ಇದೀಗ ತನ್ನ ಕಣ್ಣು ತೆರೆದಿದೆ…. ತಾನೀಗ ಆಯಿಷಾ ಅಲ್ಲ… ಆದಿರಾ…

ಕೊಚ್ಚಿ:ತಿಂಗಳೊಂದರ ಹಿಂದೆ ಮತಾಂತರಗೊಂಡು ಆಯಿಷಾಳಾಗಿದ್ದ ಆದಿರಾ ಕೊನೆಗೂ ಮರಳಿ ಮಾತೃಧರ್ಮಕ್ಕೆ ಬಂದಿದ್ದಾಳೆ. ಮಾತ್ರವಲ್ಲದೆ ತಾನೀಗ ಆಯಿಷಾ ಅಲ್ಲ. ಆದಿರಾ ಎಂದು ಕೊಚ್ಚಿಯಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾಳೆ.
ತನ್ನನ್ನು ಬಲವಂತವಾಗಿ ಮತಾಂತರಗೊಳಿಸಲಾಗಿದೆ. ತನ್ನ ಸಹಪಾಠಿಗಳು ತನಗೆ ಬೆದರಿಕೆಯೊಡ್ಡಿದ ಪರಿಣಾಮ ತಾನು ಮತಾಂತರಗೊಳ್ಳುವಂತಾದೆ. ತನಗೆ ತನ್ನ ಧರ್ಮದ ಕುರಿತಾಗಿ ಇದ್ದ ಅಜ್ಞಾನವೇ ತನ್ನನ್ನು ಇಸ್ಲಾಂಗೆ ಆಕರ್ಷಿತಳಾಗುವಂತೆ ಮಾಡಿತ್ತು. ಆದರೆ, ಇದೀಗ ತನ್ನ ಧರ್ಮಕ್ಕಿಂತ ಮಿಗಿಲಾದ ಧರ್ಮವಿಲ್ಲವೆಂಬ ಸತ್ಯವನ್ನು ಅರಿತುಕೊಂಡಿರುವುದಾಗಿ ಆದಿರಾ ತಿಳಿಸಿದ್ದಾಳೆ. ಮಾತ್ರವಲ್ಲದೆ ತಾನೀಗ ಆಯಿಷಾ ಅಲ್ಲ. ಆದಿರಾಳಾಗಿದ್ದೇನೆ ಎಂದಿದ್ದಾಳೆ.
ತಾನು ತನ್ನ ತಂದೆ ತಾಯಂದಿರ ಪ್ರೀತಿಯನ್ನು ಅರಿತುಕೊಳ್ಳುವಲ್ಲಿ ವಿಫಲಗೊಂಡೆ. ತನ್ನ ಧರ್ಮದ ಕುರಿತಾಗಿ ಅರಿತುಕೊಳ್ಳಲು ಮುಂದಾಗಲೇ ಇಲ್ಲ. ಇದರಿಂದಾಗಿ ತನ್ನ ಕೆಲವು ಸಹಪಾಠಿಗಳು ಇಸ್ಲಾಂಗಿಂತ  ಅತ್ಯುತ್ತಮ ಮತ ಬೇರೊಂದಿಲ್ಲ ಎಂದು ವ್ಯವಸ್ಥಿತವಾಗಿ ಒಂದೊಂದೇ ಮತೀಯ ವಿಚಾರಗಳನ್ನು ತಿಳಿಸಿದಾಗ ತಾನದನ್ನು ನಂಬುವಂತಾಯಿತು. ಇದೀಗ ತನ್ನ ಕಣ್ಣು ತೆರೆದಿದೆ. ಹಿಂದು ಧರ್ಮದ ಮಹತ್ವವನ್ನು ಚೆನ್ನಾಗಿ ಅರಿತುಕೊಂಡಿದ್ದೇನೆ. ಇನ್ನು ಮುಂದೆ ಹಿಂದುವಾಗಿಯೇ ಬದುಕುತ್ತೇನೆ ಎಂದು ಆದಿರಾ ಸ್ಪಷ್ಟಪಡಿಸಿದ್ದಾಳೆ.
