ಮುಂಬೈನಲ್ಲಿ ಮತ್ತೆ ಭಾರೀ ಮಳೆ: ವಿವಿಧೆಡೆ ಟ್ರಾಫಿಕ್ ಜಾಮ್ 

ಮುಂಬೈ : ಮಂಗಳವಾರ ಮಧ್ಯಾಹ್ನ ಮುಂಬೈ ನಗರದಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಭಾರೀ ಮಳೆ ಸುರಿದಿದೆ. ಇದರಿಂದ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕೊಲಾಬ, ಪರೇಲ್, ದಾದರ್, ಖರ್, ಸಾಂತಾಕ್ರೂಸ್  ಪ್ರದೇಶಗಳಲ್ಲಿ ಅತ್ಯಕ ಪ್ರಮಾಣದಲ್ಲಿ ಮಳೆಯಾಗಿದೆ. ಹವಾಮಾನ ಇಲಾಖೆ  ಅಕಾರಿಗಳ ಮಾಹಿತಿ ಪ್ರಕಾರ   ಮುಂಬೈನ  ಕರಾವಳಿ ತೀರ ಹಾಗೂ ನಗರದ ವಿವಿಧೆಡೆ ಗುಡುಗು ಸಹಿತ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಉತ್ತರ ಕೊಂಕಣ, ಪಲ್ಗಾರ್  ರಾಯ್‌ಗಡ್ ಜಿಲ್ಲೆಗಳಲ್ಲಿಯೂ ಕೂಡ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆ  ಇದೆ ಎಂದು  ಹವಾಮಾನ ಇಲಾಖೆ ಅಕಾರಿಗಳು ತಿಳಿಸಿದ್ದಾರೆ.
 ಕಳೆದ ಆಗಸ್ಟ್ ೨೯ ರಂದು ಮುಂಬೈನಲ್ಲಿ  ೨೪ ಗಂಟೆಗಳ ಕಾಲ ೩೩೧ ಮಿ.ಮೀ ಮಳೆ ಸುರಿದಿತ್ತು. ಇದರಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದ್ದು, ವಿವಿಧ ಪ್ರದೇಶಗಳು ಸಂಪೂರ್ಣ ನೀರಿನಲ್ಲಿ ಮುಳುಗಿದ್ದವು. ರೈಲು, ವಾಹನ ಸಂಚಾರವು 12 ಗಂಟೆ ಸಮಯ ಸ್ಥಗಿತವಾಗಿತ್ತು. ಅನೇಕರು ಪ್ರಾಣ ಕಳೆದುಕೊಂಡಿದ್ದರು.

LEAVE A REPLY