ಬೆಂಗಳೂರನ್ನು ಬೆಚ್ಚಿಬೀಳಿಸಿದ ಅನುಮಾನಾಸ್ಪದ ವಸ್ತು!

ಬೆಂಗಳೂರು: ನಗರದ ಎರಡು ಕಡೆಗಳಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ.
ಜೆ.ಪಿ. ನಗರ ಆರನೇ ಹಂತದಲ್ಲಿರುವ ಶಾಲೆಯೊಂದರ ಆವರಣದಲ್ಲಿ ಬೆಳಗ್ಗೆ ವಯರ್‌ಗಳನ್ನೊಳಗೊಂಡ ವಸ್ತುವೊಂದು ಕವರ್‌ನಲ್ಲಿ ಕಾಣಸಿಕ್ಕಿದರೆ, ಮತ್ತೊಂದೆಡೆ ಕಸದ ತೊಟ್ಟಿಯ ಬಳಿಯಲ್ಲೂ ಇಂತಹದ್ದೇ ವಸ್ತು ಪತ್ತೆಯಾಗಿದೆ. ಮೊದಲು ಇದನ್ನು ಗಮನಿಸಿದ ಸ್ಥಳೀಯರು ಶಾಲೆಯ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬ್ಯಾಗ್ ಪತ್ತೆಯಾದ ಸ್ಥಳದ ಸಮೀಪ ಸಿಸಿಟಿವಿ ಇದ್ದು ಪೊಲೀಸರು ಸಿಸಿಟಿವಿ ವಶಕ್ಕೆ ಪಡೆದು ದೃಶ್ಯಾವಳಿ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಅಕ್ಕ ಪಕ್ಕದ ರಸ್ತೆಗಳ ಸಿಸಿಟಿವಿ ದೃಶ್ಯಾಗಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಬೆಂಗಳೂರು ಸಹಿತ ರಾಜ್ಯದ ಹಲವೆಡೆಗಳಲ್ಲಿ ಬಾಂಗ್ಲಾ ಉಗ್ರರು ದುಷ್ಕೃತ್ಯವೆಸಗುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ನಿನ್ನೆಯಷ್ಟೇ ವರದಿ ನೀಡಿತ್ತು. ಅಲ್ಲದೆ ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿತ್ತು. ಈ ನಡುವೆ ಇಂತಹಾ ಬೆಳವಣಿಗೆ ನಡೆದಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.

LEAVE A REPLY