2018ಕ್ಕೆ ದೇಶದ ಮೊದಲ ಚಾಲಕ ರಹಿತ ಮಹೀಂದ್ರ ಟ್ರ್ಯಾಕ್ಟರ್ ಬಿಡುಗಡೆ

ಚೆನ್ನೆ : ಮಹೀಂದ್ರ ಆಂಡ್ ಮಹೀಂದ್ರ ಗ್ರೂಪ್‌ನ ಚಾಲಕ ರಹಿತ ಟ್ರ್ಯಾಕ್ಟರ್‌ಗಳನ್ನು ಚೆನ್ನೈನಲ್ಲಿ ಮಂಗಳವಾರ ಪ್ರದರ್ಶಿಸಿದೆ.
ಮಾತ್ರವಲ್ಲದೇ ಸಂಪೂರ್ಣ ಇಲೆಕ್ಟ್ರಿಕ್ ಟ್ರ್ಯಾಕ್ಟರ್ ತಯಾರಿಕೆಗೆ ಪ್ರಸ್ತುತ ಕೆಲಸ ಮಾಡುತ್ತಿರುವುದಾಗಿ ಹೇಳಿದೆ. ಈಗ ಪ್ರದರ್ಶನಕ್ಕೆ ಇಡಲಾದ ಚಾಲಕ ರಹಿತ ಟ್ರ್ಯಾಕ್ಟರನ್ನು ರಿಮೋಟ್ ಮೂಲಕ ನಿಯಂತ್ರಿಸಲಾಗುತ್ತದೆ. ಈ ಚಾಲಕ ರಹಿತ ಟ್ರ್ಯಾಕ್ಟರನ್ನು ಮಹೀಂದ್ರ ಆಂಡ್ ಮಹೀಂದ್ರ ಗ್ರೂಪ್ ೨೦೧೮ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ. ಚಾಲಕನನ್ನು ಅವಲಂಬಿಸುವುದನ್ನು ಕಡಿಮೆ ಮಾಡುವುದು ಮೊದಲ ಆದ್ಯತೆಯಾಗಿದೆ. ಆ ಬಳಿಕ ಎರಡನೇ ಹಂತದಲ್ಲಿ ಸಂಪೂರ್ಣ ಚಾಲಕ ರಹಿತ ಟ್ರ್ಯಾಕ್ಟರ್ ಮಾಡಲಾಗುವುದು. ದೇಶದಲ್ಲಿಯೇ ಇಂತಹದ್ದೊಂದು ಚಾಲಕನ ರಹಿತ ಚಲಿಸುವ ಟ್ರ್ಯಾಕ್ಟರ್ ಇದೇ ಮೊದಲ ಪ್ರದರ್ಶಿಸಲಾಗಿದೆ. ಈ ಚಾಲಕ ರಹಿತ ಟ್ರ್ಯಾಕ್ಟರನ್ನು ಮಹೀಂದ್ರ ಆಂಡ್ ಮಹೀಂದ್ರ ಗ್ರೂಪ್‌ನ ಚೆನ್ನೈನಲ್ಲಿರುವ ಸಂಶೋಧನಾ ಘಟಕದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಈ ಹೊಸ ತಂತ್ರಜ್ಞಾನದಿಂದ ದೇಶದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಲಿದೆ. ಲಾಭಾಂಶ ಹೆಚ್ಚಾಗಲಿದೆ ಮತ್ತು ವೆಚ್ಚದಲ್ಲಿ ಇಳಿಕೆಯಾಗಲಿದೆ ಎಂದು ಮಹೀಂದ್ರ ಆಂಡ್ ಮಹೀಂದ್ರ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಪವನ್ ಗೊಯೆಂಕಾ ಹೇಳಿದ್ದಾರೆ. ಇಂದು ಟ್ರ್ಯಾಕ್ಟರ್ ವೆಚ್ಚ ಅಕವಾಗಬಹುದು, ಆದರೆ ಒಂದೊಮ್ಮೆ ಮಾರಾಟದಲ್ಲಿ ಏರಿಕೆಯಾದರೆ ಬೆಲೆ ಇಳಿಕೆಯಾಗಬಹುದು ಎಂದು ಗೊಯೆಂಕಾ ಹೇಳಿದ್ದಾರೆ. ನಮ್ಮ ಟ್ರ್ಯಾಕ್ಟರ್ ಸಂಶೋಧನಾ ಮತ್ತು ಅಭಿವೃದ್ಧಿ ಘಟಕಗಳು, ತುಂಬಾ ನಾವೀನ್ಯತೆ ಹೊಂದಿದ ಹೊಸ ಆವೃತ್ತಿಯ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ತರುವುದರಲ್ಲಿ ಯಾವಾಗಲೂ ಮುಂಚೂಣಿಯಲ್ಲಿತ್ತು. ಚಾಲಕ ರಹಿತ ಟ್ರ್ಯಾಕ್ಟರ್‌ಗಳು ವ್ಯವಸಾಯದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದ್ದು, ಇಂದು ಇವುಗಳನ್ನು ಪ್ರದರ್ಶಿಸುತ್ತಿರುವುದು ನಮಗೆ ಮತ್ತೊಂದು ಹೆಮ್ಮೆಯ ಕ್ಷಣವಾಗಿದೆ ಎಂದು ಪವನ್ ಗೊಯೆಂಕಾ ಹೇಳಿದ್ದಾರೆ.
