ಗುಮ್ನಾಮಿ ಬಾಬಾ ಅವರೇ ನೇತಾಜಿ ಸುಭಾಸ್ ಚಂದ್ರಬೋಸ್ ?

ಲಕ್ನೋ: ನೇತಾಜಿ ಸುಭಾಸ್ ಚಂದ್ರಬೋಸ್ ಎಂದೇ ಅನೇಕ ಜನರು ನಂಬಿದ್ದ ಫೈಝಾಬಾದ್‌ನ ಸಂನ್ಯಾಸಿ ಗುಮ್ನಾಮಿ ಬಾಬಾ ಅವರ ಗುರುತಿನ ಬಗ್ಗೆ ನ್ಯಾಯಾಧೀಶ (ನಿವೃತ್ತ) ವಿಷ್ಣು ಸಹಾಯ್ ಅವರು ತನ್ನ ವರದಿಯನ್ನು ಉ.ಪ್ರ. ರಾಜ್ಯಪಾಲ ರಾಮ್ ನಾಕ್ ಅವರಿಗೆ ಸಲ್ಲಿಸಿದ್ದಾರೆ.
ಆಯೋಗದ ಮುಂದೆ ಹೇಳಿಕೆ ನೀಡಿದ ಸಾಕ್ಷಿದಾರರಲ್ಲಿ ಹೆಚ್ಚಿನವರು ಗುಮ್ನಾಮಿ ಬಾಬಾ ಅವರೇ ನೇತಾಜಿ ಆಗಿದ್ದರು ಎಂದು ಹೇಳಿದ್ದಾರೆ ಎಂದು ಸಹಾಯಿ ತಿಳಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್‌ನ ನಿರ್ದೇಶನವೊಂದನ್ನು ಅನುಸರಿಸಿ ಕಳೆದ ವರ್ಷ ಜೂನ್‌ನಲ್ಲಿ ಆಗಿನ ಸಮಾಜವಾದಿ ಪಕ್ಷ ಸರ್ಕಾರ ನ್ಯಾಯಾಶ ಸಹಾಯ್ ಆಯೋಗವನ್ನು ಸ್ಥಾಪಿಸಿತ್ತು. ತಪಿಸ್ವಿ ಗುಮ್ನಾಯಿ ಬಾಬಾ ಅವರೇ ಸುಭಾಶ್ ಚಂದ್ರ ಬೋಸ್ ಆಗಿದ್ದರು ಎಂದು ಹೇಳಿ ವ್ಯಕ್ತಿಯೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದನ್ನು ಅನುಸರಿಸಿ ಆಯೋಗ ರಚಿಸಲು ಹೈಕೋರ್ಟ್ ನಿರ್ದೇಶಿಸಿತ್ತು.
`ಒಂದೋ ಖುದ್ದಾಗಿ ನನ್ನ ಮುಂದೆ ಹಾಜರಾದ ಸಾಕ್ಷಿದಾರರು ಅಥವಾ ಅವರು ಸಲ್ಲಿಸಿದ್ದ ಅಫಿದವಿಟ್‌ಗಳನ್ನು ಹೇಳಿಕೆಗಳೆಂದು ನಾನು ಪರಿಗಣಿಸಿರುವ ಸಾಕ್ಷಿದಾರರು ಆಯೋಗಕ್ಕೆ ಲಭಿಸಿರುವ ಪುರಾವೆಗಳ ಪ್ರಾಥಮಿಕ ಮೂಲಗಳು. ಹೆಚ್ಚಿನ ಸಾಕ್ಷಿದಾರರು ಗುಮ್ನಾಮಿ ಬಾಬಾ ಅವರೇ ನೇತಾಜಿ ಆಗಿದ್ದರು ಅಥವಾ ನೇತಾಜಿ ಆಗಿದ್ದಿರಬಹುದು ಎಂದು ಹೇಳಿದ್ದಾರೆ. ಕೆಲವು ಸಾಕ್ಷಿದಾರರು ಅವರು ನೇತಾಜಿ ಆಗಿರಲಿಲ್ಲ ಎಂದೂ ಹೇಳಿದ್ದಾರೆ’ ಎಂದು ನ್ಯಾಯಾಧೀಶ ಸಹಾಯ್ ಅವರು ತನ್ನ 347 ಪುಟಗಳ ವರದಿಯನ್ನು ಸಲ್ಲಿಸಿದ ನಂತರ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ವರದಿಯ ಅಂಶಗಳನ್ನು ಬಹಿರಂಗಪಡಿಸಿದ ನ್ಯಾಯಾಧಿಶ ಸಹಾಯ್, ಗುಮ್ನಾಯಿ ಬಾಬಾ ಅವರ ನಿಧನ ಮತ್ತು ಸಾಕ್ಷಿದಾರರನ್ನು ಆಯೋಗ ವಿಚಾರಣೆ ನಡೆಸಿದ ನಡುವಿನ ಅಗಾಧ ಸಮಯದ ಅಂತರ ಒಂದು ದೊಡ್ಡ ಸವಾಲಾಗಿತ್ತು ಎಂದು ಹೇಳಿದರು.
