ರದ್ದಾಗುತ್ತಾ ಎಸ್‌ಬಿಐ ಕನಿಷ್ಠ ಬ್ಯಾಲೆನ್ಸ್ ನಿಯಮ ?

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ಉಳಿತಾಯ ಖಾತೆಗಳಿಗೆ ಸಂಬಂಧಿಸಿದ ಕನಿಷ್ಠ ಬ್ಯಾಲೆನ್ಸ್ ನಿಯಮಕ್ಕೆ ಗ್ರಾಹಕರು ಮತ್ತು ರಾಜಕೀಯ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ವಿವಾದಿತ ನಿಯಮವನ್ನು ಬ್ಯಾಂಕ್ ವಾಪಸ್ ಪಡೆಯಬೇಕು ಎಂದು ಒತ್ತಡ ಹೆಚ್ಚುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ ನಿಯಮದಲ್ಲಿ ಕೆಲವು ಬದಲಾವಣೆಗಳು ಅಥವಾ ತಿದ್ದುಪಡಿ ಮಾಡುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಮತ್ತು ಬಡವರು ಆರಂಭಿಸಿದ್ದ ಉಳಿತಾಯ ಖಾತೆಗಳಿಗೆ ದಂಡ ವಿಸಿದ ಬ್ಯಾಂಕ್‌ನ ನಿರ್ಧಾರ ಮಾಧ್ಯಮ ಮತ್ತು ರಾಜಕೀಯ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಕುಮಾರ್, ನಿಯಮಗಳು ಪೂರ್ವಾಗ್ರಹಪೀಡಿತವಲ್ಲ. ಗ್ರಾಹಕರ ಪ್ರತಿಕ್ರಿಯೆಗಳನ್ನು ಗಮನಿಸುತ್ತಿದ್ದು, ತನ್ನ ನೀತಿ ಪರಾಮರ್ಶೆ ನಡೆಸಲು ಎಸ್‌ಬಿಐ ಮುಂದಾಗಿದೆ ಎಂದು ಹೇಳಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಆರ್‌ಟಿಐಗೆ ನೀಡಿದ ಉತ್ತರದಲ್ಲಿ, ಮೇ ತಿಂಗಳು ಒಂದರಲ್ಲೇ ಕನಿಷ್ಠ ಬ್ಯಾಲೆನ್ಸ್ ನಿಯಮದ ಅನ್ವಯ ಗ್ರಾಹಕರಿಗೆ ವಿಧಿಸಿದ ದಂಡದಿಂದಾಗಿ ಬ್ಯಾಂಕ್‌ಗೆ ೨೩೫ ಕೋಟಿ ರೂ. ಆದಾಯವಾಗಿದೆ. ೩೮ ಕೋಟಿ ಗ್ರಾಹಕರು ಕನಿಷ್ಠ ಬ್ಯಾಲೆನ್ಸ್ ಉಳಿತಾಯ ಖಾತೆಯಲ್ಲಿ ಉಳಿಸಿಕೊಳ್ಳಲು ವಿಫಲರಾಗಿ ದಂಡ ತೆತ್ತಿದ್ದಾರೆ. ಒಟ್ಟು ೪೦ ಕೋಟಿಯಷ್ಟು ಉಳಿತಾಯ ಖಾತೆಗಳನ್ನು ಎಸ್‌ಬಿಐ ಹೊಂದಿದೆ.

LEAVE A REPLY