ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಪೋಷಕರಿಂದ ಮಗಳ ಮರ್ಯಾದಾ ಹತ್ಯೆ ಶಂಕೆ

ನಲ್ಗೊಂಡ :  ತೆಲಂಗಾಣದ  ನಲ್ಗೊಂಡ ಜಿಲ್ಲೆಯಲ್ಲಿ  13 ವರ್ಷದ ಬಾಲಕಿಯೋರ್ವಳನ್ನು ಆಕೆಯ ಪೋಷಕರೇ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಆಕೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಅತ್ಯಂತ ಆತ್ಮೀಯಳಾಗಿ ಇರುತ್ತಾಳೆ ಎಂದು ಆಕೆಯನ್ನು ಹತ್ಯೆ ಮಾಡಲಾಗಿದ್ದು, ಇದೊಂದು ಮರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ. ಅಲ್ಲದೆ, ಆಕೆಯನ್ನು ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಸುಟ್ಟು ಹಾಕಿ ಆತ್ಮಹತ್ಯೆ ಎಂದು ಬಿಂಬಿಸುವ ನಾಟಕವಾಡಿರುವುದು ಕೂಡ ಬೆಳಕಿಗೆ ಬಂದಿದೆ.  ಸೆ.15ರಂದೇ ಆಕೆಯನ್ನು  ಹತ್ಯೆ ಮಾಡಲಾಗಿದೆ. 7ನೇ ತರಗತಿ  ಓದುತ್ತಿದ್ದ ಬಾಲಕಿ ರಾಕ ಕಳೆದ ಶುಕ್ರವಾರ ಶಾಲೆಗೆ ತೆರಳಿದ್ದಳು.  ಮತ್ತೆ ಆಕೆ ಶಾಲೆಗೆ ಹೋಗಿರಲಿಲ್ಲ. ಬಳಿಕ ಆಕೆ ನಾಪತ್ತೆಯಾಗಿದ್ದು, ಈ ಬಗ್ಗೆ  ಅಕ್ಕಪಕ್ಕದವರಿಂದ ಮಾಹಿತಿ ಪಡೆದುಕೊಂಡ  ಪೊಲೀಸರು  ಸ್ಥಳಕ್ಕಾಗಮಿಸಿ  ತನಿಖೆ  ಕೈಗೊಂಡಿದ್ದರು.

LEAVE A REPLY