ಗುಮ್ನಾಮಿ ಬಾಬ 1985ರಲ್ಲಿ ನಿಧನರಾದರು. ಸಾಕ್ಷಿದಾರರು 2016 ಮತ್ತು 2017ರಲ್ಲಿ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ಈ ನಡುವೆ ಮೂರು ದಶಕಗಳಿಗೂ ಹೆಚ್ಚಿನ ಸಮಯದ ಅಂತರವಿದೆ. ಸಮಯ ಕಳೆದಂತೆ ಅವರ ನೆನಪು ಕ್ಷೀಣಿಸಿದೆ. ಕೆಲವೊಮ್ಮೆ ಅವರು ಹೇಳಿಕೆ ನೀಡಿರುವ ಘಟನೆಗಳು ಮತ್ತು ಸಂಗತಿಗಳ ಬಗ್ಗೆ ಅವರು ಊಹಿಸಿಕೊಳ್ಳುವ ಸಾಧ್ಯತೆ ಇತ್ತು ಎಂದು ನ್ಯಾಯಾಧೀಶ ಸಹಾಯ್ ಹೇಳಿದರು.
ಹೇಳಿಕೆಗಳ ಮೌಲ್ಯಮಾಪನ ಮಾಡುವಾಗ ಗುಮ್ನಾಮಿ ಬಾಬಾ ಅವರ ಚಹರೆ ಬಗ್ಗೆ ಅನೇಕ ಸಾಕ್ಷಿದಾರರು ಹೊಂದಿದ್ದ ಬಲವಾದ ನಂಬಿಕೆಯೊಂದಿಗೆ ಅವರು ವ್ಯವಹರಿಸಬೇಕಾಗಿದ್ದುದು ಇನ್ನೊಂದು ಅಂಶವಾಗಿದೆ.
ಗುಮ್ನಾಮಿ ಬಾಬಾರ ಗುರುತನ್ನು ಪತ್ತೆ ಹಚ್ಚುವುದು ಆಯೋಗದ ಕೆಲಸವಾಗಿತ್ತು. ಹೆಚ್ಚಿನ ಸಾಕ್ಷಿದಾರರು ಗುಮ್ನಾಮಿ ಬಾಬ ಅವರು ನಿಜವಾಗಿಯೂ ನೇತಾಜಿ ಆಗಿದ್ದರೆಂಬ ಪೂರ್ವ ಸಿದ್ಧಾಂತದೊಂದಿಗೆ ಹೇಳಿಕೆ ಆರಂಭಿಸಿದ್ದರು. ಒಂದು ವೇಳೆ ಆಯೋಗ ತಮ್ಮ ಪೂರ್ವ ಸಿದ್ಧಾಂತವನ್ನು ಒಪ್ಪದಿದ್ದಲ್ಲಿ ಮಾತ್ರ ಗುಮ್ನಾಮಿ ಬಾಬಾರ ಗುರುತನ್ನು ಪತ್ತೆಹಚ್ಚಲು ಪ್ರಯತ್ನಿಸಬೇಕು ಎಂಬುದು ಅವರ ನಿಲುವಾಗಿತ್ತು ಎಂದು ನ್ಯಾಯಾಧೀಶ ಸಹಾಯ್ ಹೇಳಿದರು.

LEAVE A REPLY