ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆ : ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತ ?

ವಾಷಿಂಗ್ಟನ್: ಭಾರತ ಸಹಿತ ಅನೇಕ ದೇಶಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆಗೆ ಒತ್ತಾಯಿಸುತ್ತಿರುವುದರಿಂದ ಟ್ರಂಪ್ ಆಡಳಿತದ ಉನ್ನತ ಆದ್ಯತೆಗಳಲ್ಲಿ ಅದು ಒಂದಾಗಿದೆ ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹೇಲೆ ಹೇಳಿದ್ದಾರೆ. ಅಲ್ಲದೆ, ಭಾರತವನ್ನು ವಿಶ್ವ ಸಂಸ್ಥೆ ಭದ್ರತಾ ಮಂಡಳಿಗೆ ಶಿಫಾರಸ್ಸು ಮಾಡುವ ಸಾಧ್ಯತೆಯಿದೆ.
ಮುಂದಿನವಾರ ವಿಶ್ವಸಂಸ್ಥೆಯ ಮಹಾಸಭೆಯನ್ನು ಉದ್ದೇಶಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತನ್ನ ಮೊದಲ ಭಾಷಣ ಮಾಡಲಿರುವ ಮಧ್ಯೆ ಹೇಲೆ ಅವರ ಹೇಳಿಕೆ ಹೊರ ಬಿದ್ದಿದೆ.
ಭದ್ರತಾ ಮಂಡಳಿ ಸುಧಾರಣೆ ಬಗ್ಗೆ ಇನ್ನೂ ಮಾತುಗಳು ಕೇಳಿ ಬರುತ್ತಿವೆ ಎಂದು ಆಕೆ ಹೇಳಿದರು. ಶ್ವೇತ ಭವನದಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, `ಅದನ್ನು ಭಾರತ ಬಯಸುತ್ತಿದೆ ಎಂಬುದು ನನಗೆ ತಿಳಿದಿದೆ’ ಎಂದರು. ವಿಶ್ವಸಂಸ್ಥೆಯ ವಾರ್ಷಿಕ ಮಹಾಸಭೆ ಅವೇಶನ ಸೆ. 19ರಿಂದ 25ರ ತನಕ ನಡೆಯಲಿದೆ.
`ಅದೇ ರೀತಿ ಇತರ ಅನೇಕ ದೇಶಗಳು ಕೂಡಾ ಅದನ್ನು ಬಯಸುತ್ತಿವೆ. ಆದ್ದರಿಂದ ನಾವು ಕಾದು ನೋಡಬೇಕಾಗಿದೆ’ ಎಂದು ಭಾರತ ಮೂಲದ ಅಮೆರಿಕನ್ ಆಗಿರುವ ಹೇಲೆ ಹೇಳಿದರು. ಮುಂದಿವಾರ ವಿಶ್ವಸಂಸ್ಥೆಯಲ್ಲಿ ಅಮೆರಿಕದ ಆದ್ಯತೆಗಳ ಬಗ್ಗೆ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಲೆ. ಜ. ಎಚ್. ಆರ್. ಮೆಕ್‌ಮಾಸ್ಟರ್ ಜೊತೆ ವರದಿಗಾರರಿಗೆ ವಿವರ ನೀಡುತ್ತಿದ್ದರು.
