ಮೆಡಿಟರೇನಿಯನ್ ಸಮುದ್ರದಲ್ಲಿ ದೋಣಿ ದುರಂತ: ಕನಿಷ್ಟ ನೂರು ಮಂದಿ ಜಲಸಮಾಧಿ

ಟ್ರಿಪೋಲಿ: ಪಶ್ಚಿಮ ಲಿಬಿಯಾ ಮೆಡಿಟರೇನಿಯನ್ ಸಮುದ್ರದಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಕನಿಷ್ಟ ನೂರು ಮಂದಿ ಸಾವನ್ನಪ್ಪಿದ್ದಾರೆ.
ಲಿಬಿಯಾದಿಂದ ವಲಸಿಗರನ್ನು ಅಪಾಯಕಾರಿ ರೀತಿಯಲ್ಲಿ ಯುರೋಪ್‌ಗೆ ಕರೆದೊಯ್ಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಧಾವಿಸಿರುವ ನೌಕಾ ಪಡೆ ಏಳು ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದವರಿಗಾಗಿ ಹುಡುಕಾಟ ಮುಂದುವರಿದಿದೆ. ಲಿಬಿಯಾದಿಂದ ವಲಸಿಗರು ಅಪಾಯಕಾರಿ ರೀತಿಯಲ್ಲಿ ಮೆಡಿಟರೇನಿಯನ್ ಸಾಗರ ದಾಟುತ್ತಿದ್ದು, ಈ ಭಾಗದಲ್ಲಿ ದೋಣಿ ದುರಂತಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

LEAVE A REPLY