ಇಂದು ಕಾರ್ಮಿಕರ ಕೊರತೆಯಿಂದಾಗಿ ಕೃಷಿ ಯಾಂತ್ರೀಕರಣದ ಅವಶ್ಯಕತೆಯು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕೃಷಿ ಉತ್ಪಾದನೆ ಮತ್ತು ಲಾಭವನ್ನು ಸುಧಾರಿಸುವ ಅಥವಾ ಹೆಚ್ಚಿಸುವ ಅವಶ್ಯಕತೆಯು ಹೆಚ್ಚಾಗಿದೆ ಎಂದು ಮಹೀಂದ್ರ ಆಂಡ್ ಮಹೀಂದ್ರ ಗ್ರೂಪ್‌ನ ಕೃಷಿ ಉಪಕರಣ ವಲಯದ ಅಧ್ಯಕ್ಷ ರಾಜೇಶ್ ಜೆಜುರಿಕರ್ ಹೇಳಿದ್ದಾರೆ. ನಾವು ಕಳೆದ ವರ್ಷ ಪರಿಚಯಿಸಿದ್ದ ಡಿಜಿಸೆನ್ಸ್ ತಂತ್ರಜ್ಞಾನದ ಜೊತೆ, ಟ್ರ್ಯಾಕ್ಟರ್‌ಗೆ ಅಭೂತಪೂರ್ವ ಮಟ್ಟದ ಇಂಟೆಲಿಜೆನ್ಸ್ ತರುವ ಮೂಲಕ ದೇಶದ ಕೃಷಿಕರಿಗೆ ಈ ಚಾಲಕ ರಹಿತ ಟ್ರ್ಯಾಕ್ಟರ್ ಒಂದು ವಿಶಿಷ್ಟ ಪ್ರಯೋಜನವನ್ನು ನೀಡಲಿದೆ.
ಈ ತಂತ್ರಜ್ಞಾನವನ್ನು ಮಹೀಂದ್ರ ಟ್ರ್ಯಾಕ್ಟರ್‌ನ ಎಲ್ಲಾ ಮಾರುಕಟ್ಟೆಗಳಲ್ಲಿ ಹರಡಲಾಗುವುದು. ಅಮೆರಿಕ, ಜಪಾನ್‌ನಂತಹಾ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಪರಿಚಯಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ರ್ಸ್ಪಸಲು ಮಹೀಂದ್ರ ಆಂಡ್ ಮಹೀಂದ್ರ ಗ್ರೂಪ್ ತಯಾರಿ ನಡೆಸುತ್ತಿದೆ. ಮಹೀಂದ್ರ ಆಂಡ್ ಮಹೀಂದ್ರ ಗ್ರೂಪ್ ಸಂಸ್ಥೆ ೨೦ ಎಚ್‌ಪಿಯಿಂದ ೧೦೦ ಎಚ್‌ಪಿ ತನಕದ ಸಾಮರ್ಥ್ಯ ಹೊಂದಿರುವ ಅನೇಕ ಟ್ರ್ಯಾಕ್ಟರ್‌ಗಳನ್ನು ಹೊಂದಿದೆ. ಅವುಗಳನ್ನೆಲ್ಲಾ ಚಾಲಕ ರಹಿತ ಟ್ರ್ಯಾಕ್ಟರ್ ತಂತ್ರಜ್ಞಾನವನ್ನು ಬಳಸಿ ಮತ್ತೆ ಮಾರುಕಟ್ಟೆಗೆ ತರಲು ಮಹೀಂದ್ರ ಆಂಡ್ ಮಹೀಂದ್ರ ಆಲೋಚನೆ ನಡೆಸಿದೆ.

LEAVE A REPLY