ಟಿಬೆಟ್ ಮೂಲಕ ನೇಪಾಳ ಗಡಿಗೆ ತೆರಳುವ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳಿಸಿದ ಚೀನಾ!

ಬೀಜಿಂಗ್: ನಾಗರಿಕರ ಹಾಗೂ ರಕ್ಷಣಾ ಸಂಬಂಧಿ ಕಾರ್ಯಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಟಿಬೆಟ್ ಮೂಲಕ ನೇಪಾಳದ ಗಡಿಗೆ ತೆರಳುವ ಹೆದ್ದಾರಿಯನ್ನು ಚೀನಾ ಸಂಚಾರಕ್ಕೆ ಮುಕ್ತಗೊಳಿಸಿದೆ. ದಕ್ಷಿಣ ಏಷ್ಯಾಕ್ಕೆ ಹಾಗೂ ಚೀನಾದ ಆಯಕಟ್ಟಿನ ಸ್ಥಳಕ್ಕೆ ತೆರಳಲು ಈ ಹೆದ್ದಾರಿ ಅನುವು ಮಾಡಿಕೊಡಲಿದೆ.
ಹೆದ್ದಾರಿಯ ಪ್ರಮುಖ ಭಾಗವಾದ ಟಿಬೆಟ್‌ನ ಕ್ಸಿಗಾಜಿ ವಿಮಾನ ನಿಲ್ದಾಣದಿಂದ ಕ್ಷಿಗಾಝಿ ನಗರದ ವರೆಗಿನ 40.4 ಕಿ.ಮೀ. ಉದ್ದದ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ತೆರೆಯಲಾಗಿದೆ. ಇದೇ ರಸ್ತೆಯು ನೇಪಾಳ ಗಡಿಯನ್ನು ಸಂಪರ್ಕಿಸುತ್ತದೆ.
ಈ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿರುವುದರಿಂದ ಟಿಬೆಟ್ ವಲಯದ ಎರಡನೇ ಅತ್ಯಂತ ದೊಡ್ಡ ನಗರಿಯಾಗಿರುವ ಕ್ಸಿಗಾಜಿಗೆ ಕೇವಲ 90 ನಿಮಿಷದಲ್ಲಿ ಪ್ರಯಾಣ ಮಾಡಬಹುದಾಗಿದೆ. ನೇಪಾಳದೊಂದಿಗೆ ಸಂಬಂಧ ವೃದ್ಧಿಗೆ ಈ ರಸ್ತೆ ಅನುವಾಗಲಿದೆ. ಮುಂದಿನ ದಿನಗಳಲ್ಲಿ ನೇಪಾಳಕ್ಕೆ ರೈಲ್ವೆ ಸಂಪರ್ಕ ಕೂಡ ಬೆಸೆಯಲಾಗುತ್ತಿದ್ದು, ಅದಕ್ಕೂ ಮೊದಲು ಹೆದ್ದಾರಿ ಮೂಲಕ ಸಂಪರ್ಕ ಬೆಸೆದಂತಾಗಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಯ ಮೂಲಕ ದಕ್ಷಿಣ ಏಷ್ಯಾದ ಭಾರತ, ಭೂತಾನ್ ಹಾಗೂ ಬಾಂಗ್ಲಾ ದೇಶಗಳ ಜೊತೆಗೆ ಸಂಪರ್ಕ ಕಲ್ಪಿಸುವುದು ಚೀನಾದ ಪ್ರಮುಖ ಉದ್ದೇಶಗಳಲ್ಲೊಂದು.

LEAVE A REPLY