿತಿಯನ್ನು ಪ್ರಸ್ತಾಪಿಸಿತ್ತು.

LEAVE A REPLY