ಕೊಲ್ಲಿ ದೇಶಗಳಲ್ಲೂ ಮರಳು ಅಭಾವ: ಜಲಕಂಟಕ ಈ ಮರಳು ದಂಧೆ

ಹೊಸದಿಲ್ಲಿ : ಅಭಾವವಿದೆ ಎಂಬುದನ್ನು ತೋರಿಸದಂತೆ ಮರಳಿನ ಅವ್ಯವಸ್ಥಿತ ಗಣಿಗಾರಿಕೆ ಎಲ್ಲೆಡೆ ನಡೆಯುತ್ತಿದೆ.
ಭೂಮಿಯ ಹಲವು ಇತರ ಸಂಪನ್ಮೂಲಗಳಂತೆ ಮರಳು ಇರದೆ, ಭೂಮಿಯಲ್ಲಿ ಮತ್ತೆ ತುಂಬುವ ಮೊದಲೇ ಮರಳು ವಿಶ್ವಾದ್ಯಂತ ಹೆಚ್ಚುತ್ತಿರುವ ಜನಸಂಖ್ಯೆಗೆ ಸೂರು ನೀಡುವ ಕಟ್ಟಡ ರಚನಾ ಉನ್ಮಾದಕ್ಕೆ ಭರದಿಂದ ಬಲಿಯಾಗುತ್ತಿದೆ. ಅವ್ಯವಸ್ಥಿತ ಗಣಿಗಾರಿಕೆ ಮತ್ತು ಮರಳು ಬಳಕೆ ಕುರಿತು ಎಲ್ಲರೂ ಅರಿಯಬೇಕಾದ ವಿಚಾರಗಳು ಹೀಗಿವೆ
1. ಮರಭೂಮಿಯಿಂದ ಮರಳನ್ನೇಕೆ ನಾವು ಪಡೆಯುತ್ತಿಲ್ಲ ? ಕಟ್ಟಡ ನಿರ್ಮಾಣಕ್ಕಾಗಿ ಬಳಕೆಯಾಗುವ ಮರಳು ನದಿ ಪಾತ್ರ ಮತ್ತು ಸಾಗರ ಪಾತ್ರದಿಂದ ಬರುತ್ತಿದೆ. ಮರಭೂಮಿ ಮರಳು ಕಟ್ಟಡ ನಿರ್ಮಾಣಕ್ಕೆ ಸೂಕ್ತವಾಗಿಲ್ಲ.
2. ಮರಳಿಗೇಕೆ ಇಂತಹ ಮಹತ್ವ ? ನೀರಿನ ನಂತರ ಮರಳು ಮುಖ್ಯ. ಕಾಂಕ್ರೀಟ್, ಇಟ್ಟಿಗೆ, ಗ್ಲಾಸು ಇವೆಲ್ಲ ಕಟ್ಟಡ ನಿರ್ಮಾಣದ ಮುಖ್ಯ ವಸ್ತುಗಳು. ಮರಳು ಬಳಸಿಯೇ ಇವನ್ನು ತಯಾರಿಸಲಾಗುತ್ತದೆ. ನೀರಿನ ನಂತರ ನೈಸರ್ಗಿಕವಾಗಿ ಮರಳು ಬಳಕೆ ದ್ವಿತೀಯ ಸ್ಥಾನದಲ್ಲಿದೆ. ಜಾಗತಿಕ ಗಣಿಗಾರಿಕೆಯಲ್ಲಿ ಮರಳಿನ ಪ್ರಮಾಣವು ಶೇ. ೮೫ರಷ್ಟಾಗಿರುತ್ತದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.
3. ಅರಬ್ ರಾಷ್ಟ್ರಗಳೂ ಮರಳು ಖರೀದಿ ಮಾಡುತ್ತಿವೆ. ಸಮುದ್ರ ತಟದ ಮರಳು ಖಾಲಿಯಾದ ಮೇಲೆ ದುಬೈ ಇದೀಗ ಆಸ್ಟ್ರೇಲಿಯಾದಿಂದ ಮರಳನ್ನು ಆಮದಿಸುತ್ತದೆ. ೨೦೧೪ರಲ್ಲಿ ಯುಎಇ ೪೫.೬ ಕೋಟಿ ಡಾಲರ್ ಮೌಲ್ಯದ ಮರಳು ಹಾಗೂ ಕಲ್ಲನ್ನು ಆಮದು ಮಾಡಿದೆ ಎಂದು ಬಿಬಿಸಿ ಹೇಳುತ್ತದೆ.
