ಕೊಪ್ಪಳದಲ್ಲಿ ಭಾರಿ ಮಳೆ : ತಾಯಿ ಹಾಗೂ ಮಗಳು ನೀರು ಪಾಲು

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದ್ದು ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ತಾಯಿ ಹಾಗೂ ಮಗಳು  ನೀರು ಪಾಲಾಗಿದ್ದಾರೆ. ಪಾರವ್ವ (50) ಹಾಗೂ ಹನುಮವ್ವ (21) ನೀರಿನಲ್ಲಿ ಕೊಚ್ಚಿಹೋದವರು.

ಕಳೆದೆರಡು ದಿನಗಳಿಂದ ಕುಷ್ಟಗಿ ತಾಲೂಕಾದ್ಯಂತ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಹಳ್ಳ ದಾಟುವಾಗ  ಎತ್ತಿನ ಬಂಡಿ ನೀರಿಗೆ ಕೊಚ್ಚಿ ಹೋದ ಪರಿಣಾಮವಾಗಿ ಬಂಡಿಯಲ್ಲಿದ್ದ ನಾಲ್ವರ ಪೈಕಿ ಇಬ್ಬರು ನೀರು ಪಾಲಾಗಿದ್ದಾರೆ. ಹೆಗ್ಗಪ್ಪ, ಪರಮೇಶಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

LEAVE A REPLY