ಕಾಶ್ಮೀರ ಕಣಿವೆಯಲ್ಲಿ ಶಸ್ತ್ರಾಸ್ತ್ರ ಸಹಿತ ಟೆರರಿಸ್ಟ್‌ಗಳಿಬ್ಬರ ಬಂಧನ

ಶ್ರೀನಗರ: ಜಮ್ಮು-ಕಾಶ್ಮೀರ ಪ್ರದೇಶದ ಬನ್ನಿಹಾಳ್‌ನ ಜವಾಹರ್ ಸುರಂಗದ ಬಳಿಯಿರುವ ಸಶಸ್ತ್ರ ಸೀಮಾ ಬಲ್ ಕ್ಯಾಂಪ್ ಮೇಲೆ ನಡೆದಿದ್ದ ಭದ್ರತಾ ಸಿಬ್ಬಂದಿ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ.
ಪ್ರಾಥಮಿಕ ತನಿಖೆಯ ಆಧಾರದಲ್ಲಿ ಬಂಧಿತರನ್ನು ಗಾಜನ್‌ಫೆರ್ ಹಾಗೂ ಅರೀಫ್ ಎಂದು ಗುರುತಿಸಲಾಗಿದೆ.
ಬುಧವಾರ ಉಗ್ರರು ನಡೆಸಿದ ಈ ದಾಳಿಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಸಾವನ್ನಪ್ಪಿ, ಮತ್ತೋರ್ವ ಸಿಬ್ಬಂದಿ ಗಾಯಗೊಂಡಿದ್ದರು. ಈ ದಾಳಿಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಇಂದು ಈ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ ಭಾರೀ ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

LEAVE A REPLY