ಚಂದ್ರನ ಮೇಲ್ಮೈಯಲ್ಲಿರುವ ಮಣ್ಣಿನಲ್ಲಿ ನೀರು: ವಿಜ್ಞಾನಿಗಳಿಂದ ನೀರಿನ ನಕ್ಷೆ ರಚನೆ

ಹೊಸದಿಲ್ಲಿ: ಚಂದ್ರನ ಮೇಲ್ಮೈಯಲ್ಲಿರುವ ಮಣ್ಣಿನಲ್ಲಿ ನೀರು ಪತ್ತೆಯಾಗಿದ್ದು, ಭಾರತದ ಬಾಹ್ಯಾಕಾಶ ನೌಕೆ ಚಂದ್ರಯಾನ-೧ರಲ್ಲಿನ ಉಪಕರಣ ಬಳಸಿ ವಿಜ್ಞಾನಿಗಳು ನೀರಿನ ಪತ್ತೆ ಕುರಿತು ಮೊದಲ ಜಾಗತಿಕ ನಕ್ಷೆಯನ್ನು ರಚಿಸಿದ್ದಾರೆ.
ವಿಜ್ಞಾನಿಗಳು ನಡೆಸಿರುವ ಈ ಅಧ್ಯಯನವು ಭವಿಷ್ಯದಲ್ಲಿ ಚಂದ್ರನ ಕುರಿತ ಅಧ್ಯಯನಕ್ಕೆ ಉಪಯೋಗವಾಗಲಿದೆ. ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು, ನಾಸಾದ ಮೂನ್ ಮೈನ್‌ರಾಲಜ್ ಮ್ಯಾಪರ್ (ಚಂದ್ರನ ಖನಿಜ ಮಾಪಕ)ದಿಂದ ಮಾಹಿತಿಯ ಹೊಸ ಮಾಪನಾಂಕವನ್ನು ಬಳಸಿದ್ದಾರೆ. ಈ ಮಾಪನಾಂಕವು ಚಂದ್ರಯಾನ-೧ ಬಾಹ್ಯಾಕಾಶ ನೌಕೆಗೆ ಹಾರಿ ಸದ್ಯ ಜಾಗತಿಕ ಮಾಪಕದಲ್ಲಿ ನೀರಿನ ಲಭ್ಯತೆ ಬಗ್ಗೆ ಮಾಹಿತಿ ನೀಡುವುದಾಗಿದೆ.
ಚಂದ್ರನ ಮೇಲ್ಮೈಯ ಸಾಮಾನ್ಯವಾಗಿ ಎಲ್ಲೆಡೆ ನೀರಿದ್ದು, ಈ ಹಿಂದೆ ವರದಿಯಾಗಿರುವಂತೆ ಧ್ರುವ ಪ್ರದೇಶಗಳಿಗಷ್ಟೇ ಸೀಮಿತವಾಗಿಲ್ಲ ಎಂದು ಬ್ರೌನ್ ವಿಶ್ವವಿದ್ಯಾಲಯದ ಮಾಜಿ ಪಿಎಚ್‌ಡಿ ವಿದ್ಯಾರ್ಥಿ ಶೈಲಿ ತಿಳಿಸಿದ್ದಾರೆ.
ಧ್ರುವಗಳೆಡೆಗೆ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ಹಾಗೆಯೇ ವಿಭಿನ್ನ ಸಂಯೋಜಿತ ಭೂಪ್ರದೇಶಗಳಲ್ಲಿ ಇದು ಮಹತ್ವದ ವ್ಯತ್ಯಾಸವನ್ನು ತೋರಿಸುವುದಿಲ್ಲ ಎಂದು ಹವಾಯಿ ವಿಶ್ವವಿದ್ಯಾಲಯದಲ್ಲಿ ಸದ್ಯ ಸಂಶೋಧಕರಾಗಿರುವ ಲಿ ಹೇಳಿದ್ದಾರೆ.

LEAVE A REPLY