ವಿನಾಶದಂಚಿನಲ್ಲಿ ನಾಟಿ ವೈದ್ಯಕೀಯ ಕ್ಷೇತ್ರದ ಔಷಧೀಯ ‘ಕಲ್ಲು ಬಾಳೆ’

ಕುಂಬ್ರ : ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಮೂತ್ರದ ಕಲ್ಲು ಕಾಯಿಲೆಯಲ್ಲಿ ಬಳಕೆ ಮಾಡುವ ಔಷಧೀಯ ಗುಣಗಳನ್ನು ಹೊಂದಿರುವ ಬಾಳೆ ‘ಕಲ್ಲು ಬಾಳೆ’. ಬೀಜಗಳಿಂದ ಗಿಡ ಉತ್ಪತ್ತಿಯಾಗುವ ಈ ಬಾಳೆ ಇದೀಗ ವಿನಾಶದ ಅಂಚಿಗೆ ಸರಿಯುತ್ತಿದೆ.
ನೆಟ್ಟು ಎರಡರಿಂದ ಮೂರು ವರ್ಷಗಳಲ್ಲಿ ಗೊನೆ ಬಿಡುವ ಈ ಬಾಳೆಯ ಹಣ್ಣು ಇತರ ಬಾಳೆಹಣ್ಣಿಗಿಂತ ಭಿನ್ನವಾಗಿದೆ. ಇದರ ಹಣ್ಣಿನೊಳಗಡೆ ಬೀಜಗಳಿದ್ದು ಜಗಿದಾಗ ಒಂದು ರೀತಿಯ ಕಲ್ಲನ್ನು ಜಗಿದಂತೆ ಭಾಸವಾಗುತ್ತದೆ ಮತ್ತು ಸಿಹಿಕಹಿ ಎರಡೂ ಮಿಶ್ರಿತವಾಗಿರುತ್ತದೆ. ಇದರ ಬೀಜಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಇದರ ಜೀಜವನ್ನು ಮೂತ್ರದ ಕಲ್ಲು ಕಾಯಿಲೆಯಲ್ಲಿ ಉಪಯೋಗಿಸುತ್ತಾರೆ. ಮೂತ್ರದಲ್ಲಿ ಕಲ್ಲು ಇರುವವರು ಇದರ ಬೀಜವನ್ನು ಹುಡಿ ಮಾಡಿ ಹಾಲಿನೊಂದಿಗೆ ಸೇವಿಸಬಹುದು ಅಥವಾ ಇದರ ಗಡ್ಡೆಯನ್ನು ಹುಡಿ ಮಾಡಿ ಸೇವಿಸಿದರೂ ಕಲ್ಲು ಕರಗುತ್ತದೆ ಎನ್ನುತ್ತಾರೆ ನಾಟಿ ವೈದ್ಯರು. ಇದರ ಎಲೆ ಬಹಳ ಗಟ್ಟಿಯಾಗಿತ್ತು ಇತರ ಬಾಳೆ ಎಲೆಗಳಿಂದ ದುಪ್ಪಟ್ಟು ಉದ್ದವಿರುತ್ತದೆ. ಇದನ್ನು ಊಟ ಮಾಡಲು ಬಳಸಬಹುದಾಗಿದೆ. ಆಂಗ್ಲ ಭಾಷೆಯಲ್ಲಿ ರಾಕ್ ಬನಾನ ಎಂದು ಕರೆಯಲ್ಪಡುವ ಕಲ್ಲು ಬಾಳೆ ಮೂಸ ಸುಪರ್ಬ ಜಾತಿಗೆ ಸೇರಿದೆ.

LEAVE A REPLY