ಭಾರತೀಯ ಐಟಿ ವೃತ್ತಿಪರರಿಗೆ ಆಸಿಸ್, ಚೀನಾದಿಂದಲೂ ನಿರ್ಬಂಧ

ಹೊಸದಿಲ್ಲಿ: ಭಾರತದ ಐಟಿ ರಂಗದ ಹಿತಾಸಕ್ತಿಗೆ ಬಾಧಕವಾದ ವೀಸಾ ನಿಯಮ ಅಮೆರಿಕದಿಂದ ಮಾತ್ರವಾಗಿರದೆ ಆಸ್ಟ್ರೇಲಿಯಾ, ಕೆನಡಾ, ಚೀನಾದಿಂದಲೂ ಭಾರತೀಯ ಐಟಿ ವೃತ್ತಿಪರರನ್ನು ನಿರ್ಬಂಸುವ ತೀವ್ರ ಸಂಕಟ ಎದುರಾಗಿದೆ.
ಭಾರತೀಯ ಐಟಿ ಕಂಪೆನಿಗಳ ಅಳಲನ್ನು ತೀವ್ರಗೊಳಿಸಿರುವ ಈ ದೇಶಗಳ ಬಹುತೇಕ ನಿಯಮಾವಳಿ ಭಾರತದೊಂದಿಗೆ ಈ ದೇಶಗಳು ಮಾಡಿಕೊಂಡ ವ್ಯಾಪಾರ ಒಪ್ಪಂದ ಅಥವಾ ವಿಶ್ವ ವ್ಯಾಪಾರ ಸಂಸ್ಥೆಯೊಂದಿಗಿನ ಬದ್ಧತೆಗಳನ್ನು ಉಲ್ಲಂಘಿಸುತ್ತದೆ.
ತತ್ಸಂಬಂಧ ಪ್ರಸಕ್ತ ಭಾರತ ಆಸಿಯನ್‌ನಲ್ಲಿ ಹಾಗೂ ಇತರ ರಾಷ್ಟ್ರಗಳಲ್ಲಿ ಪ್ರಾದೇಶಿಕ ವ್ಯಾಪ್ರವಾದ ಆರ್ಥಿಕ ಪಾಲುದಾರಿಕೆಯ ಒಪ್ಪಂದದಡಿ ಉದಾರ ನಿಯಮಗಳಿಗಾಗಿ ಆಸ್ಪದಗಳಿಗೆ ಗಮನಹರಿಸುತ್ತಿದೆ.
ಭಾರತೀಯ ಐಟಿ ಕಂಪೆನಿಗಳಿಗೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಚೀನಾದಂತಹ ದೇಶಗಳು ವೀಸಾ ನಿಯಮಗಳಿಗೆ ಹಾಕಿರುವ ಕಟ್ಟುಪಾಡುಗಳು ವಿಶ್ವ ವ್ಯಾಪಾರ ಸಂಸ್ಥೆ ಅಥವಾ ಭಾರತದೊಂದಿಗೆ ಮಾಡಿರುವ ಒಪ್ಪಂದಕ್ಕೆ ವಿರುದ್ಧವಾಗಿರುತ್ತದೆ ನಾಸ್ಕಾಂ ಅಧ್ಯಯನದಿಂದ ಗೊತ್ತಾಗಿದೆ.
ವಿಶ್ವ ವ್ಯಾಪಾರ ಕೇಂದ್ರದಲ್ಲಿ ಈ ರಾಷ್ಟ್ರಗಳು ಹೊಂದಿರುವ ಬದ್ಧತೆಗೂ ಭಾರತದೊಂದಿಗಿನ ಒಪ್ಪಂದಕ್ಕೂ ಈ ದೇಶಗಳ ಹೊಸ ವೀಸಾ ನಿಯಮ ತಾಳೆಯಾಗುತ್ತಿಲ್ಲ. ಅಲ್ಲದೆ ಬದ್ಧತೆ ಉಲ್ಲಂಘನೆಯೂ ಆಗಿದೆ ಎಂದು ವರದಿಯೊಂದು ತಿಳಿಸಿದೆ.
ಆಸಿಯಾನ್ ಮತ್ತು ಚೀನಾ, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಂತಹ ಇತರ ದೇಶಗಳೊಂದಿಗೆ ಭಾರತ ಹೊಂದಿರುವ ಉದಾರ ನಿಯಮಗಳನ್ವಯ ಪ್ರಾದೇಶಿಕ ವ್ಯಾಪಕ ಆರ್ಥಿಕ ಪಾಲುದಾರಿಕೆ ಒಪ್ಪಂದದಡಿ ಮಾಹಿತಿ ತಂತ್ರಜ್ಞಾನದ ಆಸ್ಪದಗಳಿಗಾಗಿ ಒತ್ತಾಯಪಡಿಸಲಾಗುತ್ತದೆ ಎಂದು ನಾಸ್ಕಾಂ ಹೇಳಿದೆ.
ಅಮೆರಿಕ, ಕೆನಡಾದ ವೀಸಾ ನಿಯಮ ಕಟ್ಟು ಪಾಡುಗಳಷ್ಟೇ ಆಗಿರದೆ ಇತರ ವಿಷಯಗಳಿಂದಲೂ ಭಾರತೀಯ ಐಟಿ ರಂಗದ ವಿಸ್ತರಣಾ ಅಭಿಯಾನವು ಇದೀಗ ಸ್ಥಗಿತವಾಗಿದೆ. ಹಾಗಾಗಿ ಭಾರತ ಆಸಿಯಾನ್ ಹಾಗೂ ಇತರ ದೇಶಗಳೊಂದಿಗೆ ಮಾಡಿರುವ ಒಪ್ಪಂದಡಿ ಅವಕಾಶಕ್ಕಾಗಿ ಮುಖಮಾಡಿದೆ.

LEAVE A REPLY