ಅಮೆರಿಕದಲ್ಲಿ ತೆಲಂಗಾಣದ ವೈದ್ಯನ ಬರ್ಬರ ಹತ್ಯೆ

ಕಾನ್ಸಾಸ್ (ಅಮೆರಿಕಾ): ಅಮೆರಿಕಾದ ಕಾನ್ಸಾಸ್ ನಗರದಲ್ಲಿ ತೆಲಂಗಾಣ ಮೂಲದ ವೈದ್ಯ ಅಚ್ಯುತರೆಡ್ಡಿ ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನೆಲಗೊಂಡ ಮೂಲದವರಾದ ವೈದ್ಯ ಅಚ್ಯುತರೆಡ್ಡಿ ತನ್ನ ಕಾನ್ಸಾಸ್‌ನ ಕ್ಲಿನಿಕ್‌ನಲ್ಲಿರುವಾಗಲೇ ಹಲವು ಬಾರಿ ಇರಿದು ಹತ್ಯೆ ಮಾಡಲಾಗಿದೆ. ಅವರ ಬಳಿ ಚಿಕಿತ್ಸೆಪಡೆಯುತ್ತಿದ್ದ ರೋಗಿಯೇ ಅವರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದು, ಈ ಸಂಬಂಧ 21 ವರ್ಷದ ಯುವಕನೋರ್ವನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ರೆಡ್ಡಿ ಕಳೆದ 2 ದಶಕಗಳಿಂದ ಕಾನ್ಸಾಸ್ ನಗರದಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಘಟನೆಯ ಬಗ್ಗೆ ಅಮೆರಿಕಾದಲ್ಲಿರುವ ಭಾರತೀಯ ನಿವಾಸಿಗಳು ದಿಗ್ಭ್ರಮೆ ವ್ಯಕ್ತಪಡಿಸಿ, ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದಷ್ಟೆ ತೆಲಂಗಾಣದ ಸಾಫ್ಟ್‌ವೇರ್ ಇಂಜಿನಿಯರ್ ಶ್ರೀನಿವಾಸ್ ಕೋಚಿಬೊತ್ಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬೆನ್ನಲ್ಲೆ ಅಮೆರಿಕಾದ ಕಾನ್ಸಾಸ್ ನಗರದಲ್ಲಿ ಈ ಘಟನೆ ನಡೆದಿದ್ದು, ರೆಡ್ಡಿ ಕಾನ್ಸಾಸ್ ನಗರದಲ್ಲಿ ಕೊಲೆಯಾದ 2ನೇ ತೆಲಂಗಾಣದ ವ್ಯಕ್ತಿಯಾಗಿದ್ದಾರೆ.

LEAVE A REPLY