ಶಾಲಾ ಬಾಲಕ ಪ್ರಧ್ಯುಮ್ನ ಹತ್ಯೆ ಪ್ರಕರಣ : ಸಿಬಿಐ ತನಿಖೆಗೆ ಆದೇಶ

ಗುರುಗ್ರಾಮ: ದೇಶದಲ್ಲಿಯೇ ಸಂಚಲನ ಮೂಡಿಸಿರುವ ಎರಡನೇ ತರಗತಿ ವಿದ್ಯಾರ್ಥಿ ಪ್ರಧ್ಯುಮ್ನ ಕೊಲೆ ಪ್ರಕರಣವನ್ನು ಹರ್ಯಾಣ ಸರಕಾರ ಸಿಬಿಐ ತನಿಖೆಗೆ ಒಪ್ಪಿಸಿದೆ. ಅಲ್ಲದೆ, ಮೂರು ತಿಂಗಳ ಕಾಲ ರ್‍ಯಾನ್ ಶಾಲೆಯ ಆಡಳಿತವನ್ನು ಸರ್ಕಾರ ವಹಿಸಿಕೊಂಡಿದೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ ಖಟ್ಟರ್, ಗುರುಗ್ರಾಮದ ಸೋಹ್ನಾದ ರ್‍ಯಾನ್ ಇಂಟರ್‌ನ್ಯಾಷನಲ ಶಾಲೆಯಲ್ಲಿ ಕೊಲೆಯಾದ ೨ನೇ ತರಗತಿ ವಿದ್ಯಾರ್ಥಿ ಪ್ರಧ್ಯುಮ್ನ  ಮನೆಗೆ ಗುರುವಾರ ಭೇಟಿ ನೀಡಿದರು. ವಿದ್ಯಾರ್ಥಿಯ ಮನೆಗೆ ತೆರಳಿದ ಅವರು, ಪೋಷಕರಿಗೆ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಟ್ಟರ್, ಪ್ರಕರಣಕ್ಕೆ ಸಂಬಂಸಿದಂತೆ ಹರಿಯಾಣ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದರೆ. ಆದರೆ, ವಿದ್ಯಾರ್ಥಿ ಹತ್ಯೆಯ ಹಿಂದಿನ ಆಕ್ರೋಶವನ್ನು ಗಮನದಲ್ಲಿಟ್ಟುಕೊಂಡು ಪ್ರಕರಣವನ್ನು ಸಿಬಿಐಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿzರೆ.
ಕಳೆದ ವಾರ ಪ್ರಧ್ಯುಮ್ನ ಥಾಕೂರ್ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಶಾಲೆಯ ಶೌಚಾಲಯದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಹರಿಯಾಣ ಪೊಲೀಸರು ಈಗಾಗಲೇ 10 ಮಂದಿಯನ್ನು ಬಂಸಿ ವಿಚಾರಣೆ ನಡೆಸಿದ್ದರೆ. ಆದರೆ, ರಾಜ್ಯ ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡ ಕೊಲೆಯಾದ ವಿದ್ಯಾರ್ಥಿ ಪ್ರಧ್ಯುಮ್ನ ಥಾಕೂರ್ ತಂದೆ ವರಣ ಥಾಕೂರ್ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
3 ತಿಂಗಳು ಶಾಲೆ ಉಸ್ತುವಾರಿ
ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದು ಮಾತ್ರವಲ್ಲ. ಮುಂದಿನ ಮೂರು ತಿಂಗಳುಗಳ ಕಾಲ ರ್‍ಯಾನ್ ಇಂಟರ್‌ನ್ಯಾಷನಲ್ ಶಾಲೆಯ ಉಸ್ತುವಾರಿಯನ್ನು ಜಿಲ್ಲೆಯ ಉಪ ಆಯುಕ್ತರು ವಹಿಸಿಕೊಳ್ಳುವುದಾಗಿಯೂ ಹೇಳಿದ್ದಾರೆ. ಹೀಗಾಗಿ ಶಾಲೆಯ ಮಕ್ಕಳ ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೂಡ ತಿಳಿಸಿದ್ದಾರೆ. ಪ್ರಧ್ಯುಮ್ನ ಕೊಲೆಗೂ ವರ್ಷದ ಹಿಂದೆ ಮಗುವೊಂದು ಶಾಲೆಯ ಈಜುಕೊಳಕ್ಕೆ ಬಿದ್ದು, ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿತ್ತು. ಈ ಪ್ರಕರಣ ಕೂಡ ಇತ್ಯರ್ಥವಾಗಿಲ್ಲ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳ ಪೋಷಕರು ಆತಂಕದಿಂದ ಇದ್ದಾರೆ.

LEAVE A REPLY