ಎಸ್.ಎಂ.ಕೃಷ್ಣರ ಅಳಿಯ ಸಿದ್ದಾರ್ಥಗೆ ಐಟಿ ಅಧಿಕಾರಿಗಳ ಶಾಕ್!

ಬೆಂಗಳೂರು: ಕೇಂದ್ರ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ ಒಡೆತನದ ಕಾಫಿ ಡೇ, ವೇ2 ವೆಲ್ತ್ , ಸೆರಾಯ್ ಗ್ರೂಪ್ ಆಫ್ ಹೋಟೆಲ್ ಸೇರಿದಂತೆ ಹಲವು ಕೇಂದ್ರ ಕಚೇರಿಗಳು ಹಾಗೂ ಯುಬಿಸಿಟಿ ಬಳಿ ಇರುವ ಕಾಫಿ ಡೇ ಮುಖ್ಯ ಕಚೇರಿ, ಬೆಂಗಳೂರಿನ ಸದಾಶಿವನಗರದಲ್ಲಿರುವ ಸಿದ್ದಾರ್ಥ ಅವರ ನಿವಾಸ ಸೇರಿದಂತೆ ಹಲವೆಡೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಅಧಿಕಾರಿಗಳ ತಂಡ, ರಾಜ್ಯದ ವಿವಿಧೆಡೆ ಇರುವ ಸಿದ್ದಾರ್ಥ ಅವರ ಒಡೆತನದ ಕಂಪನಿಗಳು, ಕಚೇರಿಗಳು, ಎಸ್ಟೇಟ್‌ಗಳು ಹಾಗೂ ಮತ್ತಿತರ ಕಡೆ ದಾಳಿ ನಡೆಸಿ ಲೆಕ್ಕಪತ್ರಗಳ ವಿವರ ಕಲೆ ಹಾಕುತ್ತಿದ್ದಾರೆ. ಬೆಂಗಳೂರಿನ ಹಲವೆಡೆ ಇರುವ ಕಾಫಿ ಡೇ, ರಾಜರಾಜೇಶ್ವರಿ ನಗರ, ಹೆಬ್ಬಾಳ, ಚಿಕ್ಕಮಗಳೂರು, ಗೋವಾ, ಮಡಿಕೇರಿ ಸೇರಿದಂತೆ ಎಲ್ಲಾ ಎಸ್ಟೇಟ್‌ಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ರಸ್ತೆಯಲ್ಲಿರುವ ಎಬಿಸಿ ಕಂಪನಿಗೆ ಸೇರಿದ ಕಾಫಿ ಡೇ, ರೆಸಾರ್ಟ್‌ಗಳ ಮೇಲೂ ಐಟಿ ದಾಳಿ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY