ಉತ್ತರ ಕೊರಿಯಾ ಸೇನಾ ಕ್ರಮ: ಪರ್ಯಾಯ ದ್ವೀಪಕ್ಕೆ ಅಮೆರಿಕ ಸೇನೆ

file photo

ಸಿಯೋಲ್: ಯುದ್ಧೋನ್ಮಾದ ಉತ್ತರ ಕೊರಿಯಾ ವಿರುದ್ಧ ಸೇನಾ ಕಾರ್ಯಾಚರಣೆಗೆ ಅಮೆರಿಕ ಸಿದ್ಧತೆ ನಡೆಸಿದೆ.
ಜಾಗತಿಕ ನಿರ್ಬಂಧದ ಹೊರತಾಗಿಯೂ ಇತ್ತೀಚೆಗೆ ಅತ್ಯಾಧುನಿಕ ಪರಮಾಣು ಮತ್ತು ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿದ್ದ ಉತ್ತರ ಕೊರಿಯಾಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಲು ಅಮೆರಿಕ ತನ್ನ ಸೇನೆಯನ್ನು ಕೊರಿಯಾ ಪರ್ಯಾಯ ದ್ವೀಪದಲ್ಲಿ ಇಳಿಸಿದೆ ಎಂದು ದಕ್ಷಿಣ ಕೊರಿಯಾ ರಕ್ಷಣ ಸಚಿವಾಲಯ ತಿಳಿಸಿದೆ.
ನಾಲ್ಕು ಎಫ್-35ಬಿ ರಹಸ್ಯ ಕದನ ವಿಮಾನಗಳು ಮತ್ತು ಎರಡು ಬಿ-1ಬಿ ಬಾಂಬರ್ ವಿಮಾನಗಳು ಪರ್ಯಾಯ ದ್ವೀಪದ ಮೇಲೆ ಹಾರಾಟ ನಡೆಸಿವೆ. ಉತ್ತರ ಕೊರಿಯಾದ ಪರಮಾಣು ಮತ್ತು ಕ್ಷಿಪಣಿ ಬೆದರಿಕೆಗಳನ್ನು ವಿರೋಸಿ, ಅಮೆರಿಕ-ದಕ್ಷಿಣ ಕೊರಿಯಾ ಮೈತ್ರಿಯು ತಮ್ಮ ಯುದ್ಧ ಸಾಮರ್ಥ್ಯ ಪ್ರದರ್ಶಿಸಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ಹೇಳಿದೆ.
ಸೆಪ್ಟೆಂಬರ ೩ರಂದು ಉತ್ತರ ಕೊರಿಯಾ ಆರನೇಯ ಮತ್ತು ಅತ್ಯಂತ ಪ್ರಬಲ ಪರಮಾಣು ಪರೀಕ್ಷೆ ಮತ್ತು ಕಳೆದ ಶುಕ್ರವಾರ ಜಪಾನ್ ಮೇಲೆ ಮಧ್ಯಂತರ ಶ್ರೇಣಿ ಕ್ಷಿಪಣಿ ಪರೀಕ್ಷೆ ಮೂಲಕ ಪ್ರಾದೇಶಿಕ ಉದ್ವಿಗ್ನತೆಗೆ ಕಾರಣವಾಗಿದೆ. ಈ ಘಟನೆ ಬಳಿಕ ಇವು ಮೊದಲ ಯುದ್ಧ ವಿಮಾನಗಳಾಗಿವೆ.
ದಕ್ಷಿಣ ಕೊರಿಯಾದ ಎಫ್-15 ಕೆ ಜೆಟ್ ಯುದ್ಧ ವಿಮಾನಗಳೊಂದಿಗೆ ಅಮೆರಿಕದ ಕೆಲ ಜೆಟ್‌ಗಳು ಸಹ ವಾಡಿಕೆಯ ತರಬೇತಿಯಲ್ಲಿ ಪಾಲ್ಗೊಂಡಿದ್ದವು. ಎದುರಾಗಿರುವ ಅನಿಶ್ಚಯತೆ ವಿರುದ್ಧ ಜಂಟಿ ಕಾರ್ಯಾಚರಣೆ ಅಭಿವೃದ್ಧಿ ಪಡಿಸಲು ಮೈತ್ರಿಗಳು ಈ ತರಬೇತಿಯನ್ನು ನಡೆಸುತ್ತಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ಆಗಸ್ಟ್ 31ರಂದು ಇಂತಹ ಯುದ್ಧ ವಿಮಾನಗಳು ಹಾರಾಟ ನಡೆಸಿದ್ದವು. ಅಮೆರಿಕ ಉತ್ತರ ಕೊರಿಯಾದ ಮೇಲೆ ಒತ್ತಡ ಹೇರುತ್ತಿದ್ದು, ಅಜಾಗರೂಕ ಶಸ್ತ್ರಾಸ್ತ್ರ ಬಳಕೆಯನ್ನು ನಿಲ್ಲಿಸಲು ತಿರಸ್ಕರಿಸಿದ್ದಲ್ಲಿ ಪ್ಯೊಂಗ್ಯಾಂಗ್‌ನ್ನು ನಾಶಪಡಿಸುವುದಾಗಿ ವಿಶ್ವಸಂಸ್ಥೆಯಲ್ಲಿ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ಎಚ್ಚರಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡುವ ಭಾಷಣದಲ್ಲಿ ಈ ವಿಷಯವು ಪ್ರಾಬಲ್ಯ ಹೊಂದಲಿದೆ. ಜತೆಗೆ ಈ ವಾರ ದಕ್ಷಿಣ ಕೊರಿಯಾ ಮತ್ತು ಜಪಾನ್‌ನ ನಾಯಕರೊಂದಿಗೆ ನಡೆಯುವ ಸಭೆಯ ಮೇಲೆಯೂ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಉತ್ತರ ಕೊರಿಯಾದ ಜಲಜನಕ ಬಾಂಬ್, ಈ ಹಿಂದಿನದ್ದಕ್ಕಿಂತ ಹಲವು ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿದ್ದು, ಇದನ್ನು ಕಿಮ್ ಜೊಂಗ್ ಉನ್ ಮತ್ತೆ ಪರೀಕ್ಷೆಗೆ ಒಳಪಡಿಸಿದ್ದರಿಂದ ಬಿಕ್ಕಟ್ಟು ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಿದೆ.
ಅಲ್ಲದೆ, ಶುಕ್ರವಾರ ಉತ್ತರ ಕೊರಿಯಾ ಜಪಾನ್ ಮತ್ತು ಪೆಸಿಫಿಕ್ ಮೇಲೆ ಖಂಡಾಂತರ ಕ್ಷಿಪಣಿ ಪ್ರಯೋಗ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ವಿಶ್ವಸಂಸ್ಥೆ ಪರಮಾಣು ಪರೀಕ್ಷೆಗೆ ಹೊಸ ಅನುಮತಿ ನೀಡಿದೆ.
ಶನಿವಾರ ಟ್ರಂಪ್ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ-ಇನ್ ದೂರವಾಣಿ ಮೂಲಕ ಮಾತುಕತೆ ನಡೆಸಿದ ಉತ್ತರ ಕೊರಿಯಾದ ಮೇಲೆ ಪ್ರಬಲ ಒತ್ತಡವನ್ನು ಸೃಷ್ಟಿಸಲು ಬದ್ಧರಾಗಿರುವುದಾಗಿ ತೀರ್ಮಾನಿಸಿದವು ಎನ್ನಲಾಗಿದೆ.

LEAVE A REPLY