ಸೋಮವಾರ ಅಧ್ಯಕ್ಷರು ಹಿರಿಯ ವಿಶ್ವಸಂಸ್ಥೆ ನಾಯಕರು ಮತ್ತು 120ಕ್ಕೂ ಹೆಚ್ಚು ಇತರ ದೇಶಗಳ ನಾಯಕರೊಂದಿಗೆ ಸೇರಿಕೊಂಡರು. ಸಂಸ್ಥೆಯ ಸುಧಾರಣೆ ಬಗ್ಗೆ ಚರ್ಚಿಸಲಿದ್ದಾರೆ. ಮಹಾ ಕಾರ್ಯದರ್ಶಿ ಅಂಟೋನಿಯೊ ಗುಟೆರ್ರೆಸ್ ಅವರ ಸುಧಾರಣಾ ಪ್ರಯತ್ನಗಳಿಗೆ ಅಧ್ಯಕ್ಷರು ಬೆಂಬಲ ವ್ಯಕ್ತಪಡಿಸಲಿದ್ದಾರೆ. ವಿಶ್ವಸಂಸ್ಥೆಯ ಸ್ಥಾಪನಾ ಆದರ್ಶಗಳನ್ನು ನನಸಾಗಿಸಲು ಅದು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಆದರೆ ಅವರ ಓಟ ಹೆಚ್ಚು ಸಮರ್ಥ ಮತ್ತು ಪರಿಣಾಮಕಾರಿಯಾಗಿದ್ದರೆ ಮಾತ್ರ ಅದು ಸಾಧ್ಯ’ ಎಂದು ಮೆಕ್ ಮಾಸ್ಟರ್ ಹೇಳಿದರು.
ಜನವರಿಯಲ್ಲಿ ಆಡಳಿತವನ್ನು ಸೇರಿದಂದಿನಿಂದ ತನ್ನ ರಾಜತಾಂತ್ರಿಕ ಕೌಶಲಗಳಿಗಾಗಿ ಅಪಾರ ಮೆಚ್ಚುಗೆಗೆ ಪಾತ್ರರಾಗಿರುವ ಹೇಲೆ, ಅಧ್ಯಕ್ಷರು ವಿಶ್ವಸಂಸ್ಥೆ ಸುಧಾರಣೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಲಿದ್ದಾರೆ ಎಂದರು.
`ಅದು ಬಹಳ ಮುಖ್ಯವಾದುದಾಗಿದೆ. ಮಹಾ ಕಾರ್ಯದರ್ಶಿಯವರ ನೇತೃತ್ವದಲ್ಲಿನ ಬೃಹತ್ ಸುಧಾರಣಾ ಪ್ಯಾಕೇಜ್ ಒಂದು ನಮ್ಮ ಕೈ ಸೇರಿದೆ. ಅದು ನಿಜವಾಗಿಯೂ ಕೇವಲ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು ಮಾತ್ರವಲ್ಲ, ಅದು ಮುಂದುವರಿದಂತೆ ಬಜೆಟ್ ಕೂಡಾ ಸುಗಮಗೊಳ್ಳಲಿದೆ ಮತ್ತು ವಿಶ್ವಸಂಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲಿದೆ’ ಎಂದರು.
`ನಾವು ಮೂಲತಃ ಅಧ್ಯಕ್ಷರು ವಿಶ್ವಸಂಸ್ಥೆ ಸುಧಾರಣೆ ಪ್ರಯತ್ನವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಯೋಚನೆ ಹೊಂದಿದ್ದೇವೆ. ಅದು ನಿಜವಾಗಿಯೂ ಮಹಾ ಕಾರ್ಯದರ್ಶಿಯವರನ್ನು ಬೆಂಬಲಿಸಲಿದೆ. ಆದರೆ, ಪರಿಣಾಕಾರಿಯಾದ ಅಂಶವೆಂದರೆ ಸುಧಾರಣೆಗೆ ತಮ್ಮ ಬೆಂಬಲ ಸೂಚಿಸುವಂತೆ ಇತರ ದೇಶಗಳನ್ನು ನಾವು ಕೇಳಿಕೊಂಡಿದ್ದು 120 ದೇಶಗಳು ಬೆಂಬಲ ಸೂಚಿಸಿವೆ. ಅವು ಮಹಾಸಭೆಯಲ್ಲಿ ಹಾಜರಿರಲಿವೆ. ಇದೊಂದು ಪವಾಡಸದೃಶ ಸಂಖ್ಯೆಯಾಗಿದೆ’ ಎಂದರು.

LEAVE A REPLY