4. ಹತೋಟಿಯಲ್ಲಿಲ್ಲದ ಮರಳು ಗಣಿಗಾರಿಕೆ ಅಪಾಯಕಾರಿ ನದಿ ತಳ ಭಾಗದಲ್ಲಿ ಮರಳು ಪ್ರಕೃತಿದತ್ತ ಹಾಸು. ಮರಳಿನ ಹಾಸನ್ನು ಸವಕಳಿ ಹೆಚ್ಚಿದಂತೆ ಕೆಳಪ್ರವಾಹವು ದುಮ್ಮಿಕ್ಕುತ್ತದೆ. ನದಿ ಪಾತ್ರದ ವಾಹಿನಿಯಲ್ಲಿ ಬದಲಾವಣೆಯಾಗಿ ನದಿಗಳ ಆಳ ಕೂಡ ಹೆಚ್ಚಬಹುದು. ಸ್ಥಳೀಯ ಭೂ ಅಂತರ್ಗತ ಜಲಮಟ್ಟದಲ್ಲೂ ಏರುಪೇರಾಗಿ ನೀರಿನ ಅಭಾವ ತಟ್ಟಬಹುದು.
5. ಇದೀಗ ಮರಳು ಗಣಿಗಾರಿಕೆ ಜಾಗತಿಕ ಬೆದರಿಕೆಯಾಗಿದೆ. ಮರಳು ಡ್ರೆಜ್ಜಿಂಗ್‌ನಿಂದಾಗಿ ಚೀನಾದ ಅತಿದೊಡ್ಡ ಸರೋವರವಾದ ಪೊಯಾಂಗ್ ಸರೋವರ ನೀರಿಲ್ಲದೆ ಬರಡಾಗಿದೆ. ಕಿನ್ಯಾದಲ್ಲಿ ನದಿ ಪಾತ್ರಗಳಿಂದ ಮರಳು ಡ್ರೆಜ್ಜಿಂಗ್‌ನಿಂದ ಗ್ರಾಮಾಂತರ ಹಳ್ಳಿಗಳಲ್ಲಿ ನೀರಿಗಾಗಿ ಜನರು ಅಲೆದಾಡುತ್ತಿದ್ದಾರೆ.
6. ಭಾರತದಲ್ಲಿ ಎಂತಹ ಅಪಾಯ ಬಂದಿದೆ ? ಕೇರಳದಲ್ಲಿ ಮುಖ್ಯ ನದಿಗಳಾದ ಪಂಪಾ, ಮಣಿಮಾಲಾದ ಜಲಮಟ್ಟ ಕುಸಿದು ಅಂತರ್ಜಲ ಮಟ್ಟಗಳಲ್ಲಿ ತೀವ್ರ ಇಳಿಕೆಯಾಗಿದೆ. ಉತ್ತರಪ್ರದೇಶದ ಗಂಡಕ್, ಛೋಟಿ, ಗುರ್ರಾ, ಘಾಘ್ರಾ, ಪಪ್ತಿ ನದಿಪಾತ್ರಗಳಲ್ಲಿ ಮರಳು ಗಣಿಗಾರಿಕೆಯಿಂದಾಗಿ ಸಹಸ್ರಾರು ಎಕ್ರೆ ಜಮೀನು ಬರಡಾಗಿದೆ. ತನ್ಮೂಲಕ ವಾರ್ಷಿಕವಾಗಿ 1,000 ಕೋ. ರೂ. ಅಕ್ರಮ ಮರಳು ದಂಧೆಗೆ ನದಿಪಾತ್ರಗಳು ಬಲಿಯಾಗಿವೆ.

LEAVE A REPLY