ಎಚ್ಚರಿಕೆಯ ಬಳಿಕವೂ ಜಪಾನ್ ಮೇಲೆ ಮತ್ತೆ ಹಾರಿತು ಉತ್ತರ ಕೊರಿಯಾ ಮಿಸ್ಸೈಲ್!

ಟೊಕಿಯೊ: ಜಪಾನ್‌ನ ಹೊಕ್ಕಾಯ್ಡೋ ದ್ವೀಪದ ಮೇಲೆ ಇಂದು ಕ್ಷಿಪಣಿ ದಾಳಿ ನಡೆಸುವ ಮೂಲಕ ಉತ್ತರ ಕೊರಿಯಾ ತನ್ನ ಉದ್ಧಟತನ ಮುಂದುವರಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಸಮಿತಿ ಕಠಿಣ ನಿರ್ಬಂಧ ಹೇರಿರುವ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ. ಇಂದು ಬೆಳಗ್ಗೆ ಉತ್ತರ ಕೊರಿಯಾ ನಡೆಸಿದ ಪರೀಕ್ಷೆಯಲ್ಲಿ, ಕ್ಷಿಪಣಿ ಸುಮಾರು 2 ಸಾವಿರ ಕಿ.ಮೀ. ಕ್ರಮಿಸಿ, ಜಪಾನ್‌ನ ಹೊಕ್ಕಾಯ್ಡೋ ದ್ವೀಪದ ಮೇಲೆ ಹಾದುಹೋಗಿದ್ದು, ಬಳಿಕ ಫೆಸಿಫಿಕ್ ಸಾಗರದಲ್ಲಿ ಬಿದ್ದಿದೆ. ಈ ಘಟನೆಯನ್ನು ಜಪಾನ್ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೊಶಿಹೈಡ್ ಸುಗ ಸ್ಟಷ್ಟ ಪಡಿಸಿದ್ದಾರೆ. ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆಯನ್ನು ಜಪಾನ್ ಪ್ರಧಾನಿ ಶಿಂಜೊ ಅಬೆ ತ್ರೀವವಾಗಿ ಖಂಡಿಸಿದ್ದಾರೆ.
ಕಳೆದ ಆಗಸ್ಟ್ ೨೬ರಂದು ಉತ್ತರ ಕೊರಿಯಾ ಒಂದೇ ದಿನ ಮೂರು ಬಾಲಿಸ್ಟಿಕ್ ಕ್ಷಿಪಣಿಗಳನ್ನು ಜಪಾನ್ ಮೇಲೆ ಪ್ರಯೋಗಿಸಿತ್ತು. ಆದರೆ, ಆ ಮೂರು ಪ್ರಯೋಗಗಳು ವಿಫಲವಾಗಿದ್ದವು. ಇದಲ್ಲದೆ, ನಿನ್ನೆಯಷ್ಟೆ ’ಅಣು ಬಾಂಬ್ ಮೂಲಕ ಜಪಾನ್‌ನ ನಾಲ್ಕು ಪ್ರಮುಖ ದ್ವೀಪಗಳನ್ನು ಮುಳುಗಿಸಿ, ಅಮೆರಿಕಾವನ್ನು ಬೂದಿ’ ಮಾಡುವ ಬೆದರಿಕೆಯನ್ನು ಉತ್ತರ ಕೊರಿಯಾ ಒಡ್ಡಿತ್ತು.

LEAVE A REPLY