ಉದುಮ ನಿವಾಸಿ
ಉದುಮ ಕರಿಪ್ಪೊಡಿ ನಿವಾಸಿಯಾದ ಅಶೋಕನ್‌ರ ಪುತ್ರಿಯಾಗಿರುವ ಕಾಸರಗೋಡು ಸರಕಾರಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದ ಆದಿರಾ ಕಳೆದ ಜುಲೈ ೧೦ರಂದು ಹದಿನೈದು ಪುಟಗಳ ಪತ್ರ ಬರೆದಿಟ್ಟು ಮತಪಠನ ಮಾಡಲು ಹೋಗುವುದಾಗಿ ತಿಳಿಸಿ ನಾಪತ್ತೆಯಾಗಿದ್ದಳು. ಇದರ ಹಿನ್ನೆಲೆಯಲ್ಲಿ ಆದಿರಾಳ ಹೆತ್ತವರು ತನ್ನ ಪುತ್ರಿ ನಾಪತ್ತೆಯಾಗಿರುವುದರ ಹಿಂದೆ ಮತಾಂಧರ ಪಾತ್ರವಿದೆ. ಆಕೆಯನ್ನು ಐಸಿಸ್‌ಗೆ ಸೇರ್ಪಡೆಗೊಳಿಸುವ ಸಾಧ್ಯತೆ ಇರುವುದರಿಂದ ಆಕೆಯನ್ನು ಕೂಡಲೇ ಪತ್ತೆ ಹಚ್ಚಬೇಕೆಂದು ಹೇಬಿಯಸ್ ಕಾರ್ಪಸ್ ದೂರು ನೀಡಿದ್ದರು. ಇದರಂತೆ ವಿವಿಧೆಡೆಗಳಲ್ಲಿ ಆದಿರಾಳನ್ನು ಪತ್ತೆ ಹಚ್ಚಲು ಹುಡುಕಾಟ ನಡೆಸಿದರೂ ಸಾಧ್ಯವಾಗಿರಲಿಲ್ಲ. ತನ್ಮಧ್ಯೆ ಜು.೨೭ರಂದು ಆಕೆ ಕಣ್ಣೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಳು. ಇದರಂತೆ ಆಕೆಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ತಾನು ಸ್ವಂತ ಇಚ್ಚೆಯಂತೆ ಇಸ್ಲಾಂಗೆ ಮತಾಂತರಗೊಂಡಿದ್ದೇನೆ. ತಾನು ಸ್ವಂತ ಇಚ್ಚೆಯಂತೆ ಮನೆ ಬಿಟ್ಟು ತೆರಳಿದ್ದೇನೆ. ತನ್ನನ್ನು ಯಾರೂ ಕರೆದೊಯ್ದಿಲ್ಲ. ತನ್ನ ಗೆಳತಿಯ ಮನೆಯಲ್ಲಿ ತಂಗಿದ್ದೆ. ತಾನು ಇಸ್ಲಾಂ ಮತದ ಪ್ರಕಾರ ಜೀವಿಸುವೆ ಎಂದೆಲ್ಲ ತಿಳಿಸಿದ್ದಳು.
ವ್ಯವಸ್ಥಿತ ಜಾಲ ಸ್ಪಷ್ಟ
ಆಕೆಯ ತಂದೆಯಾದ ಅಶೋಕನ್ ಅವರು ತನ್ನ ಪುತ್ರಿಯನ್ನು ಐಸಿಎಸ್‌ಗೆ ಸೇರ್ಪಡೆಗೊಳಿಸುವ ಸಾಧ್ಯತೆ ಇರುವುದಾಗಿ ಆತಂಕ ವ್ಯಕ್ತಪಡಿಸಿದ ಕಾರಣ ಮತ್ತು ಆಕೆಯ ನಾಪತ್ತೆಯಲ್ಲಿ ಕೊಲೆಯೂ ಸೇರಿದಂತೆ ವಿವಿಧ ಕ್ರಿಮಿನಲ್ ಕೇಸಿನಲ್ಲಿ ಆರೋಪಿಯಾಗಿರುವ ಮತೀಯ ತೀವ್ರವಾದಿಯೋರ್ವನ ಕೈವಾಡವಿರುವುದು ಸ್ಪಷ್ಟಗೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಹೆತ್ತವರ ಜತೆಯಲ್ಲಿ ನ್ಯಾಯಾಲಯವು ಕಳುಹಿಸಿಕೊಟ್ಟಿತ್ತು.
ಆದಿರಾಳ ಸ್ನೇಹಿತೆಯಾಗಿದ್ದ ಮುಸ್ಲಿಂ ಯುವತಿಯು ಈಕೆಯನ್ನು ಮತಾಂತರಗೊಳಿಸುವಲ್ಲಿ ಮುಖ್ಯ ಪಾತ್ರವಹಿಸಿರುವುದು ತನಿಖೆಯಿಂದ ವ್ಯಕ್ತಗೊಂಡಿದ್ದು. ಅಲ್ಲದೆ, ಮುಸ್ಲಿಂ ಯುವತಿಯೋರ್ವಳು `ಅಖಿಲಾ’ ಎಂಬ ಹೆಸರಲ್ಲಿ ಅವಳ ಸ್ನೇಹಿತೆಯ ಸೋಗಿನಲ್ಲಿ ಆದಿರಾಳ ಮನೆಯಲ್ಲಿ ವಾಸಿಸುತ್ತಾ ಆಕೆಗೆ ಮತ ಪಠಣದ ಬಾಲಪಾಠಗಳನ್ನು ಹೇಳಿಕೊಟ್ಟಿರುವುದು ತನಿಖೆಯಿಂದ ವ್ಯಕ್ತಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದರು. ಹಿಂದು ಐಕ್ಯವೇದಿಕೆ ಸೇರಿದಂತೆ ವಿವಿಧ ಹಿಂದು ಸಂಘಟನೆಗಳು ಆದಿರಾಳನ್ನು ಪತ್ತೆಹಚ್ಚುವಲ್ಲಿ ಆಕೆಯ ಹೆತ್ತವರಿಗೆ ನೆರವಾಗಿದ್ದರು.

LEAVE A REPLY